ನೈತಿಕ ಹೊಣೆಹೊತ್ತು ಸಿಎಂ ರಾಜೀನಾಮೆ ನೀಡಲಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.12:- ವಾಲ್ಮೀಕಿ ನಿಗಮದ ಹಗರಣದಲ್ಲಿ ಹಣಕಾಸು ಇಲಾಖೆಯ ನಂಟು ಸ್ಪಷ್ಟವಾಗಿದ್ದು, ಸಮಾಜವಾದಿ ಎಂದೆಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಆಗ್ರಹಿಸಿದರು.
ಮೈಸೂರಿನ ಜಲದರ್ಶಿನಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆ ಆಗಿದೆ. ಸಿದ್ದರಾಮಯ್ಯ ಅವರೇ ಹಣಕಾಸು ಸಚಿವರಾಗಿದ್ದು, ಅವರ ಅನುಮತಿ ಇಲ್ಲದೆಯೇ ವರ್ಗಾವಣೆ ಸಾಧ್ಯವೇ’ ಎಂದು ಪ್ರಶ್ನಿಸಿದರು. ಈ ಹಿಂದೆ ಟೆಲಿಫೆÇೀನ್ ಕದ್ದಾಲಿಕೆ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆ, ಮತ್ತೊಂದು ಪ್ರಕರಣದಲ್ಲಿ ಕಂಪ್ಯೂಟರ್ ಹಗರಣ ಆರೋಪಕ್ಕೆ ಎಸ್. ಬಂಗಾರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಸಹ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು. ಆರೋಪ ಮುಕ್ತರಾದಲ್ಲಿ ಮತ್ತೆ ಮುಖ್ಯಮಂತ್ರಿ ಆಗಲಿ ಎಂದರು.
ಸಿಬಿಐ ತನಿಖೆಗೆ ಒತ್ತಾಯ: ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರಿಗೆ 50:50 ಅನುಪಾತದಲ್ಲಿ ನಿವೇಶನ ಕೊಟ್ಟಿರುವುದು ತಪ್ಪಲ್ಲ. ಆದರೆ, ಅಧಿಕಾರಿಗಳು ಸಮಾನಾಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕಿತ್ತು. ಡಿನೋಟಿಫೈ ಮಾಡಲು ಪ್ರಭಾವ, ಜಮೀನಿನ ಅಕ್ರಮ ನೋಂದಣಿ ವಿಚಾರ ನಿಜವೇ ಆಗಿದ್ದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಮುಡಾ ಹಗರಣದಲ್ಲಿ ಸಿಎಂ ಕುಟುಂಬದ ಹೆಸರು ಕೇಳಿ ಬಂದಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಮುಡಾ ಹಗರಣದಲ್ಲಿ ದೊಡ್ಡ ದೊಡ್ಡ ಕೈಗಳಿವೆ. ಆದ್ದರಿಂದ ತನಿಖೆಯನ್ನು ಸಿಬಿಐಗೆ ನೀಡಲಿ ಎಂದು ಒತ್ತಾಯಿಸಿದರು.
ಇನ್ನೂ ಮುಡಾ ಹಗರಣ ಕುರಿತು ಜೆಡಿಎಸ್ ಯಾವುದೇ ಹೋರಾಟಕ್ಕೆ ಮುಂದಾಗದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಯಿಸಿದ ಜಿ.ಟಿ.ದೇವೇಗೌಡ ಜು.15ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತದೆ. ಅಲ್ಲಿ ಸರ್ಕಾರಗಳ ವಿರುದ್ಧ ಹೋರಾಟ ಹೇಗಿರುತ್ತದೆ ಎಂಬುದನ್ನು ಕಾದು ನೋಡಿ. ಮುಡಾದಲ್ಲಿ ನಾನಾಗಲಿ, ಎಂಎಲ್?ಸಿ ಮಂಜೇಗೌಡ ಅಥವಾ ಸಿಎಂ ಆಗಲೀ ಯಾರೇ ತಪ್ಪು ಮಾಡಿದ್ದರೂ ತಪ್ಪೇ. ಮುಂದುವರೆದು, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಮುಡಾದಲ್ಲಿ ಹೆಚ್ಚಿನ ಭ್ರಷ್ಟಾಚಾರಗಳಾಗಿವೆ. ಮುಡಾ ಮೀಟಿಂಗ್‍ಗೆ ಬರುವ ಪ್ರತಿ ಫೈಲ್‍ಗಳನ್ನೂ ನಾವೆಲ್ಲಾ ಪರಿಶೀಲನೆ ಮಾಡಲು ಸಾಧ್ಯವಿಲ್ಲ. ಅಧಿಕಾರಿಗಳು ಎಲ್ಲವನ್ನೂ ಪರಿಶೀಲಿಸಿ ನಂತರ ಎಲ್ಲಾ ಫೈಲ್?ಗಳನ್ನು ಸಭೆಗೆ ತಂದಿಡುವುದು ಸಾಮಾನ್ಯ. ಆಗ ನಾವು ಸರಿಯೆಂದು ಒಪ್ಪಿಗೆ ಕೊಡುತ್ತೇವೆ. ಮುಡಾದಲ್ಲಿ ಅಧಿಕಾರಿಗಳ ಆಟ ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ಎಲ್ಲವೂ ನಡೆಯುತ್ತಿದೆ” ಎಂದು ದೂರಿದರು.
ನಾನೂ ಕೆಲವು ಸೈಟು ಮಾಡಿಕೊಂಡಿದ್ದೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ. “ನನ್ನ ಬಳಿ ನೂರಲ್ಲ, ಒಂದೇ ಒಂದು ಸೈಟ್ ಸಹ ಇಲ್ಲ. ನನ್ನ ಹೆಸರಿನಲ್ಲಿ ಯಾವುದೇ ಹೋಟೆಲ್?, ಆಸ್ತಿ, ಪೆಟ್ರೋಲ್? ಬಂಕ್? ಇಲ್ಲ. ನಾನೊಬ್ಬ ರೈತನ ಮಗ. ಸ್ವಾಭಿಮಾನ, ಮಾರ್ಯಾದೆ ಎಲ್ಲವನ್ನೂ ಉಳಿಸಿಕೊಂಡು ಪ್ರಾಮಾಣಿಕ ರಾಜಕಾರಣ ಮಾಡುತ್ತಿದ್ದೇನೆ. ನಾನಾಗಲಿ ಅಥವಾ ನನ್ನ ಕುಟುಂಬದವರ ಹೆಸರಲ್ಲಿ ಯಾವುದೇ ವಹಿವಾಟು, ಮುಡಾ ನಿವೇಶನ ಇಲ್ಲ. ಹಾಗೆನಾದರೂ ಇರುವ ದಾಖಲೆ ಕೊಟ್ಟರೆ ಅದನ್ನು ಜನರಿಗೆ ಹಂಚಿ ಬಿಡುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಚುನಾವಣೆಯಲ್ಲಿ ನಾನು ನನ್ನ ಸ್ನೇಹಿತ 25 ಸಾವಿರ ಖರ್ಚು ಮಾಡಿದ್ದೇನೆ. 2004 ರ ತನಕ ನಾನು ಸಿದ್ದರಾಮಯ್ಯ ಜೊತೆಗಿದ್ದು, ಆಮೇಲೆ ದೇವೇಗೌಡರ ಜೊತೆ ಸೇರಿ ಬೆಳೆದು ಬಂದಿದ್ದೇನೆ. ಯಡಿಯೂರಪ್ಪ ಜೊತೆ ಸೇರಿದ್ದೇನೆ. ಆಗ ದುಡ್ಡು ತೆಗೆದುಕೊಂಡು ಸೇರಿದ ಅಂತ ಆರೋಪ ಮಾಡಿದ್ದರು. ಆಗಲೂ ನಾನು ಯಾವ ದುಡ್ಡು ತೆಗೆದುಕೊಂಡಿಲ್ಲ. ಈ ಬಗ್ಗೆ ಸಭೆಯಲ್ಲಿ ಯಡಿಯೂರಪ್ಪ ಮುಂದೆಯೇ ಹೇಳಿದ್ದೇನೆಂದರು.ನಾನು ಯಾವುದೇ ಅಕ್ರಮ ಮಾಡಿಲ್ಲ. ನಮ್ಮ ಕುಟುಂಬದ ಯಾವುದಾದರೂ ಪೆಟ್ರೋಲ್ ಬಂಕ್, ಹೋಟೆಲ್ , ರೆಸಾರ್ಟ್ ಏನಾದ್ರೂ ಇದೇ ಎಂದು ತೋರಿಸಿ ಎಲ್ಲವನ್ನೂ ಬಿಟ್ಟು ಕೊಡುತ್ತೇನೆಂದರು.
ನನ್ನ ಹೆಸರಿನಲ್ಲಿ 1 ಸೈಟು ಅಕ್ರಮವಿದ್ರು ಬರೆದು ಕೊಡುತ್ತೇನೆ. ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮುಡಾ ಬಡವರಿಗೆ ನಿವೇಶನ ಕೊಡುವ ಸಂಸ್ಥೆಯಾಗಿದ್ದು, ನಾಲ್ವಡಿಯವರು ಕಟ್ಟಿ ಬೆಳೆಸಿದನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.ಕಾಂಗ್ರೆಸ್ ನಾಯಕರ ರೀತಿ ದಿನಕ್ಕೊಂದು ರೀತಿ ಹೇಳಿಕೆ ಕೊಡುತ್ತಾ, ಪ್ರಚಾರ ಮಾಡೋ ಗುಣ ನನ್ನದಲ್ಲ ಎಂದು ಹೇಳಿದರು.
ಸರ್ಕಾರದಿಂದ ತನಿಖೆ ಮಾಡುತ್ತಿದ್ದಾರೆ. ಇನ್ನೂ ಐ.ಎ.ಎಸ್ ಅಧಿಕಾರಿಗಳು ಇನ್ನೂ ತನಿಖೆ ವರದಿ ಕೊಟ್ಟಿಲ್ಲ. ಯಾರು ಮಾಡಿದ್ದಾರೆ ಏಷ್ಟು ಕೋಟಿ ಹಣ ಲೂಟಿ ಆಗಿದೆ ಎಲ್ಲವೂ ತನಿಖೆಯಿಂದ ಹೊರ ಬರಬೇಕು. ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ಇದೆ. ಅವರದೇ ಊರಿನಲ್ಲಿ ಸಾವಿರಾರು ಕೋಟಿ ಅಕ್ರಮ ಎಂಬ ಆರೋಪವಿದೆ. ತನಿಖೆ ಆಗಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು.
ಪ್ರಭಾವ ಬೀರಿದಂತಿದೆ:ದಾಖಲಾತಿ ಸರಿಯಿದ್ದರೆ ಸೈಟು ಕೊಡಿ ಎಂದು ಹೇಳಿದ್ದೇವು. ನಿಜವಾದ ರೈತರಿಗೆ 50:50 ಅನುಪಾತದಲ್ಲಿ ಸೈಟು ಕೊಡಿ ಎಂದು ಹೇಳಿದ್ದೇವು.ಆದರೆ, ಅದರಲ್ಲಿ ಮೋಸ ಆಗಿದ್ದರೆ ರೈತರ ಹೆಸರಿನಲ್ಲಿ ಮೋಸ ಮಾಡಿರುವವರಿಗೆ, ಹಣ ಪಡೆದು ಸೈಟು ಪಡೆದವರಿಗೆ ಶಿಕ್ಷೆ ಆಗಲಿ. 3.16 ಗಂಟೆ ಸಿದ್ದರಾಮಯ್ಯನವರ ಪತ್ನಿಯ ಜಮೀನಿಗೆ 50:50 ಅನುಪಾತದಲ್ಲಿ ಸೈಟು ಕೊಡ್ಬೇಕು ಅಂತ ಸಭೆಯಲ್ಲಿ ತೀರ್ಮಾನ ಆಗಿತ್ತು. ಆದರೆ, ಆ ವೇಳೆ ದಾಖಲೆ ಸರಿಯಿದ್ದರೆ ಕೊಡಿ ಎಂಬ ಒಮ್ಮತದ ತೀರ್ಮಾನ ಮಾಡಿದೆವು. ಆದರೆ, ಭೂಮಿ ಡಿ ನೋಟಿಫೈ ಸೇರಿ ಯಾವುದೇ ಅಕ್ರಮ ನಡೆದಿದ್ದರೆ ಶಿಕ್ಷೆಯಾಗಲಿ, ತನಿಖೆಯೂ ನಡೆಯಲಿ. ಆದರೆ, ಅವರು ಅಂದು ಅಧಿಕಾರಿಗಳ ಮೇಲೆ ಪ್ರಭಾವ ಬೀರಿರುವ ಆರೋಪ ಕೇಳಿ ಬರುತ್ತಿದೆ. ಅದು ಸಾಬೀತಾದರೆ ರಾಜೀನಾಮೆ ಕೊಡಲಿ. ಸಿಎಂ ಮೇಲೆ ಆರೋಪ ಬರುತ್ತಿರುವುದರಿಂದ ಸಿಬಿಐ ಗೆ ಪ್ರಕರಣದ ತನಿಖೆ ವಹಿಸಲು ಆಗ್ರಹ ಮಾಡ್ತೀನಿ ಎಂದರು.
ಮುಡಾದಲ್ಲಿ ಶಾಸಕರ ಫೈಲ್ ಮಾತ್ರ ಪಾಸ್ ಎಂಬ ಎಸ್. ಟಿ ಸೋಮಶೇಖರ್ ಆರೋಪ ವಿಚಾರವಾಗಿ ಪ್ರತಿಕ್ರಯಿಸಿ, ನಮ್ಮಲ್ಲಿ ರಾಮದಾಸ್, ತನ್ವೀರ್ ಸೇಠ್, ನಾಗೇಂದ್ರ ಮೊದಲಾದವರಾರು ಸೈಟು ಕೊಡಿ ಅಂತ ಹೋಗಿಲ್ಲ. ನಾವು ಯಾರು ಸೈಟನ್ನು ತೆಗೆದುಕೊಂಡು ಇಲ್ಲ.ಸೋಮಶೇಖರ್ ಪತ್ರ ಬರೆದಿರುವುದು ನಮಗೆ ಗೊತ್ತಿಲ್ಲ.ನಮ್ಮ ಗಮನಕ್ಕೆ ತಂದಿಲ್ಲ.ಆಯುಕ್ತರ ಬದಲಾವಣೆಗೆ ಪತ್ರ ಬರೆದಿದ್ದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.