ಆರ್ಮ್‌ಸ್ಟಂಗ್ ಹತ್ಯೆ,ಸಿಬಿಐಗೆ ತನಿಖೆಗೆ ಆಗ್ರಹ
ಆನೇಕಲ್, ಜು. ೧೨- ಬಿಎಸ್ಪಿ ಪಕ್ಷದ ತಮಿಳುನಾಡು ರಾಜ್ಯದ ರಾಜ್ಯಾಧ್ಯಕ್ಷರಾಗಿದ್ದ ಆರ್ಮ್ ಸ್ಟಂಗ್ ರವರ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಹಾಗೂ ಕೊಲೆ ಮಾಡಿರುವ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ತಾಲ್ಲೂಕಿನ ಸರ್ಜಾಪುರದ ವೃತ್ತದಲ್ಲಿ ವಿಸಿಕೆ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಸಿ.ವೇಣು ರವರ ನೇತೃತೃದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ವಿಸಿಕೆ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಸಿ.ವೇಣುರವರು ಮಾತನಾಡಿ ದಲಿತರು/ಬಡವರ್ಗದ ಜನರು ರಾಜಕೀಯವಾಗಿ ಮೇಲೆ ಬರಬಾದರು, ಗುಲಾಮಗಿರಿಯಲ್ಲಿಯೇ ಬದುಕಬೇಕು ಎಂಬುವ ಉದ್ದೇಶದಿಂದ ಮನುವಾದಿಗಳು ದಲಿತರು/ಬಡವರ್ಗದ ಜನರ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ಮತ್ತು ಶೋಷಣೆಗಳನ್ನು ಶತ ಶತಮಾನಗಳಿಂದ ಮಾಡಿಕೊಂಡರು ಬರುತ್ತಿದ್ದಾರೆ ಉದಾಹರಣೆಗೆ ಇತ್ತೀಚೆಗೆ ನಡೆದ ಬಿಎಸ್ಪಿ ಪಕ್ಷದ ತಮಿಳುನಾಡು ರಾಜ್ಯದ ರಾಜ್ಯಾಧ್ಯಕ್ಷರಾಗಿದ್ದ ಆರ್ಮ್ ಸ್ಟಂಗ್ ರವರ ಕೊಲೆ ಪ್ರಕರಣ ಎನ್ನ ಬಹುದಾಗಿದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಪ್ರತಿಭಟನಾಕಾರರು ಸರ್ಜಾಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೊಲೆಗೈದ ಆರೋಪಿಗಳನ್ನು ಗಲ್ಲಿಗೇರಿಸ ಬೇಕೆಂದು ಆಗ್ರಹಿಸಿ ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಸ್ಥಳಕ್ಕೆ ಸರ್ಜಾಪುರ ಪೋಲಿಸರು ಆಗಮಿಸಿ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ವಿಸಿಕೆ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ವಿ.ಚಂದ್ರಶೇಖರ್, ವಿಸಿಕೆ ಪಕ್ಷದ ವರ್ತೂರು ಜೆ.ಕೃಷ್ಣಪ್ಪ. ವಿ.ರಾಜ್ ಕುಮಾರ್, ರಾಜಣ್ಣ, ಪ್ರಕಾಶ್, ಕೋಲಾರ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಆನೇಕಲ್ ತಾಲ್ಲೂಕು ಅಧ್ಯಕ್ಷ ಗೋಪಸಂದ್ರ ವೆಂಕಟೇಶ್, ಸುರೇಶ್ ಪ್ರಬುದ್ದ, ಕಾಡ ಅಗ್ರಹಾರ ಮಂಜು, ಪ್ರಕಾಶ್, ರಾಜುಗಾಂದಿನಗರ ಜಗದೀಶ್, ಮಟ್ನಹಳ್ಳಿ ಮಹೇಂದ್ರ, ಸತೀಶ್, ಮೇಡಹಳ್ಳಿ ರವಿ. ಮುತ್ತಾನಲ್ಲೂರು ಮುನಿರಾಜು, ವಕೀಲರಾದ ಪುರುಷೋತ್ತಮ್. ತಿಂಡ್ಲು ಚೌಡಪ್ಪ, ನಾರಾಯಣಸ್ವಾಮಿ, ಗೋಪಿ ಬಾಗವಹಿಸಿದ್ದರು.