ಪರಿಸರ ಸಂರಕ್ಷಣೆ ವಿದ್ಯಾರ್ಥಿಗಳ ಪಾತ್ರ ಮಹತ್ವ
ಕೋಲಾರ, ಜು,೧೨- ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದ್ದು ಎಲ್ಲರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಬಿ.ಆರ್.ಪಿ. ಮಂಜುಳಾ ರೆಡ್ಡಿ ತಿಳಿಸಿದರು.
ಮುಳಬಾಗಿಲು ತಾಲ್ಲೂಕಿನ ಆವನಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಸ್ಕೌಟ್ಸ್ -ಗೈಡ್ಸ್ ಸಂಸ್ಥೆ , ಶಾಲೆಯ ಇಕೋ ಕ್ಲಬ್ ವತಿಯಿಂದ ಶಾಲಾ ಆವರಣದಲ್ಲಿ ಬಿಜದ ಉಂಡೆ ತಯಾರಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಶಾಲಾ ಮಕ್ಕಳು ಬಾಲ್ಯದಿಂದಲೇ ಎಲ್ಲರೂ ಸೇರಿ ಪರಿಸರ ಸಂರಕ್ಷಣೆ ಒತ್ತು ನೀಡಬೇಕು, ಸಂಘ ಸಂಸ್ಥೆಗಳ ಸಹಕಾರ ಪಡೆದು ಗ್ರಾಮದ ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಕನಿಷ್ಠ ಒಂದು ವರ್ಷದ ಕಾಲ ಪೋಷಣೆ ಮಾಡಿದರೆ ,ಅದೇ ಗಿಡ ಮರವಾಗಿ ನಮಗೆ ನೆರವಾಗಲಿದೆ, ರೈತರು ತಮ್ಮ ಹೊಲ-ಗದ್ದೆಗಳ ಬದುಗಳ ಮೇಲೆ ಗಿಡಗಳನ್ನು ಬೆಳಸುವ ಮೂಲಕ ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಆರ್ಥೀಕವಾಗಿ ಸಹಾಯವಾಗುವ ರೀತಿ ಕ್ರಮ ಕೈಗೊಳ್ಳುವ ಮೂಲಕ ಅರಣ್ಯೀಕರಣವನ್ನು ಉತ್ತೇಜಿಸಬೇಕು ಎಂದು ತಿಳಿಸಿದರು.
ಸ್ಕೌಟ್ ಆಯುಕ್ತರಾದ ಕೆ.ಆರ್.ಸುರೇಶ್ ರವರು ಮಾತನಾಡಿ ರೈತರು ಗಿಡಗಳನ್ನು ಬೆಳಸಲು ಸರ್ಕಾರದಿಂದ ಉತ್ತಮ ಯೋಜನೆಗಳು ಹಾಗೂ ಉಚಿತ ಮಾರ್ಗದರ್ಶನ ಸಿಗುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಂಡು ಬರಡು ಭೂಮಿಯನ್ನು ಹಸಿರಾಗಿಸುವ ನಿಟ್ಟಿನಲ್ಲಿ ಕ್ರಮವಹಿಸಿದಾಗ ಆರ್ಥಿಕವಾಗಿ ಲಾಭಸಿಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ, ಸಹಕಾರ್ಯದರ್ಶಿ ಸ್ಕೌಟ್ ಬಾಬು, ಬಿ.ಆರ್.ಪಿ ಆರತಿ, ಮುಖ್ಯ ಶಿಕ್ಷಕರಾದ ಪ್ರಕಾಶ್, ಶಾಲಾ ಶಿಕ್ಷಕರಾದ ಭಾಗ್ಯ, ಮಂಜುಳ, ಸದಾನಂದ, ಶಿಲ್ಪ ಕುಮಾರಿ, ನಾಗಮಣಿ, ಶ್ವೇತಾ, ಚೈತ್ರ, ಅನಿತಾ, ವೆಂಕಟರಾಮ, ಶಶಿರೇಖಾ, ಅರುಣ್, ಶ್ರೀಲಕ್ಷ್ಮೀ, ಚಂದ್ರಪ್ಪ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.