ಮಾಂಸದ ಅಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ
ಕೋಲಾರ,ಜು.೧೨- ಕೋಲಾರ ನಗರಸಭೆ ಮಾಂಸ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಈ ರೀತಿ ಕುರಿ,ಕೋಳಿ,ಮೇಕೆಗಳನ್ನು ಮಾಂಸದ ಅಂಗಡಿ ಮುಂಭಾಗವೇ ಕಾನೂನು ಬಾಹಿರವಾಗಿ ಸಾರ್ವಜನಿಕರ ಮುಂದೆ ಕಡಿಯುತ್ತಾರೆ ಹಾಗೂ ಮಾರಾಟ ಮಾಡುತ್ತಾರೆ. ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಕೋಲಾರ ನಗರಸಭೆ ಆಡಳಿತಾಧಿಕಾರಿಗಳಾದ ಅಕ್ರಂ ಪಾಷರಲ್ಲಿ ಹಿರಿಯ ನಾಗರಿಕ ಒಕ್ಕೂಟದ ಸಂಚಾಲಕ ವಿ.ಮುನಿವೆಂಕಟೇಶ್ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಮಾಂಸ ಮಾರಾಟ ಮಾಡಲು ಕಡಿಯುತ್ತಿರುವ ಹಾಗೂ ಮಾರಾಟ ಮಾಡುತ್ತಿರುವ ಪೋಟೋಗಳನ್ನು ಕ್ಲಿಕ್ಕಿಸದೆ. ಕೋಲಾರ ನಗರಸಭೆ ಮಾಂಸ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಈ ರೀತಿ ಕುರಿ/ ಮೇಕೆಗಳನ್ನು ಮಾಂಸದ ಅಂಗಡಿ ಮುಂಭಾಗ ಕಾನೂನು ಬಾಹಿರವಾಗಿ ಸಾರ್ವಜನಿಕರ ಮುಂದೆ ಕಡಿಯುತ್ತಾರೆ ಹಾಗೂ ಮಾರಾಟ ಮಾಡುತ್ತಾರೆ.
ಈ ಮಾಂಸ ದೋಷ ಪೂರಿತವಾಗಿರುತ್ತದೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ ಹಾಗೂ ಇಲ್ಲಿ ಕೋವಿಡ್ -೧೯ನ್ನು ನೆನೆಪಿಸಿ ಕೊಳ್ಳ ಬೇಕು ಹಾಗೂ ಕುರಿ/ ಮೇಕೆ ಕಡಿಯುವ ಜಾಗದಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸದೆ ಇರುವುದನ್ನು ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರಸಭೆ ಅಧಿಕಾರಿಗಳು/ ಆರೋಗ್ಯ ಪರೀಕ್ಷಕರು (ಸೀನಿಯರ್ ಹೆಲ್ತ್ ಇನ್ಸ್‌ಪೆಕ್ಟರ್) ಇದ್ಯಾವುದರ ಪರಿವೇ ಇಲ್ಲದಂತೆ ವರ್ತಿಸುತ್ತಿರುವುದೆ ಬಗ್ಗೆ ಸಾರ್ವಜನಿಕರ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ತತ್ಸಂಬಂದ ಕೋಲಾರ ಜಿಲ್ಲಾಡಳಿತವು ಹಾಗೂ ಕೋಲಾರ ನಗರಸಭೆ ಆಡಳಿತಾಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಜರುಗಿಸುವಲ್ಲಿ ಮುಂದಾಗಬೇಕೆಂದು ನಗರ ವಾಸಿಗಳು ಒತ್ತಾಯಿಸಿದ್ದಾರೆ.
ಮುಂದುವರೆದು ಕೋಲಾರ ಜಿಲ್ಲಾಧಿಕಾರಿ ಹಾಗೂ ಕೋಲಾರ ನಗರಸಭೆ ಆಡಳಿತಾಧಿಕಾರಿಗಳು ಆಗಿರುವ ಅಕ್ರಂ ಪಾಷ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಜರುಗಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಕೆಲವು ನಿಯಮಗಳು (ಕೆ.ಎಂ.ಸಿ ಆಕ್ಟ್) ನಡಿ ನಮೂದಾಗಿರುವಂತೆ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.