ಹಾಲು ಪ್ರೋತ್ಸಾಹಧನ ಕಡಿತಗೊಳಿಸಿ ರೈತರ ಬೆನ್ನಿಗೆ ಚೂರಿ
ಚಿಕ್ಕಬಳ್ಳಾಪುರ, ಜು.12-ಹಾಲು ಖರೀದಿ ದರ ಇಳಿಸಿರುವುದನ್ನು ತಕ್ಷಣ ವಾಪಸ್ ಕೊಡಬೇಕೆಂದು ಆಗ್ರಹಿಸಿ ಚಿಕ್ಕಬಳ್ಳಾಪುರ ನಗರ ಹೊರ ವಲಯದ ಜಿಲ್ಲಾಡಳಿತ ಭವನ ಎದುರು ಸಂಸದ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವತಿಯಿಂದ ಒಂದು ದಿನದ ಮಟ್ಟಿಗೆ ಧರಣಿ ಸತ್ಯಾಗ್ರಹ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಸಂಸದ ಡಾಟ್ ಕೆ ಸುಧಾಕರ್ ಅವರು ಮಾತನಾಡಿ, ಹಾಲಿನ ಖರೀದಿ ದರ ೨ ರೂ. ಕಡಿತ, ಪ್ರೋತ್ಸಾಹಧನ ಬಾಕಿ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತ್ಯೇಕ ಹಾಲು ಒಕ್ಕೂಟ ರದ್ದು ಸೇರಿದಂತೆ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿರುವ ರೈತ ವಿರೋಧಿ ಧೋರಣೆಯಾಗಿದೆ ರೈತರಿಗೆ, ದಲಿತರಿಗೆ,ಹಿಂದುಳಿದ ವರ್ಗದ ಜನತೆಗೆ ಅನ್ಯಾಯ ಮಾಡಿರುವ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಒಳ್ಳೆಯದಾಗಲ್ಲ. ಚುನಾವಣೆ ಗೆಲ್ಲಲು ರೈತರ ಮತ ಪಡೆದ ಕಾಂಗ್ರೆಸ್ ಪಕ್ಷ, ಅಧಿಕಾರಕ್ಕೆ ಬಂದ ನಂತರ ರೈತರ ಹಾಲು ಪ್ರೋತ್ಸಾಹಧನವನ್ನು ೨ರೂ. ಕಡಿತಗೊಳಿಸಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆದು ಬದಲಿಗೆ ಪ್ರೋತ್ಸಾಹ ಧನವನ್ನ ಮೂರು ರೂಪಾಯಿ ಹೆಚ್ಚಿಸಬೇಕು ಎಂದ ಅವರು ಬೆಲೆ ಏರಿಕೆ ನಡುವೆ ಹೈನುಗಾರಿಕೆ ನಡೆಸುವುದು ಬಹಳ ಕಷ್ಟಕರವಾಗಿದ್ದು, ಆಹಾರ, ಮೇವಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಕಿಡಿ ಕಾರಿದರು.
ಸಂಸದರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾದ ಬಿಜೆಪಿ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಹಾಲು ಖರೀದಿ ದರ ಇಳಿಸಿರುವುದನ್ನು ತಕ್ಷಣ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಎಆS ಮಾಜಿ ಶಾಸಕ ಚಿಂತಾಮಣಿ ಕೃಷ್ಣಾರೆಡ್ಡಿ ಮಾತನಾಡಿ, ಕರ್ನಾಟಕ ಜನತೆ ಹೆಚ್ಚಾಗಿ ೫೦ ಗ್ರಾಂ ಹಾಲು ಕೊಡಿ ಎಂದು ಯಾರಾದ್ರೂ ಕೇಳಿದ್ರಾ..? ಮಾನ ಮಾರ್ಯಾದೆ ಇಲ್ಲದ ಲಜ್ಜೆಗೆಟ್ಟ ಸರ್ಕಾರ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಲು ನಾವು ಕೇಳಿದ್ವಾ. ಬೇಕಾಬಿಟ್ಟಿ ಆಡಳಿತ ನಡೆಸಿ ಹೈನುಗಾರರ ಜೀವನದ ಜೊತೆ ಚೆಲ್ಲಾಟ ಮಾಡುತ್ತಿದೆ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ಹಾಲು ಉತ್ಪಾದಕರ ಪ್ರಕೋಷ್ಠ ರಾಜ್ಯ ಸಂಚಾಲಕ ಬೇಲೂರು ರಾಘವೇಂದ್ರ ಶೆಟ್ಟಿ, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕ ಎಂ.ರಾಜಣ್ಣ, ಜಿ.ಪಂ. ಮಾಜಿ ಅಧ್ಯಕ್ಷ ಕೇಶವರೆಡ್ಡಿ,, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮುರಳೀಧರ್ , ಕೊಂಡೇನಹಳ್ಳಿ ಮುರಳಿ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಟಮಪ್ಪ
ಮುಖಂಡರಾದ ಸೀಕಲ್ ರಾಮಚಂದ್ರಗೌಡ, ರವಿನಾರಾಯಣ ರೆಡ್ಡಿ ಉಪಸ್ಥಿತರಿದ್ದರು.
ರಾಜಕೀಯ ದ್ವೇಷದಿಂದ ವಿಲೀನ
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಬೇರ್ಪಡಿಸಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ನೀಡಿದರೆ, ರಾಜಕೀಯ ದ್ವೇಷದಿಂದ ಅದನ್ನು ರದ್ದು ಮಾಡಿ ಮತ್ತೆ ವಿಲೀನ ಮಾಡಿದ್ದಾರೆ. ಹಾಲು ಉತ್ಪಾದಕರಿಗೆ ಸುಮಾರು ೭೦೦ ಕೋಟಿ ರೂ. ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಕಾಂಗ್ರೆಸ್ ಸರಕಾರ ಗ್ರಾಹಕರಿಗೆ ಹಾಲಿನ ದರದಲ್ಲಿ ೨ ರೂ. ಹೆಚ್ಚಳ ಮಾಡಿದ್ದರೂ, ಅದರಲ್ಲಿ ಸ್ವಲ್ಪ ಲಾ‘ವನ್ನೂ ರೈತರಿಗೆ ನೀಡಿಲ್ಲ. ಅದರ ಹೊರತಾಗಿಯೂ ಈಗ ಕೋಚಿಮುಲ್‌ನಲ್ಲಿ ರೈತರಿಂದ ಖರೀದಿ ಮಾಡುವ ಹಾಲಿನ ದರದಲ್ಲಿ ೨ ರೂ. ಇಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಹೆಚ್ಚು ಹಾಲು ಸಂಗ್ರಹವಾಗುತ್ತಿದ್ದರೆ ಅದರಿಂದ ಪನ್ನೀರು, ಐಸ್‌ಕ್ರೀಮ್ ಮೊದಲಾದ ಮೌಲ್ಯರ್ವತ ಉತ್ಪನ್ನಗಳನ್ನ ತಯಾರಿಸಿ ಹೊರರಾಜ್ಯಕ್ಕೆ ಕಳುಹಿಸಬೇಕು. ಮಾರುಕಟ್ಟೆ ವಿಸ್ತರಿಸಲು ಯೋಜನೆ ರೂಪಿಸಬೇಕು. ಅದು ಬಿಟ್ಟು ರೈತರ ಜೇಬಿಗೆ ಕತ್ತರಿ ಹಾಕಲಾಗಿದೆ. ಇಂತಹ ಲಜ್ಜೆಗಟ್ಟ ಸೋಮಾರಿ ಆಡಳಿತಗಾರರು ಕೋಚಿಮುಲ್‌ನಲ್ಲಿ ಇರಲು ನಾಲಾಯಕ್ಕು.
