ಬಿತ್ತಿ ಪತ್ರ ಬಿಡುಗಡೆ
ಕಲಬುರಗಿ, ಜು, 12: ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಆನಂದ ವಾರಿಕ ಅವರ ಹಾಗೂ ಅವರ ನೇತೃತ್ವದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮ ಜುಲೈ 16 ರ ಮಂಗಳವಾರದಂದು ಕಲಬುರಗಿ ನಗರದ ಫಿಲ್ಲರ್ ಬೆಡ್ ರಸ್ತೆಯ ಈಶ್ವರ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ, ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಎಲ್ಲಾ ಸಮಾಜಗಳ ಜಿಲ್ಲಾಧ್ಯಕ್ಷರುಗಳಿಗೆ, ಮಠಾಧೀಶರುಗಳಿಗೆ ಆಹ್ವಾನಿಸಿದ್ದಾರೆ ಪೂಜ್ಯ ಸವಿತಾನಂದನಾಥ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸುವವರು ಗುಡೆಮಾರನಹಳ್ಳಿ ಭವ್ಯಶ್ರಿ ಅಮ್ಮನವರು ರಾಜ್ಯದ ಎಲ್ಲಾ ಭಾಗಗಳ ಜಿಲ್ಲಾ ತಾಲೂಕುಗಳ ಅಧ್ಯಕ್ಷರುಗಳು ಸಮಾಜದ ಹಿತಚಿಂತಕರರು ಆಗಮಿಸಲಿದ್ದಾರೆ ಕಾರ್ಯಕ್ರಮದಲ್ಲಿ ವಿವಿಧ ಕುಲ ವೃತ್ತಿಯನ್ನು ಆಧರಿಸಿ ಜೀವನ ಸಾಗಿಸುತ್ತಿರುವ ಗೌರವಿಸಲಾಗುವುದು ಕಾರ್ಯಕ್ರಮದಲ್ಲಿ ಮನೂರ ಮಲ್ವಿಸ್ಪೇಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಉಚಿತ ವಿಜಯಕುಮಾರ ಗದವಾಲ ಮಲ್ಲು ಪೂಜಾರಿ ಅವರಿಂದ ಈ ಶ್ರಮ ಆಯುಷ್ಮಾನ್ ಕಾರ್ಡ್ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಶಿಬಿರಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ ಇದೆ ಸಂದರ್ಭದಲ್ಲಿ ಜಿಲ್ಲೆಯ ನೂತನ ಪದಾಧಿಕಾರಿಗಳು ಮಂಡಲ ಅಧ್ಯಕ್ಷರುಗಳು ಮಹಿಳಾ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.