ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ ?3150 ಕೋಟಿ ಅನುದಾನ ನೀಡಿದ್ದು , ಅದರಲ್ಲಿ ?1050 ಕೋಟಿ ಶಿಕ್ಷಣಕ್ಕಾಗಿ ಮೀಸಲಿಡಲಾಗಿದೆ ಎಂದು ವಸತಿ ಮತ್ತು ವಕ್ಫ್ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು.
ಸಮೀಪದ ಆನಿವಾಳು ಗ್ರಾಮದಲ್ಲಿ ಸುಮಾರು 6 ಎಕರೆ ಪ್ರದೇಶದಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲಾ-ಕಾಲೇಜು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು,ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರದಲ್ಲೂ ವಿದ್ಯಾರ್ಥಿಗಳು ಮುಂದೆ ಬರಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಂತಹ ಕೆಲಸವನ್ನು ಪೆÇೀಷಕರು ಮಾಡಬೇಕು, ಕಡುಬಡತನದಲ್ಲಿ ವ್ಯಾಸಂಗ ಮಾಡಿದ ದೇಶದ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ನನ್ನ ರಾಜಕೀಯ ಗುರು ಮಾಜಿ ಪ್ರದಾನಿ ಎಚ್.ಡಿ ದೇವೇಗೌಡ ರವರು ಬಡತನದಲ್ಲೇ ಶಿಕ್ಷಣವನ್ನು ಪಡೆದಿದ್ದರು. ಬಡತನವಿದ್ದರೂ ಮಕ್ಕಳ ಶಿಕ್ಷಣಕ್ಕೆ ಕೊರತೆಯಾಗಬಾರದು, ನಾನು ಸ್ನೇಹಿತರ ಸಹವಾಸದಿಂದ ಉನ್ನತ ಶಿಕ್ಷಣ ಪಡೆಯಲು ಸಾದ್ಯವಾಗಲಿಲ್ಲ, ಅದನ್ನು ನೆನೆದರೆ ಈಗಲೂ ಬೇಸರ ಉಂಟಾಗುತ್ತದೆ ಎಂದರು.
17 ವರ್ಷದಿಂದ ಬಾಡಿಗೆ ಕಟ್ಟಡದಲ್ಲಿದ್ದ ಈ ಶಾಲೆ ಇಂದಿನ ವಿದ್ಯಮಾನಗನಗುಣವಾಗಿ ಉತ್ತಮ ಕಟ್ಟಡ ನಿರ್ಮಾಣವಾಗಿದೆ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಇಲ್ಲಿ ದಾಖಲಾಗುವ ಮಕ್ಕಳೆಲ್ಲಾ ಬಡತನದಿಂದ ಬಂತಂತಹ ಮಕ್ಕಳಾಗಿರುವುದರಿಂದ ಶಿಕ್ಷಕರು, ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಮುಂದಿನ ದಿನಗಳಲ್ಲಿ ಶಾಲಾ ಕಾಂಪೌಂಡ್ , ಸಿಸಿ ರಸ್ತೆ, ಶಿಕ್ಷಕರ ವಸತಿ ಗೃಹಗಳು, ಇನ್ನಿತರೆ ಕಾಮಗಾರಿಗೆ ?30 ಕೋಟಿ ರೂಗಳನ್ನು ಮಂಜೂರು ಮಾಡಲಾಗುವುದು, ಇಲಾಖೆ ವತಿಯಿಂದ ವೈದ್ಯಕೀಯ ಶಿಕ್ಷಣಕ್ಕಾಗಿ 1300 ವಿದ್ಯಾರ್ಥಿಗಳಿಗೆ ತಲಾ ?5 ಲಕ್ಷ ರೂ.ಗಳನ್ನು ಭರಿಸಲಾಗುತ್ತಿದೆ, 400 ಅಭ್ಯರ್ಥಿಗಳಿಗೆ ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗೆ ತರಬೇತಿ ನೀಡಲಾಗುತ್ತಿದೆ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ 98 ರಷ್ಟು ಅಂಕ ಪಡೆದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳನ್ನು ಅವರ ಮುಂದಿನ ವ್ಯಾಸಂಗದ ಎಲ್ಲಾ ಜವಾಬ್ದಾರಿಯನ್ನು ನನ್ನ ಸ್ವಂತ ಖರ್ಚಿನಲ್ಲಿ ಮಾಡುವುದಾಗಿ ಸಭೆಯಲ್ಲಿ ತಿಳಿಸಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಏಕೆಂದರೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬುದು ಪೆÇೀಷಕರ ಅಭಿಪ್ರಾಯವಾಗಿದೆ, ಶಾಲೆಯಲ್ಲಿ ಮಕ್ಕಳೊಂದಿಗೆ ಶಿಕ್ಷಕರು ಕಲಿತು ಕಲಿಸಬೇಕು ಆಗ ಮಾತ್ರ ಪರಿಣಾಮಕಾರಿಯಾಗಿ ಪಠ್ಯ ಪ್ರವಚನಗಳು ನಡೆಸಲು ಸಾಧ್ಯವಾಗುತ್ತದೆ, ಅಲ್ಪಸಂಖ್ಯಾತರಿಗೆ 75% ಹಾಗೂ ಇತರೆ ಜನಾಂಗಕ್ಕೆ 25% ಇರುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ, ಸರ್ಕಾರದ ವತಿಯಿಂದ ಸರ್ಕಾರಿ ಶಾಲೆಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡುವುದರಿಂದ ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಥಮವಾಗಿ ತಾಲ್ಲೂಕಿನ ಹಲಗನಹಳ್ಳಿ ಗ್ರಾಮದಲ್ಲಿ ಈ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿತ್ತು, ಈಗ ಸ್ವತಃ ಕಟ್ಟಡ ನಿರ್ಮಾಣವಾಗಿರುವುದು ಖುಷಿ ತಂದಿದೆ, ಇಲ್ಲಿ 6 ರಿಂದ 10 ನೇ ತರಗತಿವರೆಗೆ 250 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು, ಉನ್ನತ ದರ್ಜೆಗೇರಿದ ಈ ಶಾಲೆಯಲ್ಲಿ 500 ಮಕ್ಕಳು ವ್ಯಾಸಂಗ ಮಾಡಬಹುದಾಗಿದೆ, ಪಿಯುಸಿಗೆ 240 ವಿದ್ಯಾರ್ಥಿಗಳನ್ನು ದಾಖಾಲಾತಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು . ಮುಂದಿನ ದಿನದಲ್ಲಿ ಈ ಶಾಲೆಗೆ ಸಿಬಿಎಸ್‍ಸಿ ಪಠ್ಯಕ್ರಮವನ್ನು ಮಂಜೂರು ಮಾಡಿಸುವಂತೆ ಸಚಿವ ಜಮೀರ್ ಅಹಮ್ಮದ್ ಖಾನ್‍ರವರಿಗೆ ಮನವಿ ಮಾಡಿದರು.
ಪ್ರತಿಭಾ ಪುರಸ್ಕಾರ:-ಶಾಲೆಯ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಮಕ್ಕಳನ್ನು ಉತ್ತೇಜಿಸಲು ವೈಯಕ್ತಿಕವಾಗಿ ಪ್ರತಿಭಾ ಪುರಸ್ಕೃತ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂಗಳನ್ನು ನೀಡಿದರು.
ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬೆಂಗಳೂರು ಅಲ್ಪಸಂಖ್ಯಾತರ ನಿರ್ದೇಶನಾಲಯ ನಿರ್ದೇಶಕಜಿಲಾನಿ ಎಚ್. ಮೊಕಾಶಿ, ಗ್ರಾ.ಪಂ ಅಧ್ಯಕ್ಷ ಕಾಮಾಕ್ಷಮ್ಮ, ವೀಣಾ ಕೆ.ವಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಭಕ್ತ ಮಾರ್ಕಂಡೇಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಡಿ.ಟಿ ಸ್ವಾಮಿ, ಕರ್ನಾಟಕ ಗೃಹ ಮಂಡಳಿ ಅಧೀಕ್ಷಕ ಅಭಿಯಂತರ ಎಂ.ಡಿ ಸೋಮಶೇಖರ್, ಎಇಇ ಕೃಷ್ಣಪ್ಪ, ಜೆಇ ಅಶ್ವಿನ್, ಇಲಾಖೆ ವಿಸ್ತರಣಾಧಿಕಾರಿ ಸ್ವಾಮಿ, ರಾಜು, ಪ್ರಾಂಶುಪಾಲೆ ಕುಮಾರಿ, ವಾರ್ಡನ್ ನಿಲಯಪಾಲಕ ಅನಿಲ್, ಮುಖಂಡರಾದ ನಿರುಪಾರಾಜೇಶ್ , ಸರಸ್ವತಿ, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು ಹಾಗೂ ಇಲಾಖೆಯ ಎಲ್ಲಾ ಸಿಬ್ಬಂಧಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು