ಅಪರ್ಣಾರವರ ನಿಧನ ಕನ್ನಡ ಸಾಂಸ್ಕøತಿಕ ಹಾಗೂ ನಿರೂಪಣೆ ಕ್ಷೇತ್ರಕ್ಕೆ ನಷ್ಟ: ಸುರೇಶ್ ಋಗ್ವೇದಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.12- ಪ್ರಸಿದ್ಧ ನಿರೂಪಕಿ, ಸಿನಿಮಾ ಹಾಗೂ ದೂರದರ್ಶನದ ಕಲಾವಿದರು ಆಗಿದ್ದ ಅಪರ್ಣಾರವರ ನಿಧನ ಕನ್ನಡ ಸಾಂಸ್ಕøತಿಕ ಹಾಗೂ ನಿರೂಪಣೆ ಕ್ಷೇತ್ರಕ್ಕೆ ನಷ್ಟವನ್ನು ಉಂಟುಮಾಡಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾμÉ, ಶಬ್ದ, ಏರಿಳಿತ, ಧ್ವನಿ ತರಂಗಗಳ ಮೂಲಕ ಕನ್ನಡ ಭಾμÉಯ ಸಂಸ್ಕೃತಿ ಮತ್ತು ಪರಂಪರೆಯನ್ನು ಬಹು ಎತ್ತರಕ್ಕೆ ಕೊಂಡೊಯ್ದು ಕೇಳುಗರಿಗೆ ಪರಮಾನಂದವನ್ನು ಉಂಟು ಮಾಡುತ್ತಿದ್ದ ನಿರೂಪಣಾ ಶೈಲಿ ಮರೆಯಲಾಗದು. ಇವರ ನಿರೂಪಣೆ ಲಕ್ಷಾಂತರ ಜನರ ಮನಸೂರೆಗೊಂಡಿತ್ತು. ಪ್ರತಿ ಕನ್ನಡದ ಶಬ್ದಕ್ಕೂ ಧ್ವನಿಯ ಮೂಲಕ ಅಪ್ಪಟ ಚಿನ್ನದಂತೆ ಮಾಧುರ್ಯವನ್ನು, ಅರ್ಥವನ್ನು ಹಾಗೂ ತರಂಗಗಳನ್ನು ಉಂಟು ಮಾಡಿದ್ದ ಅವರ ನಿರೂಪಣೆ ನೂರಾರು ನಿರೂಪಣಾಕಾರರಿಗೆ ಮಾದರಿಯಾಗಿತ್ತು. ಅವರನ್ನೇ ಅನುಸರಿಸುವಂತೆ ಕನ್ನಡ ಲೋಕ ಮಾರ್ಪಟ್ಟಿತು. ನೂರಾರು ಕಾರ್ಯಕ್ರಮಗಳ ನಿರೂಪಣೆಯ ಮೂಲಕ ತಮ್ಮದೇ ಆದ ನಿರೂಪಣಾ ಕ್ಷೇತ್ರವನ್ನು ಮುಕ್ತವಾಗಿ ಯುವಕರು ಮತ್ತು ಯುವತಿಯರು ಕಲಿಯುವಂತೆ ಪ್ರೇರಣೆ ನೀಡಿದ ಮಹಾ ಶಕ್ತಿ ಅಪರ್ಣಾ. ಅವರ ನಿಧನದಿಂದಾಗಿ ಕನ್ನಡ ಭಾμÁ ಲೋಕಕ್ಕೆ ಅಗಾಧ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪರವಾಗಿ ಋಗ್ವೇದಿ ಅವರು ಭಾವಪೂರ್ಣವಾದ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.