ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ತನಿಖೆ ನಡೆಸಲು ಆಗ್ರಹಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹನೂರು ಜು 12 :- ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೆಲವು ಹಾಲು ಉತ್ಪಾದಕರು ರೈತರು ಭಾರತೀಯ ಕೀಸಾನ್ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದರು.
ತೋಮಿರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಮದಲೈ ಮುತ್ತು ಹಾಗೂ ಹಾಲು ಪರೀಕ್ಷಕ ವಿಲ್ಲಾ ಇಬ್ಬರು ಸೇರಿ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘ ಕೇಂದ್ರ ಮುಂದೆ ಜಮಾಯಿಸಿದ ಕೆಲವು ಉತ್ಪಾದಕ ರೈತರು ಮಹಿಳೆಯರು ಧಿಕ್ಕಾರ ಕೂಗಿ ಪ್ರತಿಭಟಿಸಿ ಇಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಹಣ ದುರುಪಯೋಗದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಪ್ರತಿಭಟಿಸಿದರು.
ಕಾರ್ಯದರ್ಶಿ ಮದಲೈ ಮುತ್ತು ಅವರು ಹಾಲು ಉತ್ಪಾದಕರಲ್ಲದ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಅವರ ಖಾತೆಗೆ ಸಾವಿರಾರು ಹಣ ಜಮಾ ಮಾಡಿ ನಂತರ ಅವರಿಂದ ಮತ್ತೆ ಹಣವನ್ನು ಪಡೆದುಕೊಂಡಿದ್ದಾರೆ. ಇದೇ ರೀತಿ ಹಲವಾರು ವ್ಯಕ್ತಿಗಳ ಹೆಸರಿನಲ್ಲಿ ಹಣ ದುರುಪಯೋಗದ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.
ಪ್ರತಿಭಟನೆಕಾರರು ಮಾತನಾಡಿ ತೋಮಿಯರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅನ್ಯ ವ್ಯಕ್ತಿಗಳ ಖಾತೆಗೆ ಲಕ್ಷಾಂತರ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ.
ಹೀಗಾಗಿ ವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಅಲ್ಲಿಯ ತನಕ ಅಧ್ಯಕ್ಷ ರಾಜಕಣ್ಣ ಹಾಗೂ ಕಾರ್ಯದರ್ಶಿ ಮದಲೈಮುತ್ತು ಅವರು ಹುದ್ದೆ ಹಿಂದೆ ಸರಿಯಬಾರದು, ಕಡತಗಳನ್ನು ನಾಶ ಮಾಡಬಾರದು ಪ್ರತಿಭಟನೆಯ ಒತ್ತಾಯವನ್ನು ಸಭಾ ನಡವಳಿಯಲ್ಲಿ ದಾಖಲು ಆಗಲೇಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಹಾಲು ಒಕ್ಕೂಟ ಸಂಘದ ನಿರ್ದೇಶಕರಾದ ಮಹದೇವಸ್ವಾಮಿ ಹಾಗೂ ಶಾಹುಲ್ ಅಹಮ್ಮದ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಕಣ್ಣ ಅವರು ಪ್ರತಿಭಟನ ನಿರತರಿಂದ ಆರೋಪದ ಬಗ್ಗೆ ಮಾಹಿತಿ ಪಡೆದರು.
ನಂತರ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಮಹದೇವಸ್ವಾಮಿ ಅವರು ಮಾತನಾಡಿ ಹಾಲು ಉತ್ಪಾದಕರು ರೈತರು ನೀಡಿರುವ ದೂರಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕಮಿಟಿ ಮೇಲಾಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯದರ್ಶಿ ಮದಲೈ ಮುತ್ತು ನಿವೃತ್ತಿ ಪಡೆದು ನಾಲ್ಕೈದು ದಿನಗಳಾಗಿವೆ. ಹಾಗಾಗಿ ಈಗಾಗಲೇ ಅವರ ಮೇಲೆ ಮಾಡಿರುವ ಆರೋಪಕ್ಕೆ ಅವರನ್ನು ಮತ್ತೊಂದು ಬೇರೆ ಸ್ಥಾನವನ್ನು ನೀಡಿ ನಂತರ ಕಮಿಟಿಯಲ್ಲಿ ಚರ್ಚೆ ನಡೆಸಿ. ನಡೆದಿರುವ ಘಟನೆ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನಂತರ ಪ್ರತಿಭಟನೆಯನ್ನು ಕೈಬಿಟ್ಟರು.
ಕೆಲವರು ಹಾಲು ಉತ್ಪಾದಕರಿಂದ ಪ್ರತಿಭಟನೆಗೆ ವಿರೋಧ: ತೋಮಿರ್ ಪಾಳ್ಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಯಾವುದೇ ಹಣ ದುರುಪಯೋಗವಾಗಿಲ್ಲ ಇದು ಉದ್ದೇಶ ಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಲಿ ಎಂದು ಪ್ರತಿಭಟನೆಗೆ ಪ್ರತಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಘ ಅಭಿವೃದ್ಧಿ ಬೆಳವಣಿಗೆಯಾಗಿದೆ. ಇಲ್ಲಿ ಅತಿ ಹೆಚ್ಚು ರೈತರು ಮಹಿಳೆಯರು ಹಾಲು ಉತ್ಪಾದಕರು ಇದ್ದಾರೆ. ಇಲ್ಲಿ ಹಾಲು ಉತ್ಪಾದಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ರೈತರು ಮಹಿಳೆಯರು. ಭಾರತ್ ಕಿಸನ್ ಸಂಘದ ಮುಖಂಡರಾದ ಡಾನ್ ಬೊಸ್ಕೊ, ಮಲ್ಲಿಕಾರ್ಜುನ, ಮಣಿಗಾರ ಪ್ರಸಾದ್ ಹಾಗೂ ತೋಮಿಯರ್ ಪಾಳ್ಯ ಹಾಲು ಉತ್ಪಾದಕರು ಚಾರ್ಲೆಸ್, ಸಾಗಯರಾಜ್, ಜ್ಞಾನ ಪ್ರಕಾಶ್, ಚಾರ್ಲೆಸ್, ಜಾನ್, ಪತ್ತಿನಾಧನ್, ಮಂಗಳ, ಚಾಲ್ರ್ಸ್ ಸೇರಿದಂತೆ ಇನ್ನಿತರರು ಇದ್ದರು.