ಹಿಂದಿ ಶಿಕ್ಷಕರಿಗೆ: ಬೀಳ್ಕೊಡುಗೆ
ಸಂಜೆವಾಣಿ ವಾರ್ತೆ
ಹನೂರು ಜು 12 :- ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಸೇಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಶ್ರೀ ನಿರೇಶ್ ರವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಫಾ.ಟೆನ್ನಿ ಕುರಿಯನ್ ಮಾತನಾಡಿ, ನಿವೃತ್ತಿಯು ನಿಮಗೆ ಆನಂದ, ಆರೋಗ್ಯ ಮತ್ತು ಸಂತೋಷದ ಜೀವನವನ್ನು ತರಲಿ. ನಿಮ್ಮ ಸೇವೆಗಳು ಎಂದಿಗೂ ಮರೆಯಲಾಗದು. ನಮ್ಮೆಲ್ಲರ ಹಾರೈಕೆಗಳು ನಿಮ್ಮೊಂದಿಗೆ ಇರುತ್ತವೆ. ಧನ್ಯವಾದಗಳು ಎಂದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ವ್ಯವಸ್ಥಾಪಕರಾದ ಫಾ.ಟೆನ್ನಿ ಕುರಿಯನ್ ,ಮುಖ್ಯ ಶಿಕ್ಷಕರಾದ ಸುನಿಲ್ ಸಹ ಶಿಕ್ಷಕರು ಭಾಗವಹಿಸಿದ್ದರು.