ಸಾಲ ಬಾಧೆ: ಮೈಮೇಲೆ ಪೆಟ್ರೋಲ್ ಸುರಿದುಕೊಂಡು ರೈತ ಆತ್ಮಹತ್ಯೆ
ಚಿಂಚೋಳಿ,ಸೆ.27- ತಾಲೂಕಿನ ಪೆÇೀತಂಗಲ ಗ್ರಾಮದಲ್ಲಿ ಸಾಲದ ಭಾದೆ ತಾಳದೆ ಮತ್ತು ಹೊಲದಲ್ಲಿ ಬೆಳೆದ ಮುಂಗಾರು ಬೆಳೆ ಹಾನಿಯಿಂದ ಮನನೊಂದು ರೈತ ಮನೆಯಲ್ಲೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಪೆÇತಂಗಲ ಗ್ರಾಮದ ರೈತ ಪಾಂಡಪ್ಪ ತಿಪ್ಪಣ್ಣ(45) ಎಂದು ಗುರುತಿಸಲಾಗಿದೆ. ಸಾಲಸೂಲ ಮಾಡಿ ಮುಂಗಾರು ಬೆಳೆಗಳಾದ ತೊಗರಿ, ಹೆಸರು, ಉದ್ದುಗಳನ್ನು ಪಾಂಡಪ್ಪ ತಿಪ್ಪಣ್ಣ ತನ್ನ ಹೊಲದಲ್ಲಿ ಬೆಳೆದಿದ್ದ. ಆದರೆ ಅತಿಯಾಗಿ ಸುರಿದ ಮಳೆಯಿಂದಾಗಿ ಬೆಳೆದ ಬೆಳೆಗಳು ಹಾನಿಯಾಗಿದ್ದವು ಹಾಗೂ ಮಾಡಿದ ಸಾಲದ ಬಾರ ಹೆಚ್ಚಾದ ಪರಿಣಾಮ ಮನವೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ನಿಡಗುಂದಾ ಗ್ರಾಮ ಪಿಕೆಜಿಬಿ ಬ್ಯಾಂಕ್ ನಿಂದ 1 ಲಕ್ಷ ರೂ. ಬೆಳೆ ಸಾಲವನ್ನು ಪಡೆದುಕೊಂಡಿದ್ದನು. ಸಾಲ ಮರುಪಾವತಿಗೆ ಬ್ಯಾಂಕ್ ನಿಂದ ರೈತನಿಗೆ ನೋಟಿಸ್ ಕೂಡಾ ನೀಡಲಾಗಿತ್ತು. ಅಲ್ಲದೇ ಖಾಸಗಿ ಯಾಗಿಯೂ ಸಾಲದ ಹೊರೆ ತಾಳದೇ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ತೀವ್ರ ಗಾಯದಿಂದ ನರಳುತ್ತಿದ್ದ ಆತನನ್ನು ಕೂಡಲೇ ಸಮೀಪದ ನಿಡಗುಂದಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಸೇಡಂ ಆಸ್ಪತ್ರೆಯಲ್ಲಿ ಸೇರಿಸಲಾಯಿತು. ಅಲ್ಲಿಂದ ಇನ್ನುಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಜಿಲ್ಲೆಯ ಜೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ ಮೃತಪಟ್ಟಿದ್ದಾನೆ. ಈ ಕುರಿತು ಸುಲೇಪೇಟ ಪಪೊಲಿಸ ಠಾಣೆಯ ಪಿಎಸ್‍ಐ ಅಮರ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.