ಸಹಕಾರ ಮನೋಭಾವನೆಯಿಂದ ಸಂಘಗಳ ಬೆಳವಣಿಗೆ:ಹೂಗಾರ
ತಾಳಿಕೋಟೆ:ಸೆ.೨೮: ಸಹಕಾರ ಸಂಘಗಳು ಬೆಳವಣಿಗೆಯಾಗಬೇಕಾದರೆ ಗ್ರಾಹಕರ ಪ್ರೀತಿ ವಿಸ್ವಾಸಗಳಿಸಬೇಕು ಅಂದಾಗ ಮಾತ್ರ ಸಹಕಾರಿ ಕ್ಷೇತ್ರ ಬೆಳವಣಿಗೆಯಾಗಲು ಸಾದ್ಯವೆಂದು ಶ್ರೀ ಅಲ್ಲಂಪ್ರಭು ಪತ್ತಿನ ಸಹಕಾರಿ ಸಂಘ ನಿ,ದ ಅಧ್ಯಕ್ಷರಾದ ಭೋಗಣ್ಣ ಹೂಗಾರ ಅವರು ಹೇಳಿದರು.
ಪಟ್ಟಣದ ಶ್ರೀ ಅಲ್ಲಂಪ್ರಭು ಪತ್ತಿನ ಸಹಕಾರಿ ಸಂಘ ನಿ,ದ ೧೪ನೇ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಸಹಕಾರಿ ಕ್ಷೇತ್ರದಿಂದ ಇಡೀ ದೇಶದ ಬೆಳವಣಿಗೆ ನಿಂತಿದ್ದು ಸಹಕಾರಿ ಸಂಘಗಳಲ್ಲಿ ಸಾಲಪಡೆದುಕೊಂಡ ಸಾಲಗಾರರು ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡಿ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದ ಅವರು ಶ್ರೀ ಅಲ್ಲಂಪ್ರಭು ಪತ್ತಿನ ಸಹಕಾರಿ ಸಂಘ ನಿ,ವು ಅಲ್ಪ ಅವಧಿಯಲ್ಲಿ ಒಳ್ಳೆಯ ಲಾಭಾಂಶದಿAದ ಮುನ್ನಡೆದಿರುವದು ಇದಕ್ಕೆ ಆಡಳಿತ ಮಂಡಳಿಯವರ, ಮತ್ತು ಸಿಬ್ಬಂದಿಯವರ ಸಹಕಾರವೇ ಕಾರಣವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ತಿಪ್ಪಣ್ಣ ಹೂಗಾರ, ಗೋಲ್ಲಾಳಪ್ಪ ಹೂಗಾರ, ದೊಡ್ಡಯ್ಯ ವೀರಾಪೂರಮಠ, ಕಮಲಾಕರರವಿ ಕದಮ್, ಅವರು ಆಗಮಿಸಿ ಮಾತನಾಡಿದರು.
ಸಂಘದ ವ್ಯವಸ್ಥಾಪಕ ಹಣಮಂತ ಹೂಗಾರ ಸಂಘದ ವಾರ್ಷಿಕ ವರಧಿ ವಾಚಿಸಿದರು.
ಈ ಸಮಯದಲ್ಲಿ ಸಂಘದ ಉಪಾಧ್ಯಕ್ಷ ಸುಭಾಸ ಪೂಜಾರಿ, ನಿರ್ದೇಶಕರುಗಳಾದ ಸುಭಾಸ ಹೂಗಾರ, ರಮೇಶ ಹೂಗಾರ, ರಾಮಣ್ಣ ಪೂಜಾರಿ, ಸಿದ್ದಪ್ಪ ಹೂಗಾರ, ಈಶ್ವರಪ್ಪ ಹೂಗಾರ, ಮಹಾಂತೇಶ ಹೂಗಾರ, ಶ್ರೀಮತಿ ಶಾಂತಾ ಪೂಜಾರಿ, ಶ್ರೀಮತಿ ಶಾರದಾ ಹೂಗಾರ, ಶ್ರೀಮತಿ ಸರೋಜಿನಿ ಚಲವಾದಿ, ಮೊದಲಾದವರು ಉಪಸ್ಥಿತರಿದ್ದರು.
ಮಹಾಂತೇಶ ಹೂಗಾರ ನಿರೂಪಿಸಿದರು. ಶ್ರೀನಿವಾಸ ಕುಲಕರ್ಣಿ ವಂದಿಸಿದರು.