ರಾಯಚೂರು ಉಪ ವಿಭಾಗಧಿಕಾರಿ ಬಹಿಬೂಬಿ ಅವರಿಗೆ ಸಚಿವ ಭೈರೇಗೌಡರಿಂದ ಪ್ರಶಸ್ತಿ ಪ್ರದಾನ
ಕಲಬುರಗಿ,ಸೆ.೨೮- ರಾಯಚೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ( ಉಪ ವಿಭಾಗಾಧಿಕಾರಿ) ಮಹಿಬೂಬಿ ಎಂ. ಕಾರಟಗಿ ಅವರಿಗೆ, ಕಂದಾಯ ಸಚಿವರಾದ ಕೃಷ್ಣಾ ಭೈರೇಗೌಡರು, ವಷ೯ದ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಪ್ರದಾನ ಮಾಡಿದರು.
ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮವಾಗಿ ಒದಗಿಸಿರುವ ಕಂದಾಯ ಅಧಿಕಾರಿಗಳ ಶ್ರೇಷ್ಠ ಸೇವೆಯನ್ನು ಗುರುತಿಸಿ ಸರಕಾರ ಪ್ರತವಷ೯ “ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ- ಪ್ರಶಸ್ತಿ ನೀಡಿ ಗೌರವಿಸುತ್ತದೆ.
ಈ ಪ್ರಶಸ್ತಿಗೆ ಆಯ್ಕೆಯಾದ ರಾಯಚೂರು ಉಪ ವಿಭಾಗಾಧಿಕಾರಿ ಮಹಿಬೂಬಿ ಎಂ. ಕಾರಟಗಿ ಅವರನ್ನು ಬೆಂಗಳೂರಿನ ವಿಕಾಸ ಸೌಧ, ಕೊಠಡಿ ಸಂಖ್ಯೆ ೪೧೯ ರಲ್ಲಿ ಶುಕ್ರವಾರ ಆಯೋಜಿಸಲಾದ ಕಂದಾಯ ಇಲಾಖೆಯ ಅಭಿನಂದನಾ ಸಮಾರಂಭದಲ್ಲಿ ಕಂದಾಯ ಸಚಿವರು, ಮಹಿಬೂಬಿ ಅವರಿಗೆ “ವರ್ಷದ ಅತ್ಯುತ್ತಮ ಕಂದಾಯ ಅಧಿಕಾರಿ-೨೦೨೪” ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.
ಕಂದಾಯ ಇಲಾಖೆಯ ಅತ್ಯುತ್ತಮ ಹಾಗೂ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವ ಸಹೋದರಿ ಮಹಿಬೂಬಿ (ಎಂ.ಎ0.ಕಾರಟಗಿ) ಅವರಿಗೆ ಕಲಬುರಗಿಯ ಹಿರಿಯ ಪತ್ರಕರ್ತ ಹಟ್ಟಿ ನಜೀರ್ ಮಿಯಾನ್ ಹಾಗೂ ಅರಕೇರಾ, ಹಟ್ಟಿ ಮತ್ತು ಕಾರಟಗಿ ಪರಿವಾರ ಹಷ೯ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.