ದಸರಾ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆಗೈದ ರಘುಗೆ ಸನ್ಮಾನ
ಕಲಬುರಗಿ,ಸೆ.27- ಇಲ್ಲಿನ ಸ್ಟೇಷನ್ ಬಜಾರ್ ಬಡಾವಣೆಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿ ರಘು ವೈ ಇಚೇಗೆ ಜರುಗಿದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟದ ಲಾನ್ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ ಪ್ರಯುಕ್ತ ಕಾಲೇಜಿನ ವಹಿತಿಯಂದ ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಚಾರ್ಯರಾz ಸುಜಾತ ಬಿರಾದರ್ ,ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಸನ್ಮಾನಿಸಲಾಯಿತು. ಪ್ರಿನ್ಸಿಪಾಲರು ಮಾತನಾಡಿ ಮೂಲಭೂತ ಕೊರತೆಗಳ ಮಧ್ಯೆಯು ನಮ್ಮಂತ ಕಾಲೇಜಿನ ಬಡ ವಿದ್ಯಾರ್ಥಿ ಈ ರೀತಿ ಸಾಧನೆ ಮಾಡಿರುವುದು ಎಲ್ಲಾ ವಿದ್ಯಾರ್ಥಿಗಳಿಗೆ ಆದರ್ಶ ಹಾಗೂ ಪ್ರೇರಣೆಯಾಗಿದೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳು ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಾತ್ರ ಸಾಧನೆ ಮಾಡಿ ಕಾಲೇಜಿನ ಕೀರ್ತಿ ಪತಾಕೆ ಹಾರಿಸಬೇಕೆಂದರು.
ಈ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದರು. ಉಪನ್ಯಾಸಕರಾದ ಚಂದ್ರಕಾಂತ್ ಸನದಿ ಬಲರಾಮ್ ಚೌಹಾಣ್ ಸಿದ್ದಲಿಂಗಪ್ಪ ಪೂಜಾರಿ ರೇಖಾ ರಾಯ್ಚೂರ್ ಶಶಿಧರ್ ಭೂಸನೂರ್ ಶ್ರೀನಿವಾಸ್ ಐ ಜಿ ರುಕ್ಸಾನ ಮುಂತಾದವರು ಉಪಸ್ಥಿತರಿದ್ದರು