ಶಿವಭಜನೆ ಪ್ರಾರಂಬಿಸಿದ ಶತಾಯುಷಿ ಕಾಶಿಬಾಯಿ
ತಾಳಿಕೋಟೆ:ಜು.12: ಪಟ್ಟಣದಲ್ಲಿ ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ ಅಂಗವಾಗಿ ಪ್ರಾರಂಭಗೊಂಡ ಸಪ್ತ ಭಜನೆಯದಿನದಿಂದಲೇ ಶ್ರೀಮಠದ ಮುಂಭಾಗದಲ್ಲಿ ಶ್ರೀಮತಿ ಕಾಶಿಬಾಯಿ ಮಡಿವಾಳಯ್ಯ ದುರ್ಗದ ಎಂಬ 101 ವರ್ಷ ವಯೋಮಿತಿ ಹೊಂದಿದ ಈ ಶತಾಯುಷಿ ತಾನು ಕೂಡಾ ಕೈಯಲ್ಲಿ ತಾಳಗಳನ್ನು ಹಿಡಿದು ಶ್ರೀ ಶಿವಭಜನೆ ಪ್ರಾರಂಬಿಸಿದ್ದಾಳೆ.
ಶ್ರೀಮತಿ ಕಾಶಿಬಾಯಿ ದುರ್ಗದ ಇವಳು ತಾಳಿಕೋಟೆ ಪಟ್ಟಣದ ರಹವಾಸಿಯಾಗಿದ್ದು ಪತಿ ದಿ.ಮಡಿವಾಳಯ್ಯ ದುರ್ಗದ ಅವರು ಪೊಲೀಸ್ ಇಲಾಖೆಯಲ್ಲಿ ಹವಾಲ್ದಾರರಾಗಿ ಸೇವೆ ಸಲ್ಲಿಸುತ್ತಾ ನಿವೃತ್ತರಾಗಿದ್ದ ಅವರ ಧರ್ಮಪತ್ನಿ ಶ್ರೀಮತಿ ಕಾಶಿಬಾಯಿ ದುರ್ಗದ ಅವರಾಗಿದ್ದಾರೆ.
5 ಜನ ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳನ್ನು ಹೊಂದಿದ ಈ ವೃದ್ದೆ ಈಗಲೂ ಪತಿಯ ಪೇನ್ಸೇನ್ ಸೌಲಭ್ಯ ಪಡೆಯುತ್ತಾ ಸಾಗಿದ್ದಾಳೆ. ಶತಾಯುಷಿ ಕಾಶಿಬಾಯಿ ಇವರು ದೇವರ ಮೇಲೆ ಬಹಳೇ ನಂಬಿಕೆ ಇಟ್ಟಿದ್ದು ಈ ಹಿಂದಿನಿಂದಲೂ ಶ್ರೀ ಖಾಸ್ಗತೇಶ್ವರ ಹಾಗೂ ಶ್ರೀ ಸತ್ಯಸಾಯಿಬಾಬಾ, ನಿಜಗುಣ ಶಿವಯೋಗಿಗಳು, ಹಾಗೂ ಶ್ರೀ ಗುರುರಾಘವೇಂದ್ರರ ಮೇಲೆ ಬಹಳೇ ಶ್ರದ್ದಾ ಭಕ್ತಿಯಿಂದ ದಿನನಿತ್ಯ ರಚನೆಯಾದ ಭಕ್ತಿಯ ಮಹಿಳಾ ಮಂಡಳದವರೊಂದಿಗೆ ಭಕ್ತಿಯ ಸೇವೆ ಸಲ್ಲಿಸಿದ್ದಾಳಲ್ಲದೇ ಈಗಲೂ ಕೂಡಾ ಆಕೆ ತನ್ನ ಭಕ್ತಿಯ ಮಾರ್ಗವನ್ನು ಬಿಟ್ಟಿಲ್ಲಾ.
ದಿ.11 ಗುರುವಾರ ದಿಂದಲೇ ಈಕೆ ಕೈಯಲ್ಲಿ ತಾಳಗಳನ್ನು ಹಿಡಿದು ಶ್ರೀಮಠದಿಂದ ಹೊರಗೆ ಕೇಳಿ ಬರುತ್ತಿರುವ ಓಂ. ನಮಃ ಶಿವಾಯ ಎಂಬ ಮಂತ್ರವನ್ನು ಕೇಳುವದರೊಂದಿಗೆ ತಾನೂ ಕೂಡಾ ಅದನ್ನು ಕೇಳುತ್ತಲೇ ತಕ್ಕಂತೆ ತಾಳ ಹಾಕುತ್ತಾ ಕಟ್ಟೆಯ ಮೇಲೆ ಕುಳಿತಿದ್ದನ್ನು ಶ್ರೀ ಖಾಸ್ಗತೇಶ್ವರ ಮಠಕ್ಕೆ ಹೋಗಿ ಬರುತ್ತಿದ್ದ ಭಕ್ತ ಸಮೂಹ ಈಕೆಯನ್ನು ನೋಡಿ ಈಕೆ ವಯೋಮಿತಿಯಾಗಿದ್ದರೂ ಕೂಡಾ ಓಂ ನಮಃ ಶಿವಾಯ ಎಂಬ ನಾಮಾಂಕಿತದೊಂದಿಗೆ ಭಜನೆ ಮಾಡುತ್ತಾ ಸಾಗಿದ್ದನ್ನು ನೋಡಿ ಆಶ್ಚರ್ಯ ಚಕಿತರಾಗುತ್ತಿರುವದೇನು ಕಡಿಮೇನಿಲ್ಲಾ.