ಹಾಸ್ಟೆಲ್ ಮೇಲ್ಛಾವಣಿ ಪದರು ಕುಸಿದುಬಿದ್ದ ಪ್ರಕರಣ:ಮಕ್ಕಳಿಗೆ ಚಿಕಿತ್ಸೆ ನೀಡಿದ್ದು,ಪ್ರಸ್ತುತ ಆರೋಗ್ಯವಾಗಿದ್ದಾರೆ:ಪ್ರಭು ದೊರೆ
ಕಲಬುರಗಿ:ಜು.11: ಅಫಜಲಪೂರ ಪಟ್ಟಣದಲ್ಲಿರುವ ಬಿ.ಸಿ.ಎಂ. ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಕಳೆದ ಸೋಮವಾರ ಮಕ್ಕಳ ಮೇಲೆ ಕಟ್ಟಡದ ಮೇಲ್ಛಾವಣಿಯ ಪದರು ಕುಸಿದ್ದು ಬಿದ್ದ ಗಾಯಗೊಂಡಿದ್ದ 4 ಜನ ನಿಲಯಾರ್ಥಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿದ್ದು, ಸದ್ಯ ಆರೋಗ್ಯವಂತರಾಗಿದ್ದಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ತಿಳಿಸಿದ್ದಾರೆ.
50 ಸಂಖ್ಯೆ ಬಲ ಹೊಂದಿರುವ ಅಫಜಲಪೂರ ಟೌನ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮೇಲ್ಛಾವಣಿ ಪದರು ಕುಸಿದ್ದ ಬಿದ್ದ ಕಾರಣ ದುರಸ್ತಿ ಕಾರ್ಯ ಕೈಗೊಂಡಿದ್ದು, ಅಲ್ಲಿಯವರಗೆ ಮಕ್ಕಳನ್ನು ತಾತ್ಕಲಿಕವಾಗಿ ಅದೇ ಆವರಣದಲ್ಲಿರುವ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಿದೆ ಎಂದು ಅವರು ತಿಳಿಸಿದ್ದಾರೆ.