ವೈವಿದ್ಯಮಯ ಕಲಾಕೃತಿಗಳ ಅನಾವರಣ:ಪ್ರೊ. ವಿಜಯ ಬಾಗೋಡಿ
ಕಲಬುರಗಿ:ಜು.11:ಖ್ಯಾತಚಿತ್ರಕಲಾವಿದ ವಿ.ಜಿ. ಅಂದಾನಿ ಅವರ ವಿಭಿನ್ನ ಶೈಲಿಯ, ವೈವಿದ್ಯಮಯ ಕಲಾಕೃತಿಗಳು ಪ್ರದರ್ಶನದಲ್ಲಿಕಾಣ ಸಿಗುವುದು ದೃಶ್ಯ ಸಂಭ್ರಮಎಂದು ವಿಶ್ರಾಂತಡೀನರು, ಎಂ.ಎಸ್. ವಿಶ್ವವಿದ್ಯಾಲಯ, ಬರೋಡಾ ಪ್ರೊ. ವಿಜಯ ಬಾಗೋಡಿ ಹೇಳಿದರÀು.
ಶಿಬಿರದ ಉದ್ಘಾಟನೆ:
ಚಿತ್ರಕಲಾ ಶಿಬಿರವನ್ನು ಹಿರಿಯಕಲಾವಿದರು, ಉಪಾಧ್ಯಕ್ಷರುಕರ್ನಾಟಕಚಿತ್ರಕಲಾ ಪರಿಷತ್, ಬೆಂಗಳೂರು ಪ್ರೊ.ಕೆ.ಎಸ್. ಅಪ್ಪಾಜಯ್ಯ ಉದ್ಘಾಟಿಸಿದರು.ಅಂದಾನಿಯವರು ಸಂಸ್ಥೆಯನ್ನು ಬೆಳೆಸಿದ ರೀತಿಯನ್ನು ಶ್ಲಾಘಿಸಿದರು.ಅವರಅವಿರತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆಎಂದರು.
ರಂಗೇರಿದ ಶಿಬಿರ
ಹಿರಿಯ, ಯುವಉದಯೋನ್ಮೂಖಕಲಾವಿದರು ಶಿಬಿರದಲ್ಲಿ ಭಾಗವಹಿಸಿ ಕಲಬರುಗಿಕಲಾಸಕ್ತರ ಗಮನ ಸೆಳೆದರು.ಕ್ಯಾನವಾಸ್ ಮೇಲೆ ವೈವಿದ್ಯಮಯ ರೇಖೆಗಳು, ವರ್ಣದ ಚಿತ್ತಾರಗಳು, ವಿಶಿಷ್ಟ ವಿನ್ಯಾಸದ ಆಕೃತಿಗಳು, ಸೊಗಸಾದ ಸಂಯೋಜನೆಕಲಾವಿದರಿಂದಕುಂಚದಿಂದ ಮೂಡಿ ಬಂದಿದೆ.