ಸಿಯುಕೆಯಲ್ಲಿ ಸಮುದಾಯ ಜೀವನ ಕುರಿತ ಶಿಬಿರ
ಕಲಬುರಗಿ:ಜು.11:”ಶಿಕ್ಷಕರು ಸಮಾಜಕ್ಕೆ ಜವಾಬ್ದಾರಿಯುತ ಸೇವೆ ಸಲ್ಲಿಸಬೇಕು” ಎಂದು ಸಿಯುಕೆಯ ಗೌರವಾನ್ವಿತ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಇಂದು ಅವರು ಸಿಯುಕೆಯ ಶಿಕ್ಷಣ ಮತ್ತು ತರಬೇತಿ ವಿಭಾಗವು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಸಮುದಾಯ ಜೀವನ ಕುರಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಗುಣಮಟ್ಟದ ಶಿಕ್ಷಣ, ಗ್ರಾಮೀಣ ಜೀವನ, ಪರಿಸರ, ಆರೋಗ್ಯ ಮತ್ತು ನೈರ್ಮಲ್ಯದ ಸಮಸ್ಯೆಗಳು ಮತ್ತು ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಶಿಕ್ಷಕ ಪ್ರಶಿಕ್ಷಣಾರ್ಥಿಗಳು ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕು. ಅವುಗಳಿಗೆ ಪರಿಹಾರ ಒದಗಿಸಬೇಕು. ಶಿಕ್ಷಕರು ಸಬಲರಾದರೆ ಅದು ಸಮುದಾಯಗಳನ್ನು ಶ್ರೀಮಂತಗೊಳಿಸಿದಂತೆ. ನಮ್ಮ ಬಿಎಡ್ ಪ್ರಶಿಕ್ಷಣಾರ್ಥಿಗಳು ವಿಶ್ವವಿದ್ಯಾಲಯದ ಸುತ್ತಲಿನ ಗ್ರಾಮಗಳಿಗೆ ಭೇಟಿ ನೀಡಬೇಕು ಮತ್ತು ಅಲ್ಲಿನ ಮಕ್ಕಳ ಕಲಿಕೆಯನ್ನು ಹೆಚ್ಚಿಸಲು ಸ್ಥಳೀಯ ಶಾಲೆಗಳೊಂದಿಗೆ ಕೆಲಸ ಮಾಡಬೇಕು. ಅಲ್ಲದೆ ಅಲ್ಲಿಯ ಜನರಲ್ಲಿ ಪರಿಸರ ಮತ್ತು ಸಮುದಾಯದ ಬಗೆಗೆ ಅವರ ಜವಬ್ದರಿ ಕುರಿತು ತಿಳಿಹೆಳಬೇಕು” ಎಂದು ಅವರು ಹೇಳಿದರು.
ಮರಗಳನ್ನು ಬೆಳೆಸುವ ಮತ್ತು ನಮ್ಮ ಪ್ರಕೃತಿಯನ್ನು ರಕ್ಷಿಸುವ ಅಗತ್ಯತೆಯ ಕುರಿತು ಮಾತನಾಡಿದ ಅವರು “ಪ್ರತಿಯೊಬ್ಬರೂ ಪ್ರಕೃತಿಯ ಬಗ್ಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು. ಗಿಡಗಳನ್ನು ನೆಟ್ಟು ಭೂಮಿ ಮತ್ತು ಜಲ ಸಂರಕ್ಷಣೆ ಮಾಡಬೇಕು. ನಾವು ವಿಶ್ವವಿದ್ಯಾಲಯದ ಆವರಣವನ್ನು ಸಂಪೂರ್ಣವಾಗಿ ಹಸಿರು ಆವರಣ ಮಾಡಲು ಬಯಸುತ್ತೇವೆ ಅದಕ್ಕಾಗಿ ಈ ವರ್ಷ 2000 ಸಸಿಗಳನ್ನು ನೆಡುತ್ತಿದ್ದೇವೆ” ಎಂದು ಹೇಳಿದರು.
ಶಿಕ್ಷಣ ನಿಕಾಯದ ಡೀನ್ ಪೆÇ್ರ.ಜಿ.ಆರ್.ಅಂಗಡಿ ಮಾತನಾಡಿ, “ನಮ್ಮ ಬಿಎಡ್ ಪ್ರಶಿಕ್ಷಣಾರ್ಥಿಗಳಿಗಾಗಿ ಈ ಸಮುದಾಯ ಜೀವನ ಕುರಿತ ಶಿಬಿರ ಮತ್ತು ಮರ ನೆಡುವ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಇದು ಅವರಲ್ಲಿ ಸಮುದಾಯದ ಸಹಭಾಗಿತ್ವದ ಬಗ್ಗೆ ಜವಾಬ್ದಾರಿಯುತ ಪ್ರಜ್ಞೆಯನ್ನು ಮೂಡಿಸಲು ಸಹಕಾರಿಯಾಗುತ್ದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ.ಬಸವರಾಜ ಕುಬಕಡ್ಡಿ, ಡಾ.ಸಾಯಿ ಅಭಿನವ ಸೇರಿದಂತೆ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.