ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಲಬುರಗಿ-ಬೆಂಗಳೂರು ಕರೋನಾ(ಎ/ಸಿ ಸ್ಲೀಪರ್) ಬಸ್ ಜು. 12 ರಿಂದ ಮರು ಕಾರ್ಯಾಚರಣೆ
ಕಲಬುರಗಿ:ಜು.11:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1ರ ಘಟಕ-1ದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಲಬುರಗಿ-ಬೆಂಗಳೂರು ಕರೋನಾ (ಎ.ಸಿ.) ಸ್ಲೀಪರ್ ಬಸ್‍ನ್ನು ಇದೇ ಜುಲೈ 12 ರಿಂದ ಮರು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.