ಜಯದೇವ ಆಸ್ಪತ್ರೆ ಕಾಮಗಾರಿ ಪರಿಶೀಲನೆ ಸೆಪ್ಟೆಂಬರ್‍ನಲ್ಲಿ ಲೋಕಾರ್ಪಣೆ:ಡಾ. ಶರಣಪ್ರಕಾಶ ಪಾಟೀಲ
ಕಲಬುರಗಿ:ಜು.11: ಕಲಬುರಗಿಯಲ್ಲಿ ಸುಮಾರ 183 ಕೋಟಿ ವೆಚ್ಚದ ಅನುದಾನದಡಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು ಇನ್ನೂ 2-3 ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು
ಗುರುವಾರದಂದು ನಿರ್ಮಾಣದ ಹಂತದಲ್ಲಿರುವ ಜಯದೇದ ಹೃದ್ರೋಗ ಹಂತದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿ, ಈಗಾಗಲೇ 183 ಕೋಟಿ ಅನುದಾನದಲ್ಲಿ ಕಾಮಗಾರಿಗಳ ಪೂರ್ಣಗೊಂಡಿದ್ದು, ಇನ್ನೂ 60 ಕೋಟಿ ಅನುದಾನ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಎಂದರು
ಮೂಲಭೂತ ಸೌಕರ್ಯಗಳ ಬಗ್ಗೆ ಇನ್ನೂ ಉಳಿದಂತೆ ಕೆಲಸ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು. 371 ಜೆ ಜಾರಿ ದಶಮಾನೋತ್ಸವದ ಕೊಡುಗೆಯ ಈ ಆಸ್ಪತ್ರೆ ಸೆಪ್ಟೆಂಬರ್ ಎರಡು ಮೂರು ವಾರಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನಮ್ಮ ಸರ್ಕಾರ ಸಮರ್ಪಸಲಿದೆ ಎಂದರು.
11 ಕೆ.ವಿ ವಿದ್ಯುತ್ ಸಮಸ್ಯೆಗಳು ಇವೆ ಎಲ್ಲ ವಿದ್ಯುತ್ತಿನ ಸಮಸ್ಯೆಗಳು ಇನ್ನೂ 15 ದಿನಗಳು ಬೇಕಾಗುತ್ತವೆ. ಎಂ.ಆರ್.ಐ. ಸ್ಕ್ಯಾನ್, ವಿದ್ಯುತ್‍ಚ್ಪಕ್ತಿ ಬೇಕಾಗುತ್ತದೆ ಹಾಗೂ ಕುಡಿಯವ ನೀರಿನ ಸಮಸ್ಯೆಗಳು ಇವೆ ಎಂದರು.
ಎಲ್ಲಾ ಕಾಮಗಾರಿಗಳು ಹಾಗೂ ಪಿಠೋಪಕರಣ ಕಾಮಗಾರಿ ಆಗಸ್ಟ್ ಅಂತ್ಯದವರೆಗೆ ಮುಗಿಯುವ ಹಂತದಲ್ಲಿ ಇವೆ ಎಂದರು. ಕ್ಯಾನ್ಸರ್ ಆಸ್ಪತ್ರೆಗೆ 150 ಬೆಡಗಳು ಹಾಗೂ ಐ.ಟಿ.ಯ. ಕಾಲೇಜ್ 20 ಕೋಟಿ ಪ್ರಸ್ತಾವನೆಯನ್ನು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಹೊಸ ಐ.ಟಿ.ಐ ಕಾಲೇಜ್ Áಗುವುದು ಎಂದರು.
ಸೂಪರ ಸ್ಪೆμÁಲಿಟಿ ಆಸ್ಪತ್ರೆಗೆ ಕಾಮಗಾರಿ ಸಹ ಅಂತಿಮ ಹಂತದಲ್ಲಿದ್ದು, ಸಂಪುಟ ಸಭೆಯ ನಂತರ ಕಲಬುರಗಿಯಲ್ಲಿ ಜನಸ್ಪಂಧನಾ ಕಾರ್ಯಕ್ರಮವನ್ನು ಕಲಬುರಗಿಯಲ್ಲಿ ಆಯೋಜಿಸಲಾಗುವುದು ಸರ್ಕಾರದಿಂದ ಯುವನಿಧಿ ಸಿಗುವಂತ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಮೂರು ಮೆಡಿಕಲ್ ಕಾಲೇಜ್‍ಗಳು ಪ್ರಸ್ತಾನೆಗಳು ಸಲ್ಲಿಸಿದ್ದು, ನಮ್ಮ ಸರ್ಕಾರ ಪಾರದರ್ಶಕವಾಗಿ ಮೂರು ಮೆಡಿಕಲ್ ಕಾಲೇಜ್‍ಗಳಿಗೆ ಪರವಾನಗಿ ನೀಡಲಾಗಿದೆ ಇನ್ನೂ ಉಳಿದಂತೆ ಎರಡು ಸರ್ಕಾರಿ ಮೆಡಿಕಲ್ ಕಾಲೇಜ್‍ಗಳು ಮುಂದಿನ ವರ್ಷ ಪರವಾನಗಿ ನೀಡಲಾಗುವುದು ಎಂದು ಸಚಿವರು ಹೇಳಿದರು.