ಜನಸಂಖ್ಯಾ ಹೆಚ್ಚಳದಿಂದ ಆರ್ಥಿಕ ಬೆಳವಣಿಗೆ ಕುಂಠಿತ
ಕಲಬುರಗಿ :ಜು.11:ಜನಸಂಖ್ಯಾ ಹೆಚ್ಚಳದಿಂದಆರ್ಥಿಕ ಬೆಳವಣಿಗೆ ಉದ್ಯೋಗಮತ್ತುಆದಾಯದ ವಿತರಣೆಯ ಮೇಲೆ ಪರಿಣಾಮ ಬೀರುತ್ತದೆಎಂದುಡಾ.ಬಿ.ಆರ್. ಅಂಬೇಡ್ಕರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕಿಡಾ.ನಿರ್ಮಲ ಸಿರಗಾಪೂರ ಅಭಿಪ್ರಾಯ ಪಟ್ಟರು.
ನಗರದಗೋದುತಾಯಿದೊಡ್ಡಪ್ಪಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿಗುರುವಾರಅರ್ಥಶಾಸ್ತ್ರ ವಿಭಾಗದಿಂದ ವಿಶ್ವಜನಸಂಖ್ಯಾ ದಿನಾಚರಣೆಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು, ವಿಶ್ವದಲ್ಲಿ ವೇಗವಾಗಿ ಹೆಚ್ಚುತ್ತಿರುವಜನಸಂಖ್ಯೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಭಾರತದಆರ್ಥಿಕತೆಯ ಮೇಲಾಗುವ ಪರಿಣಾಮಗಳ ಬಗ್ಗೆ ಬೆಳಕನ್ನು ಚೆಲ್ಲಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆಡಾ.ಪುಟ್ಟಮಣಿದೇವಿದಾಸಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಲ್ಲಿಅಜ್ಞಾನ, ಮೌಢ್ಯಯುತಧಾರ್ಮಿಕ ಶ್ರದ್ಧೆ ಹಲವಾರು ಕಾರಣಗಳು ಜನಸಂಖ್ಯೆಏರಿಕೆಗೆಕಾರಣವಾಗಿವೆ.ಆರೋಗ್ಯಕರ ಸಮಾಜ ಮತ್ತು ಮುಂಬರುವ ಪೀಳಿಗೆಗೆ ಉತ್ತಮ ಮತ್ತು ಸುಸ್ಥಿರ ಭವಿಷ್ಯವನ್ನುಒದಗಿಸಲುಜನಸಂಖ್ಯಾ ಹೆಚ್ಚಳಕ್ಕೆ ಕಡಿವಾಣ ಹಾಕುವುದು ಬಹಳ ಮುಖ್ಯವಾಗಿದೆ. ಭಾರತದಜನಸಂಖ್ಯೆ 144 ಕೋಟಿಇದೆ. ಹೀಗೆ ಮುಂದುವರೆದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆಎಂದು ಕಳವಳ ವ್ಯಕ್ತಪಡಿಸಿದರು.
ವಿಭಾಗದ ಮುಖ್ಯಸ್ಥರಾದ ಡಾ.ಸಿದ್ಧಲಿಂಗರೆಡ್ಡಿ ಮಾತನಾಡಿ, ವಿಶ್ವಸಂಸ್ಥೆಯ ವರದಿಯ ಪ್ರಕಾರ ವಿಶ್ವಜನಸಂಖ್ಯೆಯು 2050 9.7 ಶತಕೋಟಿಯನ್ನುತಲಪುತ್ತದೆ ಹಾಗು 2080 ರಲ್ಲಿಅದು 10.4 ಶತಕೋಟಿಯನ್ನುತಲಪುತ್ತದೆಎಂದು ಅಂದಾಜಿಸಿದೆ. ಆದ್ದರಿಂದಜನಸಂಖ್ಯೆಯಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಹಾಗು ಕುಟುಂಬ ಯೋಜನೆ, ಲಿಂಗ ಸಮಾನತೆ ,ತಾಯಿ ಮಕ್ಕಳ ಆರೋಗ್ಯದ ಬಗ್ಗೆ ಮುಂತಾದ ವಿಚಾರಗಳನ್ನು ಈ ವಿಶೇಷವಾದ ದಿನದಲ್ಲಿಚರ್ಚೆ ಮಾಡಲಾಗುತ್ತೆ. ವಿಶ್ವ ಸಂಸ್ತೆಯ ಅಂಗ ಸಂಸ್ಥೆಯಾದUಓಆPಜನರಲ್ಲಿಜಾಗೃತಿ ಮೂಡಿಸಲು ಪ್ರತಿ ವರ್ಷಜುಲೈ 11 ರಂದು ವಿಷಜನಸಂಖ್ಯಾ ದಿನವನ್ನಾಗಿಆಚರಣೆ ಮಾಡುತ್ತಾ ಬಂದಿದೆಎಂದರು.ಆರ್ಥಿಕ ಪ್ರಗತಿಗೆ ಮಾನವ ಸಂಪನ್ಮೂಲ ಅವಶ್ಯಕ, ಆದರೆಅಭಿವೃದ್ಧಿದರಕ್ಕಿಂತಜನಸಂಖ್ಯಾ ಬೆಳವಣಿಗೆ ದರ ಹೆಚ್ಚಿದರೆಅದುಆರ್ಥಿಕ ಪ್ರಗತಿಗೆ ಮಾರಕವಾಗುತ್ತದೆ. ಆದ್ದರಿಂದಜನಸಂಖ್ಯಾ ಬೆಳವಣಿಗೆಯಾವಾಗಲೂಆರ್ಥಿಕಅಭಿವೃದ್ಧಿದರಕ್ಕಿಂತಕಡಿಮೆಇರಬೇಕುಅಂದಾಗ ಮಾತ್ರಒಂದುರಾಷ್ಟ್ರಆರ್ಥಿಕವಾಗಿಜಾಗತಿಕವಾಗಿ ಪ್ರಗತಿ ಹೊಂದುವುದಕ್ಕೆ ಸಾಧ್ಯಎಂದರು.
ಪ್ರಾಧ್ಯಾಪಕಿ ಶ್ರೀಮತಿ ನಿರ್ಮಲ ದೇವಾಡಿಗ ಸ್ವಾಗತಿಸಿದರೆ, ಕು. ವಂದನಾ ವಂದಿಸಿದರು.