ಗೊಟೂರ್: ದಾದಾ ಅಲಿ ಅಬ್ಬಾಸ ಜಾತ್ರಾ ಮಹೋತ್ಸವ
ಕಾಳಗಿ,ಜು.11- ತಾಲೂಕಿನ ಸುಕ್ಷೇತ್ರದ ಗೊಟೂರ್ ಗ್ರಾಮದ ದಾದಾ ಅಲಿ ಅಬ್ಬಾಸ ಜಾತ್ರಾ ಮಹೋತ್ಸವ ಜು.16ರಿಂದ ಮೂರು ದಿನಗಳ ಕಾಲ ಜರುಗಲಿದೆ.
ಇದೇ ಜುಲೈ 16 ಮಂಗಳವಾರ ಶ್ರೀಗಂದ ಸಂದಲ್ ಉತ್ಸವ, ಜು.17 ರಂದು ದಿಪೆÇೀತ್ಸವ ಮತ್ತು 18 ರಂದು ಜಿಯಾರತ್ ಸಮಾರೋಪ ಸಮಾರಂಭ ನಡೆಯಲಿದೆ.
ಜುಲೈ 16 ರಂದು ಬೆಳಿಗ್ಗೆ 7:00 ಘಂಟೆಗೆ ಗ್ರಾಮದ ಅಬ್ಬಾಸ ಅಲಿ ಮುತ್ಯಾ ಅವರ ಮನೆಯಿಂದ ಶ್ರೀಗಂಧ ಸಂದಲ ಉತ್ಸವ ಹೊರಡಲಿದ್ದು, ಜಾಮಿಯಾ ಮಸೀದಿ ಮಾರ್ಗವಾಗಿ ದರ್ಗಾ ಕ್ಕೆ ತಲುಪುವುದು ಬೆಳಿಗ್ಗೆ 11:45ಕ್ಕೆ ಸಲಾಂ, ದರುದ ಶರೀಫ ಸಲ್ಲಿಸುವ ಮೂಲಕ ಗಂದೊತ್ಸವ ಜರುಗಲಿದೆ.
ಸದ್ಭಕ್ತರು ಈ ಉತ್ಸವದಲ್ಲಿ ಭಾಗವಹಿಸುವಂತೆ ಅಲಿ ಅಬ್ಬಾಸ ಮುತ್ಯಾ ಹಾಗೂ ದರ್ಗಾ ಕಮಿಟಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.