ಆಸ್ತಿಗಾಗಿ ಮಗನಿಂದಲೇ ತಂದೆಯ ಕೊಲೆ
ಇಂಡಿ,ಜು.11-ಆಸ್ತಿ ವಿಚಾರವಾಗಿ ಕುಡಿದ ಅಮಲಿನಲ್ಲಿ ಹರಿತವಾದ ಆಯುಧದಿಂದ ಹೊಡೆದು ಮಗ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಇಂಡಿ ತಾಲೂಕಿನ ಚಿಕ್ಕಮಣ್ಣೂರ್ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಣ್ಣ ಮ್ಯಾಗೇರಿ (65) ಕೊಲೆಯಾದವರು. ಮಗ ಪ್ರಕಾಶ್ ಮ್ಯಾಗೇರಿ (33) ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಸುದ್ದಿ ತಿಳಿದು ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪ್ರಕಾಶ್ ಮ್ಯಾಗೇರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.