ಖರ್ಗೆ ಸಾಹೇಬರ 371 ಜೆ ಕೊಡುಗೆಗೆ ಋಣ ತೀರಿಸಿದ ಕಲ್ಯಾಣ ಕರ್ನಾಟಕದ ಮತದಾರರು: ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಸೇಡಂ, ಜು,11: ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಅತಿ ಹಿಂದುಳಿದ ಪ್ರದೇಶಕ್ಕೆ 371ಜೆ ಜಾರಿಗೆ ತರುವ ಮೂಲಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಬಡವರ ದೀನದಲಿತರ ಹೇಳಿಗಾಗಿ ಶ್ರಮಿಸಿದ ಮಹಾನ್ ನಾಯಕ ಅಭಿವೃದ್ಧಿ ಕಾಮಗಾರಿಗಳ ಚಿಂತಕರು ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ್ ಸಾಹೇಬರ ನೀಡಿದ ಕೊಡುಗೆಗೆ ಕಲ್ಯಾಣ ಕರ್ನಾಟಕದ ಮತದಾರರು ಋಣ ತೀರಿಸಿದ ಎಲ್ಲಾ ಮತದಾರರಿಗೂ ಧನ್ಯವಾದಗಳು ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಊಡಗಿ ಹೇಳಿದರು.
ಪಟ್ಟಣದ ಚಿಂಚೋಳಿ ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿರುವ ಬ್ಲಾಕ್ ಕಾಂಗ್ರೆಸ್ ಮೂಧೊಳ ಹಾಗೂ ಸೇಡಂ ವತಿಯಿಂದ ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯರುಗಳ ಅಭಿನಂದನಾ ಸಮಾರಂಭದಲ್ಲಿ ಸಸಿಗೆ ನೀರುಣಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಸಾಹೇಬರ ಮುಂದಾಳತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ತರುವಲ್ಲಿ ಕಾರಣಿ ಭೂತರಾಗಿದ್ದಾರೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಎಮ್ ಎಲ್ ಸಿ ಗಳಿದಾ ಜಗದೇವ ಗುತ್ತೇದಾರ್, ಚಂದ್ರಶೇಖರ್ ಪಾಟೀಲ್, ಹಾಗೂ ಸುಭಾಷ್ ರಾಠೋಡ ಚಿಂಚೋಳಿ ಮಾತನಾಡಿದರು.
ಈ ವೇಳೆಯಲ್ಲಿ ಬಸವರಾಜ ಪಾಟೀಲ್ ಊಡಗಿ, ನಾಗೇಶ್ವರರಾವ್ ಪಾಟೀಲ್, ಶರಣರೆಡ್ಡಿ ಪಾಟೀಲ್, ರವಿ ನಂದಿಗಾಮ, ಸತೀಶ್ ಪಾಟೀಲ್ ರಂಜೋಳ, ವಿಶ್ವನಾಥ್ ಪಾಟೀಲ್ ಅರೆಬೋಮನಳ್ಳಿ, ಧುಳಪ್ಪಾ ದೊಡ್ಮನಿ, ಜಗದೇವಪ್ಪ ಪಾಟೀಲ್ ಕೋಂಕನಳ್ಳಿ, ಬಸವರಾಜ ಸಜ್ಜನ ಸುಲಪೇಟ್, ಬಸವರಾಜ್ ರೇವಗೊಂಡ, ಮಹೇಶ್ ಪಾಟೀಲ್ ತರನಳ್ಳಿ, ಜೈ ಭೀಮ್ ಊಡಗಿ, ಭೀಮಾಶಂಕರ ಕೋಳ್ಳಿ, ಸುಂದರ ಮಂಗಾ ಮಳಖೇಡ, ನಾಗೇಶ್ ಕಾಳಾ, ವೆಂಕಟೇಶ್ ಗುತ್ತೇದಾರ್, ಅಬ್ದುಲ್ ರಶೀದ್ ರಂಜೋಳ್, ಹಫೀಜ್ ಆರ್, ಅಬ್ದುಲ್ ಬಪುರ್, ಹೇಮರೆಡ್ಡಿ ಪಾಟೀಲ್, ವಿಶ್ವನಾಥ್ ಪಾಟೀಲ್ ಕುಕ್ಕುಂದಾ, ಬಸವರಾಜ್ ಪಾಟೀಲ್ ಮಳಖೇಡ, ರಾಜಶೇಖರ ಪೂರಾಣಿಕ ಮಳಖೇಡ, ರಾಮಯ್ಯ ಪುಜಾರಿ, ಜಗನ್ನಾಥ್ ಚಿಂತಪಳ್ಳಿ, ರಾಜು ಪಾಟೀಲ್ ಬೆನಕನಳ್ಳಿ, ಮಾರುತಿ ಕೋಡಂಗಲ್, ಸತೀಶ್ ಪೂಜಾರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಐದು ಗ್ಯಾರಂಟಿಗಳು ಬಡವರ ಸ್ವಾವಲಂಬಿ ಜೀವನಕ್ಕೆ ಪೂರಕವಾಗುವಂತೆ ಜಾರಿಗೆ ತರಲಾಗಿದೆ ಚುನಾವಣೆಗಾಗಿ ಅಲ್ಲಾ ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲುವುದಿಲ್ಲ.
ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ ಖರ್ಗೆ ಹೆಚ್ಚಿನ ಶ್ರಮ ಹಾಗೂ ಜಿಲ್ಲಾ ತಾಲೂಕಾ ಗ್ರಾಮೀಣ ಪ್ರದೇಶದ ಎಲ್ಲಾ ಕಾರ್ಯಕರ್ತರ ಗೆಲುವಿಗಾಗಿ ನಿರಂತರ ಪ್ರಯತ್ನ ಮಾಡಿ
ಗೆಲ್ಲಿಸುವಲ್ಲಿ ಹೆಚ್ಚಿನ ಶ್ರಮವಹಿಸಿದ ನಿಮಗೆ ಧನ್ಯವಾದಗಳು, ಮುಂಬರುವ ದಿನಗಳಲ್ಲಿ ಎಲ್ಲಾ ಚುನಾವಣೆಯಲ್ಲಿ ಸಹಕಾರ ನಿಮ್ಮದಿರಲಿ ಹಾಗೂ ನಿಮ್ಮ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಹಿಂಜರಿಯಬೇಡಿ ನೇರವಾಗಿ ಬಂದು ಭೇಟಿ ನೀಡಿ.
ರಾಧಾಕೃಷ್ಣ ದೊಡ್ಡಮನಿ ಲೋಕಸಭೆ ಸದಸ್ಯರು ಕಲಬುರ್ಗಿ