ನೈರ್ಮಲ್ಯವನ್ನು ಪಾಲಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ:ಶಿಫಾ ಜಮಾದಾರ
ವಿಜಯಪುರ,ಜು.11 ನೈರ್ಮಲ್ಯವನ್ನು ಪಾಲಿಸುವಲ್ಲಿ ವಿದ್ಯಾರ್ಥಿಗಳು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಸ್ವಚ್ಚತೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ನೈರ್ಮಲ್ಯದ ವಾತಾವರಣವನ್ನು ನಿರ್ಮಿಸುವಲ್ಲಿ ಶಾಲಾ-ಕಾಲೇಜುಗಳ ಪಾತ್ರ ಮುಖ್ಯವಾಗಿದೆ ಎಂದು ಲಾಡಲಿ ಫೌಂಡೇಶನ ಟ್ರಸ್ಟ್ ದ ಸ್ವಚ್ಚತಾ ರಾಯಭಾರಿ ಶಿಫಾ ಜಮಾದಾರ ಅಭಿಪ್ರಾಯಪಟ್ಟರು.
ಬುಧವಾರ ನಗರದ ಅಫಜಲಪೂರ ಟಕ್ಕೆಯಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ- 49 ರಲ್ಲಿ ಲಾಡಲಿ ಫೌಂಡೇಶನ ಟ್ರಸ್ಟ್ ನವದೆಹಲಿ ಹಾಗೂ ವಿಜಯಪುರ ಜಿಲ್ಲಾಡಳಿತ ಇವರ ಸಹಯೋಗದಲ್ಲಿ ಜರುಗಿದ ಶಾಲೆಯ ಮಕ್ಕಳಲ್ಲಿ ಸ್ವಚ್ಚತೆಯ ಅರಿವು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ನೈರ್ಮಲ್ಯ ಮತ್ತು ನೈರ್ಮಲ್ಯದ ಮೂಲ ಅರ್ಥವನ್ನು ಮಾಡಿಕೊಳ್ಳಬೇಕು. ಶೌಚಾಲಯಗಳನ್ನು ನೈರ್ಮಲ್ಯವಾಗಿ ಬಳಸಬೇಕು. ವಾಶರೂಮ್ ಗಳನ್ನು ಬಳಸಿದ ನಂತರ ಅದರ ಸ್ವಚ್ಚ ಪರಿಸರವನ್ನು ಕಾಪಾಡಿಕೊಳ್ಳಬೇಕು. ಮಕ್ಕಳಿಗೆ ಸ್ವಚ್ಚತೆಯ ಅಂಶದ ಬಗ್ಗೆ ಅರಿವು ಮೂಡಿಸಬೇಕು. ನಿಯಮಿತವಾಗಿ ಕೈ ತೊಳೆಯುವದು, ಸ್ವಚ್ಚವಾಗಿರುವುದು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸುವುದು ಮುಂತಾದ ಮೂಲಭೂತ ವಿಷಯಗಳನ್ನು ತಿಳಿಸಬೇಕಾಗಿದೆ ಎಂದರು.
ಲಾಡಲಿ ಫೌಂಡೇಶನ್ ಟ್ರಸ್ಟ್ ನವದೆಹಲಿಯ ಯೋಜನಾ ನಿರ್ದೇಶಕಿ ಸೂರಬಿ ಸಿಂಗ್ ಮಾತನಾಡಿ, ಶಿಕ್ಷಕರು ಮತ್ತು ಪೆÇೀಷಕರು ನೈರ್ಮಲ್ಯ ಕಾಪಾಡುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಅವರು ಮಕ್ಕಳಲ್ಲಿ ಸ್ವಚ್ಚತೆಯ ಭಾವನೆಯನ್ನು ಬೆಳೆಸಬೇಕು. ಮತ್ತು ನೈರ್ಮಲ್ಯವನ್ನು ಪೆÇ್ರೀತ್ಸಾಹಿಸಬೇಕು. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆ, ಮನೆಗಳು ಹೇಗೆ ಸ್ವಚ್ಚಗೊಳಿಸಬೇಕು, ಹೇಗೆ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿದಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ಆಟದ ಜೊತೆಗೆ ಸ್ವಚ್ಚತೆಯ ಅರಿವು ಮತ್ತು ಆಹಾರ ಪದಾರ್ಥ ಪ್ಯಾಕೇಜ್, ಜೂಸ್ ಪ್ಯಾಕೇಜ್ ನೀಡಿ ಅದನ್ನು ಬಳಸಿದ ನಂತರ ವಿದ್ಯಾರ್ಥಿಗಳು ಯಾವ ರೀತಿ ತಾಜ್ಯ ವಿಲೇವಾರಿ ಮಾಡಬೇಕು ಮತ್ತು ಕೈ ತೊಳೆದುಕೊಳ್ಳಬೇಕೆಂದು ತರಬೇತಿ ನೀಡಲಾಯಿತು.
ಶಾಲಾ ಮುಖ್ಯಾಧ್ಯಾಪಕ ಚಂದ್ರಕಾಂತ ಕನಸೆ, ಶಿಕ್ಷಕರಾದ ಶಿವಾನಂದ ರೂಗಿ, ಮಲ್ಲಪ್ಪ ಸ್ವಾಮಿ, ನೀಲಮ್ಮ ಹಳ್ಳೂರ, ರುಕ್ಸಾನಾ ಮನಿಯಾರ, ಸವಿತಾ ಜಿಗರಿ, ಲಾಡಲಿ ಫೌಂಡೇಶನ್ ದ ಕಾರ್ಯಕ್ರಮ ಸಮನ್ವಯಾಧಿಕಾರಿ ಸರಿತಾ ಚಕ್ರಸಾಲಿ, ಪ್ರೀತಿ, ಶೇಖರ ಪೆÇೀಲು ಉಪಸ್ಥಿತರಿದ್ದರು.