ಗುಟ್ಕಾ ತಿನ್ನಬೇಡಿ, ಕ್ಯಾನ್ಸರ್ ತರಿಸಿ ಕೊಳ್ಳಬೇಡಿ:ವೀರಭದ್ರಪ್ಪ ಉಪ್ಪಿನ
ಬೀದರ: ಜು.11:ಗುಟ್ಕಾ ತಿನ್ನುವದು, ತಂಬಾಕಿನ ಉತ್ಪನ್ನಗಳನ್ನು ಸೇವಿಸುವುದು ಮಾಡುವ ಮೂಲಕ, ಶರೀರದ ಅಂಗಾಂಗವನ್ನು ಹಾಳು ಮಾಡಿ ಕೊಳ್ಳಬೇಡಿ ಎಂದು ಪಶುವೈದ್ಯ ಕೀಯ ವಿಶ್ವ ವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿ ಕಾರಿ ವೀರಭದ್ರಪ್ಪ ಉಪ್ಪಿನ ರವರು ಜನತೆಗೆ ಕರೆ ನೀಡಿದರು.
ಅವರು ಇಂದು ಬೀದರಿನ ಬರೀದಶಾಹಿ ಉದ್ಯಾನ ದಲ್ಲಿ ಆಯೋಜಿಸಿದ್ದ “ವಿಶ್ವ ಮಾದಕ ಪದಾರ್ಥಗಳ ನಿಷೇಧ ದಿನಾಚರಣೆ” ಯಲ್ಲಿ ಮಾತನಾಡುತ್ತಿದ್ದರು. ದೇವರು ಸುಂದರವಾದ ಶರೀರವನ್ನು ಬಳುವಳಿಯಾಗಿ ನೀಡಿದ್ದು, ಅದನ್ನು ಕಾಪಾಡಿಕೊಂಡು ಹೋಗಲು ನೈಸರ್ಗಿಕವಾದ ವ್ಯವಸ್ಥೆಯನ್ನು ಕೂಡ ಮಾಡಿ ದ್ದಾನೆ. ಆದರೆ ಮನುಷ್ಯನು ತನ್ನ ಕೆಟ್ಟ ಚಟಗಳಿಂದ ಗುಟ್ಕಾ ತಿನ್ನು ವುದು, ಧೂಮಪಾನ/ಮದ್ಯ ಪಾನ ದಂತಹ ವ್ಯಸನಗಳಿಗೆ ಶರಣಾಗಿ, ಶರೀರವನ್ನು ತನ್ನ ಕೈಯಾರೆ ತಾನೇ ಹಾಳು ಮಾಡಿ ಕೊಳ್ಳುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಚಿಕ್ಕ ಮಕ್ಕಳು ಹಾಗೂ ಮಹಿಳೆಯರು ಕೂಡ ಮಾದಕ ಪದಾರ್ಥಗಳ ಸೇವ ನೆಗೆ ದಾಸರಾಗಿರುವುದು ಅತ್ಯಂತ ದುಖಃದ ಸಂಗತಿಯಾ ಗಿದೆ ಎಂದು ನುಡಿದರು. ಅಖಿಲ ಭಾರತ ವಿಶ್ವವಿದ್ಯಾಲ ಯಗಳ ನೌಕರರ ಒಕ್ಕೂಟ ಹಾಗೂ ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಬೀದರ ಇವುಗಳ ಅಧೀನದಲ್ಲಿ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಪ್ರಗತಿ..ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಅವರು ಮಾತನಾಡಿ, ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಸೇವನೆಯು ಆರೋಗ್ಯಕ್ಕೆ ಅಪಾಯಕಾರಿ ಎಂದು ಸರ್ಕಾರವು ಜನರನ್ನು ಜಾಗೃತಗೊಳಿಸುತ್ತಿದೆ. ಆದಾ ಗ್ಯೂ ಜನರು ಮಾದಕ ದ್ರವ್ಯಗಳ ಸೇವನೆಯನ್ನು ಮುಂದುವರೆಸಿ ಕೊಂಡು ಹೋಗುತ್ತಿದ್ದಾರೆ. ಸರ್ಕಾರದ ಯೋಜನೆಯು ನಿರೀಕ್ಷಿತ ಮಟ್ಟದ ಯಶಸ್ಸನ್ನು ಸಾಧಿಸಿರುವುದಿಲ್ಲ. ಜನತೆಯ ಆರೋಗ್ಯದ ಕಾಳಜಿ ಇದ್ದರೆ, ಸರಕಾರವು ಮಾದಕ ದ್ರವ್ಯಗಳ ಉತ್ಪಾದನೆಯನ್ನು ನಿಷೇಧಿಸ ಬೇಕೆಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ, ತಂಬಾಕು ಪದಾರ್ಥಗಳ ಸೇವನೆ ಮಾಡುವುದಿಲ್ಲ ಎನ್ನುವ ಪ್ರತಿಜ್ಞಾ ಬೋಧನೆ ಹಾಗೂ ವಿವಿಧ ಕಂಪನಿಗಳ ಉತ್ಪಾದನೆಗಳ ಗುಟ್ಕಾ, ಜರ್ದಾ, ಬೀಡಿ ಹಾಗೂ ಸಿಗರೇಟಗಳನ್ನು ಸಾಂಕೇತಿಕವಾಗಿ ದಹನ ಮಾಡಲಾಯಿತು”” ಶಿವ ಕುಮಾರ್, ರಿತೇಶ್, ಶೌಕತ್, ಸಲಮಾನ, ಅಬ್ದುಲ, ಸಂತೋ ಷ, ಇಮ್ಯಾನುವೆಲ, ಕಲ್ಲಪ್ಪ ಮುಂತಾದವರು ಹಾಜರಿದ್ದರು.