ಗ್ರಾಮೀಣ ಪ್ರದೇಶಕ್ಕೂ ಶೀಘ್ರ 4ಜಿ ಸೇವೆ ಒದಗಿಸಲು ಸಂಸದ ಜಿಗಜಿಣಗಿ ಸೂಚನೆ
ವಿಜಯಪುರ,ಜು.11:ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳಿಗೂ ಬಿಎಸ್‍ಎನ್‍ಎಲ್ 4ಜಿ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಆದ್ಯತೆ ಮೇರೆಗೆ ಕಾರ್ಯ ನಿರ್ವಹಿಸುವಂತೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಿಎಸ್‍ಎನ್‍ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ನಡೆದ ಬಿಎಸ್‍ಎನ್‍ಎಲ್ ಟೆಲಿಕಾಂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಅವಳಿ ಜಿಲ್ಲೆಯ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
ಬಿಎಸ್‍ಎನ್‍ಎಲ್‍ನ ಡಿಜಿಎಂ ರವೀಂದ್ರ ಜಂಬಗಿ ಅವರು ಮಾತನಾಡಿ, ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ 4ಜಿ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗಿದೆ. ಇದನ್ನು ಸುಲಭವಾಗಿ 5ಜಿಗೆ ಉನ್ನತೀಕರಿಸಬೇಕಾಗಿದ್ದು, ಮುಂದಿನ 10 ತಿಂಗಳೊಳಗೆ ಜಿಲ್ಲೆಯಾದ್ಯಂತೆ 343 ಹೊಸ 4ಜಿ ಮೊಬೈಲ್ ಟವರ್‍ಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಉಪ ಮಹಾಪ್ರಬಂಧಕ ಅರವಿಂದ ಸಕಟೆ, ಎಜಿಎಂ ಎ.ವ್ಹಿ.ಮಹಾಜನ್, ಮುಖ್ಯ ಲೆಕ್ಕಾಧಿಕಾರಿ ಎ.ಎಂ.ಪಾಟೀಲ, ಎಜಿಎಂ ಎಸ್.ಎಂ.ರಾಠೋಡ, ವಿ.ಡಿ.ನಾಯಕ, ಲೆಕ್ಕಾಧಿಕಾರಿ ರಾಮಪ್ಪ ಹೂಗಾರ ಸಭೆಯಲ್ಲಿ ಉಪಸ್ಥಿತರಿದ್ದರು.