ಕರಾಟೆ ಪಟುಗಳ ಅಮೋಘ ಸಾಧನೆ
ವಿಜಯಪುರ,ಜು.11:ಜು.6,7ರಂದು ಗದಗ ನಗರದ ಕನಕ ಭವನದಲ್ಲಿ ಗೋಲ್ಡನ್ ಕರಾಟೆ ಸ್ಪೋಟ್ಸ್ ಅಸೋಶಿಯೇಶನ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ವಿಜಯಪುರ ಕರಾಟೆ ಪಟುಗಳು ಅಮೋಘ ಸಾಧನೆ ಮಾಡಿದ್ದಾರೆ.
ಕಟಾ ವಿಭಾಗದಲ್ಲಿ ವಿಶಾಲ ಝಳಕಿ, ಚಿರಂಜೀವಿ ಮಠಪತಿ, ಪ್ರಥಮ ಸ್ಥಾನ, ಶ್ರೇಯಾ ಘನವಟೆ, ಉತ್ಕರ್ಷ ರಾಜ್ ದ್ವಿತೀಯ ಸ್ಥಾನ, ಯುವರಾಜ ಚವ್ಹಾಣ, ಸುದರ್ಶನ ನಾಯ್ಕ, ಅಮನ್ ನಾಯ್ಕ, ಪ್ರಜ್ವಲ ಕತ್ರಾಳ, ಶ್ರೇಯಸ ಘನವಟೆ, ಶ್ರೀರಕ್ಷಾ ಹಡಪದ, ಸಂಸ್ಕøತಿ ಪತ್ತಾರ, ನಿಶಾಕೌಸರ ಟಕ್ಕಳಕಿ ಹಾಗೂ ಮುರುಗೇಶ ಕೊಪ್ಪದ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಫೈಟ್ ವಿಭಾಗದಲ್ಲಿ ಚಿರಂಜೀವಿ ಮಠಪತಿ ಪ್ರಥಮ ಸ್ಥಾನ, ಅಮನ್ ನಾಯ್ಕ, ಶ್ರೇಯಾ ಘನವಟೆ, ಶ್ರೇಯಸ ಘನವಟೆ, ಪ್ರಜ್ವಲ ಕತ್ರಾಳ ಹಾಗೂ ಯುವರಾಜ ಚವ್ಹಾಣ ದ್ವಿತೀಯ ಸ್ಥಾನ, ಸಂಸ್ಕೃತಿ ಪತ್ತಾರ, ನಿಶಾಕೌಸರ ಟಕ್ಕಳಕಿ ತೃತೀಯ ಸ್ಥಾನ ಪಡೆಯುವ ಮೂಲಕ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ,
ಕರಾಟೆ ಪಟುಗಳ ಸಾಧನೆಗೆ ತರಬೇತುದಾರರಾದ ಅಕ್ಷಯ ಹಿರೇಮಠ, ಕಾರ್ಯದರ್ಶಿ ಪ್ರೇಮಾನಂದ ನಾಗರೇಶಿ, ಪೋಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.