ಲಾಯಿನ್ಸ್ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾಗಿ ಡಾ. ಜಿ.ಡಿ. ಕೊಟ್ನಾಳ ಪದಗ್ರಹಣ
ವಿಜಯಪುರ,ಜು.11:ವಿಜಯಪುರ ಲಾಯಿನ್ಸ್ ಹಿರಿಯ ನಾಗರಿಕರ ವೇದಿಕೆ ನೂತನ ಅಧ್ಯಕ್ಷರಾಗಿ ಡಾ. ಜಿ.ಡಿ. ಕೊಟ್ನಾಳ ಅವರು ಅಧಿಕಾರ ಸ್ವೀಕರಿಸಿದರು.
ಇದೇ ವೇಳೆ ಉಪಾಧ್ಯಕ್ಷರಾಗಿ ಎಸ್.ವಾಯ್. ನಡುವಿನಮನಿ ಹಾಗೂ ಕಾರ್ಯದರ್ಶಿಯಾಗಿ ಎಸ್.ವಾಯ್. ವಾಲಿಕಾರ ಅವರು ಪದಗ್ರಹಣ ಮಾಡಿದರು.
ನೂತನ ಅಧ್ಯಕ್ಷÀ ಡಾ. ಜಿ.ಡಿ. ಕೊಟ್ನಾಳ ಅವರು ಮಾತನಾಡಿ, ಈ ಹಿಂದಿನಂತÉ ನಡೆದು ಬಂದ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕೆ.ಎಸ್. ಪಾಟೀಲ, ಎ.ಎಸ್. ಕೋರಿ, ಎಸ್.ಎಸ್. ಅನಂತಪೂರ, ಎಸ್.ಎಂ. ಇನಾಮದಾರ, ಎನ್.ಆರ್. ಕುಲಕರ್ಣಿ, ಎಸ್.ಎಂ. ಕಣಬೂರ, ವಿ.ಎಸ್. ಸಾವಳಗಿಮಠ, ಬಿ.ಜಿ. ಹಳಗುಣಕಿ, ಎಸ್.ಬಿ. ಭುಯ್ಯಾರ, ಎಚ್.ಎ. ಕಿಣಗಿ, ಎಸ್.ಆರ್. ಮಾನಕರ, ಎಸ್.ಎಸ್. ಬಣಜಿಗೇರ, ಜಿ.ಎಸ್. ಕುಲಕರ್ಣಿ, ಎ.ವಿ. ಹೊಸೂರ, ಎಸ್.ಎಸ್. ಸಿಂಧೂರ, ವಿ.ಎಸ್. ಹಂದಿಗೋಳ, ಎನ್.ಎಸ್. ಸಜ್ಜನ, ಹುಣಸಿಗಿಡದ, ಬಿ.ಪಿ. ಸಿಂಧೆ, ಆರ್.ಜಿ. ಕೊಟ್ನಾಳ, ಆರ್.ಆರ್. ಮದರಳ್ಳಿ, ಬಿ.ಎಸ್. ಪಾಟೀಲ ಉಪಸ್ಥಿತರಿದ್ದರು.
ನ್ಯಾಯವಾದಿ ಮೊಹಮ್ಮದಗೌಸ ಹವಾಲ್ದಾರ ಅವರು ಬಸವಾದಿ ಶರಣರ ಬಗ್ಗೆ ಉಪನ್ಯಾಸ ನೀಡಿದರು.