ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ, ಕೇಂದ್ರಕ್ಕೆ ಮನವಿ
ವಿಜಯಪುರ, ಜು.11:ಕೇಂದ್ರ ಸರಕಾರ 2024-25ರ ಬಜೆಟ್‍ನಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಸಾಕಷ್ಟು ಹಣಕಾಸು ಮೀಸಲಿಡಬೇಕು, ಅಂಗನವಾಡಿಗಳನ್ನು ಬಲಪಡಿಸಲು ಮತ್ತು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಸನಬದ್ಧ ಸೌಲಭ್ಯಗಳನ್ನು ಒದಗಿಸುಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ವಿಜಯಪುರ ತಾಲೂಕು ಸಂಘದ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷೆ ಸುನಂದಾ ನಾಯಕ ಅವರು ಮಾತನಾಡಿ, ಇದೇ ತಿಂಗಳು ಮಂಡಿಸಲಿರುವ 2024-25 ರ ಮುಂಗಡಪತ್ರದಲ್ಲಿ ಈ ದೇಶವು ಮೂರನೇ ಆರ್ಥಿಕತೆಯಾಗಲು ತೀವ್ರವಾಗಿ ಪ್ರಯತ್ನಿಸುತ್ತಿರುವಾಗ, ನಮ್ಮ ಸಮಾಜದಲ್ಲಿನ ಅಸಮಾನತೆಗಳನ್ನೂ ಸಹ ಕಡಿಮೆ ಮಾಡಬೇಕು ಮತ್ತು ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಆದ್ಯತೆಯ ಆಧಾರದ ಮೇಲೆ ಖಾತ್ರಿಪಡಿಸಬೇಕು ಎಂಬುದನ್ನು ತಾವು ಬಹುಶಃ ಒಪ್ಪಬಹುದು. ದುರದೃಷ್ಟವಶಾತ್, ಈ ಹಿಂದೆ ಇಂತಹದ್ದನ್ನು ಮಾಡಲಾಗಿಲ್ಲ. ಇದರ ಪರಿಣಾಮವಾಗಿಯೇ, ನಮ್ಮ ಜನರಲ್ಲಿ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯ ಸವಾಲನ್ನು ನಮ್ಮ ದೇಶವು ಗಂಭೀರವಾಗಿ ಎದುರಿಸುತ್ತಿದೆ. ಓಈಊS -6 ಇದು ನೀಡಿರುವ ಮಾಹಿತಿ ಪ್ರಕಾರ, ನಮ್ಮ ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಕುಂಠಿತ ಬೆಳವಣಿಗೆಯವರು ಅಂದರೆ, ಅಗತ್ಯಕ್ಕಿಂತ ಕಡಿಮೆ ತೂಕ ಮತ್ತು ಕಡಿಮೆ ಎತ್ತರದ ಬಡಕಲು ದೇಹದವರು ಆಗಿದ್ದಾರೆ. ರಕ್ತಹೀನತೆಯ ಮಟ್ಟವು ಮಹಿಳೆಯರಲ್ಲಿ ಶೇ.57ಕ್ಕೂ ಹೆಚ್ಚು, ಹದಿಹರೆಯದ ಅಂದರೆ ಕಿಶೋರಿಯರಲ್ಲಿ ಶೇ.59.1 ರಷ್ಟು, ಗರ್ಭಿಣಿಯರಲ್ಲಿ ಶೇ.52.2 ರಷ್ಟು ಮತ್ತು ಆರು ವರ್ಷದೊಳಗಿನ ಮಕ್ಕಳಲ್ಲಿ ಶೇ. 67.1 ರಷ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಾಸರಿ ಆರು ವರ್ಷದೊಳಗಿನ ಸುಮಾರು 9 ಲಕ್ಷ ಮಕ್ಕಳು ಸಾಯುತ್ತಿದ್ದಾರೆ ಎಂದರು.
ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಮತ್ತು ಉತ್ತಮ ಗುಣಮಟ್ಟದ ಆಹಾರದೊಂದಿಗೆ IಅಆS ಯೋಜನೆಯನ್ನು ಬಲಪಡಿಸಿ, ಸಾಕಷ್ಟು ಸಂಪನ್ಮೂಲಗಳೊಂದಿಗೆ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಸಮಯದ ಅಂಗನವಾಡಿಗಳಾಗಿ ಜೊತೆಜೊತೆಗೆ ಪಾಲನಾ ಕೇಂದ್ರ (ಕ್ರಿಚ್) ಆಗಿ ಅಭಿವೃದ್ಧಿಪಡಿಸಬೇಕು,
ಅಂಗನವಾಡಿಗಳಲ್ಲಿಯೇ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ಇಅಅಇ) | ಶಾಲಾಪೂರ್ವ ಶಿಕ್ಷಣ ಘಟಕಾಂಶಗಳನ್ನು ಬಲಪಡಿಸಿ ಇಅಅಇ/ ಶಾಲಾಪೂರ್ವ ಶಿಕ್ಷಣವು ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಭಾಗವಾಗಿರಲೇಬಾರದು. ಅಂಗನವಾಡಿ ಕೇಂದ್ರಗಳನ್ನು ನೋಡಲ್ ಏಜೆನ್ಸಿಗಳಾಗಿ ಜಾರಿಗೊಳಿಸುವುದರ ಜೊತೆಗೆ ಇಅಅಇ ಹಕ್ಕಾಗಬೇಕು.
ಗ್ರೇಡ್ III ಮತ್ತು ಗ್ರೇಡ್ Iಗಿ ಸರ್ಕಾರಿ ನೌಕರರಂತೆ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಖಾಯಂ ಮಾಡಿ, ಖಾಯಮಾತಿ ವಿಷಯ, 45 ನೇ Iಐಅ ಶಿಫಾರಸಿನ ಪ್ರಕಾರ ತಿಂಗಳಿಗೆ ಕನಿಷ್ಠ ವೇತನ ರೂ. 26000, ಮಾಸಿಕ ಪಿಂಚಣಿ ರೂ. 10000, ಪಿಎಫ್, ಇಎಸ್‍ಐ ಇತ್ಯಾದಿ ಕೂಡಲೇ ತೀರ್ಮಾನಿಸಿ ಜಾರಿ ಮಾಡಿ, ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಏಕರೂಪದ ಸೇವಾ ಷರತ್ತುಗಳನ್ನು ಜಾರಿಗೆ ತರಬೇಕು. ಎಲ್ಲಾ ಯೋಜನಾ ಕಾರ್ಮಿಕರಿಗೆ ಅನ್ವಯವಾಗುವಂತೆ ಕೂಡಲೇ ವೇತನ ಆಯೋಗ ರಚನೆ ಮಾಡಬೇಕು.
ಗ್ರಾಚ್ಯುಟಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರಿಗೆ ತಕ್ಷಣವೇ ಜಾರಿಗೊಳಿಸಬೇಕು,
ಅಂಗನವಾಡಿ ನೌಕರರು ಮತ್ತು ಸಹಾಯಕಿಯರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮತ್ತು ಕಾರ್ಮಿಕ ಸಂಘಟನೆ ಕಟ್ಟಿಕೊಳ್ಳುವ ಹಕ್ಕುಗಳನ್ನು ಗುರುತಿಸಿ ಎಲ್ಲಾ ಹಂತಗಳಲ್ಲಿ ದ್ವಿಪಕ್ಷೀಯ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕು. ಯಾವುದೇ ರೂಪದಲ್ಲಿ IಅಆS ಅನ್ನು ಖಾಸಗೀಕರಣಗೊಳಿಸಬಾರದು. ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸೇವೆಗಳನ್ನೂ ಕೂಡ ಖಾಸಗೀಕರಣ ಮಾಡಬಾರದು.
ಶ್ರಮಿಕರಿಗೆ ಮಾರಕವಾಗಿರುವ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಅವರು ಮಾತನಾಡಿದರು.