ಹೆಸರು ಬೆಳೆಗೆ ನಂಜಾಣು ರೋಗ ಬಾಧೆ ಕೃಷಿ ಅಧಿಕಾರಿ ಮೇನಕಾ ಭೇಟಿ
ಸೈದಾಪುರ:ಜು.11:ಇಲ್ಲಿಗೆ ಸಮೀಪದ ಗೊಂದಡಗಿ ಗ್ರಾಮದ ರೈತರ ಜಮೀನಿಗೆ ಕೃಷಿ ಅಧಿಕಾರಿ ಮೇನಕಾ ಭೇಟಿ ನೀಡಿ ಪರಿಶೀಲಿಸಿ ರೈತರು ಕೆಲ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಹೆಸರು ಬೆಳೆಯಲ್ಲಿ ಹಳದಿ ನಂಜಾಣಿವಿನ ಸಮಸ್ಯೆ ಕಾಣಿಸುತ್ತಿದೆ. ಮೋಡ ಕವಿದ ವಾತಾವರಣ ಇರುವುದರಿಂದ ಹಳದಿ ನಂಜಾಣು ರೋಗ ಮತ್ತು ಎಲೆ ತಿನ್ನುವ ಕೀಟಗಳ ಹಾವಳಿ ಹೆಚ್ಚಾಗಿದೆ. ಇದು ಹೇನು ಮತ್ತು ಥ್ರಿಪ್ಸ್‍ಗಳಿಂದ ಹರಡುತ್ತದೆ. ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ ಕಿತ್ತು ತೆಗೆಯಬೇಕು. ಒಂದು ಲೀಟರ ನೀರಿಗೆ 0.3 ಗ್ರಾಂ ಥೈಯಾಮೆಥಾಕ್ಸ್‍ಮ ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ್ ಸಿಂಪರಣೆ ಮಾಡಿದರೆ ಈ ರೋಗ ಹತೋಟಿಗೆ ಬರುತ್ತದೆ ಎಂದು ತಿಳಿಸಿದರು.