ಮರಗೂರ್ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ನಿಲಯ ಪಾಲಕರನ್ನು ಸೇವೆಯಿಂದ ವಜಾ ಮಾಡಲು: ಬಾಬು ಗುಡಮಿ ಆಗ್ರಹ
ಇಂಡಿ :ಜು.11: ವಿದ್ಯಾರ್ಥಿಗಳಿಗೆ ಕಳಪೆ ಮಟ್ಟದ ಆಹಾರ ಪೂರೈಕೆ ಹಾಗೂ ನೀರಿನ ತೊಂದರೆ ಮತ್ತು ಕರೆಂಟ್ ಸ್ವಿಚ್ ಬೋರ್ಡ್ ಓಪನ್ನಾಗಿ ಇರುವುದನ್ನು ಕಂಡು ಶಾಲೆಯ ಪ್ರಾಂಶುಪಾಲರನ್ನು ಹಾಗೂ ನಿಲಯ ಪಾಲಕರನ್ನು ವಿಚಾರಿಸಿದರೆ ಉಡಾಫೆ ಉತ್ತರನ್ನು ನೀಡುತ್ತಾರೆ ಎಂದು ದಲಿತ ಸಂಘರ್ಷ ಸಮಿತಿ ತಾಲೂಕ ಅಧ್ಯಕ್ಷ ಬಾಬು ಗುಡಮಿ ಆರೋಪಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಮರಗೂರ್ ಗ್ರಾಮದ ವಸತಿ ಶಾಲೆಯ ಪ್ರಾಂಶುಪಾಲರನ್ನು ಹಾಗೂ ನಿಲಯ ಪಾಲಕರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಅಗ್ರಹಿಸಿದೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಗಳನ್ನು ಅರಿತು ಅಧಿಕಾರಿಗಳಿಗೆ ವಿಚಾರಿಸಿದರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಗೆ ಹೋಗಿ ಕೇಳಿ ಅಥವಾ ಕ್ರೇಸ್ ಆಫೀಸ್ ಬೆಂಗಳೂರು ಆವರಿಗೆ ಹೋಗಿ ಕೇಳಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ನಮ್ಮ ಸಂಘಟನೆ ಮೇಲೆ ಕೇಸ್ ಮಾಡುವುದಾಗಿ ಹೆದರಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ. ಇಂತಹ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಉಪ ನಿರ್ದೇಶಕರ ಕಾರ್ಯಾಲಯ ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರ ಮುಖಾಂತರ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪದಾಧಿಕಾರಿಗಳು ಸಂತೋಷ ಹಾಜೇರಿ, ಪವನ್ ತೆಲಗ, ಶರಣಪ್ಪಾ ತಡ್ಲಗಿ, ತುಷಾರ ತಳಕೇರಿ, ಆಕಾಶ ಪರಸೆನ್ನವರ, ರಾಮ ತಳಕೇರಿ, ರಾಘವೇಂದ್ರ ತಡ್ಲಗಿ, ಶ್ರೀಕಾಂತ ಗುಡಮಿ, ಅನಿಲ ಗುಡಮಿ, ಬಾಬು ಧರೆನ್ನವರ, ಸೇರಿದಂತೆ ಹಲವಾರು ಕಾರ್ಯಕರ್ತರು ಭಾಗಿಯಾಗಿದರು