ದೇವೂರ ಗ್ರಾಮ ದತ್ತು ಪಡೆದು ಎನ್ ಎಸ್ ಎಸ್ ಶಿಬಿರಾರ್ಥಿಗಳಿಂದ ಸ್ವಚ್ಛತೆ ಕಾರ್ಯ
ದೇವರಹಿಪ್ಪರಗಿ :ಜು.11: ತಾಲೂಕಿನ ದೇವೂರ ಗ್ರಾಮದಲ್ಲಿರುವ ಕೆರೆ ಯಲ್ಲಮ್ಮ ದೇವಸ್ಥಾನದ ಸುತ್ತಾ ಸ್ವಚ್ಛಗೊಳಿಸುವ ಮುಖಾಂತರ ಶ್ರಮದಾನ ಆರಂಭಿಸಿದ ಎನ್ ಎಸ್ ಎಸ್ ವಿದ್ಯಾರ್ಥಿಗಳು ನಿರಂತರ ಏಳು ದಿನಗಳ ಕಾಲ ದೇವೂರ ಗ್ರಾಮದಲ್ಲಿ ಸೋಮನಾಥ, ಹಣಮಂತ ದೇವಸ್ಥಾನ,ಲಕ್ಷ್ಮೀ ದೇವಾಲಯ,ತಾಂಡಾ ಎಲ್ ಟಿ 1 ಮತ್ತು 2 ರಲ್ಲಿ ಪ್ರಾಥಮಿಕ ಶಾಲೆ, ಸೇವಾಲಾಲ ದೇವಸ್ಥಾನ ಹಲವಾರು ದೇವಸ್ಥಾನಗಳು ಪ್ರಮುಖ ಬೀದಿಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಛಗೊಳಿಸಿದರು.
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ದೇವರಹಿಪ್ಪರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಡಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ದೇವೂರು ಗ್ರಾಮವನ್ನ 7 ದಿನಗಳಕಾಲ ದತ್ತು ಪಡೆದು ವಾರ್ಷಿಕ ವಿಶೇಷ ಶಿಬಿರವನ್ನು ದಿನಾಂಕ: 04/07/2024 ರಿಂದ ಹಮ್ಮಿಕೊಂಡು 10/07/2024 ಕ್ಕೆ ಮುಕ್ತಾಯ ಮಾಡಿದ್ದಾರೆ.
ಮುಕ್ತಾಯದ ದಿನ ಜಾಂಭವ ಯುವ ಸೇನಾ ರಾಜ್ಯ ಉಪಾಧ್ಯಕ್ಷರಾದ ಡಾ, ಮಲಕಪ್ಪ ಬಾಗೇವಾಡಿಯವರು 25 ಜನ ಓSS ಶಿಬಿರಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ದೇವೂರಲ್ಲಿ ಊಟದ ವ್ಯವಸ್ಥೆ ಮಾಡಿ ಎಲ್ಲರಿಗೂ ಶಾಲು ಹೋದಿಸಿ ಸನ್ಮಾನ ಮಾಡಿ ಮಾತನಾಡಿ ಮಾಹಾಮಾರಿ ಡೆಂಗ್ಯೂ ರೋಗ ರಾಜ್ಯದೆಲ್ಲಡೆ ಹರಡುತ್ತಿದ್ದು. ಇಂತಹ ಸಮಯದಲ್ಲಿ ನಮ್ಮ ಊರಿನ ಎಲ್ಲಾ ಓಣಿ ಮಂದಿರಗಳು, ಶಾಲೆಗಳು ಸ್ವಚ್ಛ ಮಾಡಿ ಗ್ರಾಮದ ಜನರಿಗೆ ಅನುಕೂಲ ಮಾಡಿದಕ್ಕಾಗಿ ಓSS ತಂಡಕ್ಕೆ ಒಳ್ಳೆದಾಗಲಿ ಎಂದರು.
ಈ ವೇಳೆಯಲ್ಲಿ ಶಿಬಿರಾಧಿಕಾರಿಗಳಾದ ಪೆÇ್ರ. ಅಕ್ರಂ ಪಾಷಾ, ಡಾ. ದ್ರಾಕ್ಷಾಯಣಮ್ಮ ಎನ್. ಸಿ, ಪೆÇ್ರ. ಎ. ಎಸ್. ಹೆಗಡೆ, ಡಾ. ಬಸವರಾಜ ಹೊನಮಟ್ಟಿ ಪ್ರಾಥಮಿಕ ಶಾಲಾ ಶಿಕ್ಷಕರಾದ ಆರ್. ಬಿ ಭಜಂತ್ರಿ, ಐ. ಬಿ ಗಂಗಶೆಟ್ಟಿ, ಅಮ್ಮಣ್ಣ ಧ. ಆನೆಗುಂದಿ,ಮತ್ತು ಮಹಾಂತೇಶ ಹಾದಿಮನಿ ಹಾಗೂ ಚಿದಾನಂದ ಬಿರಾದಾರ,ಭಜನಾ ಕಲಾವಿದರಾದ ರಮೇಶ ಹಳ್ಳಿ, ಅಡುಗೆ ಸಿಬ್ಬಂದಿಯವರು , ಶಿಬಿರಾರ್ಥಿಗಳು ಉಪಸ್ಥಿತರಿದ್ದರು.