ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ತಡೆಗೆ ತಹಸಿಲ್ದಾರ್ ಗೆ ಮನವಿ
ಸೇಡಂ, ಜು,11: ನಗರದ ವಿವಿದೆಡೆ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯನ್ನು ರಾಜಾರೋಷವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡುವವರನ್ನು ಹಿಡಿದು ಅವರ ವಿರುದ್ಧ ಕ್ರಮ ಕೈಕೊಂಡು ಕಾಳ ಸಂತೆಯಲ್ಲಿ ವ್ಯಾಪಾರ ಮಾಡುವುದನ್ನು ತಡೆಗಟ್ಟುವಂತೆ ಕರ್ನಾಟಕ ನವನಿರ್ಮಾಣ ಸೇನೆ ತಾಲೂಕ ಘಟಕ ಅಧ್ಯಕ್ಷ ಭೀಮಾಶಂಕರ ಕೊರವಿ ತಹಸಿಲ್ದಾರ್ ಶ್ರೀಯಾಂಕ್ ಧನಶ್ರೀ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆಯಲ್ಲಿ ಜಗನಾಥ್ ಇಂದ್ರ ಕರ್, ಸಂತು ಇಂಜಳ್ಳಿ, ಮಹಾದೇವಪ್ಪ ಗೋಣಿ, ಹಣಮಂತ ಭರತ್ನೂರ್, ಮಲ್ಲು ಬಸವ ನಗರ, ರಮೇಶ್ ಹಾಬಳ್, ವೆಂಕಟೇಶ್, ಅಂಬರೀಷ್ ಸೇರಿದಂತೆ ಹಲವರು ಇದ್ದರು.