ಭೌತಶಾಸ್ತ್ರ ಸಿದ್ಧಾಂತದಿಂದ ನಿಖರವಾಗಿ ಜಗತ್ತನ್ನು ವಿವರಿಸಬಹುದು:ಡಾ. ಸಿ.ಎನ್. ವೆಂಕಟೇಶ
ಕಲಬುರಗಿ:ಜು.11:ಹೈದ್ರಾಬಾದಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿಬಿ.ಎಸ್ಸಿ ಮತ್ತು ಎಮ್.ಎಸ್ಸಿ ವ್ಯಾಸಂಗ ಮಾಡುತ್ತಿರುವವಿದ್ಯಾರ್ಥಿನಿಯರಿಗೋಸ್ಕರ ಭೌತಶಾಸ್ತ್ರ ವಿಭಾಗದ ವತಿಯಿಂದ”ಭೌತಶಾಸ್ತ್ರದಲ್ಲಿ ವೃತ್ತಿ ಆಯ್ಕೆಗಳು” ಎಂಬ ಶಿರ್ಷಿಕೆಯ ವಿಶೇಷಉಪನ್ಯಾಸಕಾರ್ಯಕ್ರಮವನ್ನುಆಯೋಜಿಲಾಗಿತ್ತು.
ಸದರಿಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ವಿವಿಧ ಪ್ರತಿಷ್ಠಿತ ಮಹಾವಿದ್ಯಾಲಯಗಳಲ್ಲಿ ಭೌತಶಾಸ್ತ್ರಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದಡಾ. ಸಿ. ಎನ್. ವೆಂಕಟೇಶಅವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸವನ್ನು ನೀಡಿದರು.
ಡಾ. ಸಿ. ಎನ್. ವೆಂಕಟೇಶಅವರುಮಾತನಾಡುತ್ತಸಮಾಂತರಜಗತ್ತು (PಚಿಡಿಚಿಟಟeಟWoಡಿಟಜs) ಕೇವಲ ಕಥೆ, ಕಾದಂಬರಿಗಳ ಕಾಲ್ಪನಿಕ ಲೋಕಕ್ಕೆ ಸೀಮಿತವೋ ಅಥವಾ ನಿಜವಾಗಿಯೂ ಸಮಾಂತರ ಜಗತ್ತುಗಳು (Pಚಿಡಿಚಿಟಟeಟ Woಡಿಟಜs) ಅಸ್ತಿತ್ವದಲ್ಲಿವೆಯೇ? ಅಂತಹ ಜಗತ್ತುಗಳಿಗೆ ಹೋಗಿ ಬರಲು ಸಾಧ್ಯವೇ?ಇದ್ದರೆ ಅವು ಹೇಗೆ ಇರುತ್ತವೆ?ನಮಗಿರುವ ಸಾಮಾನ್ಯಜ್ಞಾನದಿಂದ ಯೋಚಿಸಿದರೆ, ಅಂತಹ ಸಾಧ್ಯತೆಇಲ್ಲವೇಇಲ್ಲ ಎನಿಸುತ್ತದೆ.ಅದು ಸಹಜಕೂಡ.ಆದರೆಆಧುನಿಕಕಣಭೌತ ವಿಜ್ಞಾನ (ಕಿuಚಿಟಿಣum Phಥಿsiಛಿs) ಅಂತಹ ಸಾಧ್ಯತೆಇರುವುದರ ಬಗ್ಗೆ ಬೊಟ್ಟು ಮಾಡಿತೋರಿಸುತ್ತದೆ.ಆಶ್ಚರ್ಯಎನ್ನುವಿರಾ?ಅದು ಹೇಗೆ ಎಂದು ನೋಡೋಣಎಂದು ಹೇಳುತ್ತಾ ಕಣಭೌತ ವಿಜ್ಞಾನ (ಕಿuಚಿಟಿಣum Phಥಿsiಛಿs) ಅತಿ ಸೂಕ್ಷ್ಮ ಕಣಗಳ ಜಗತ್ತನ್ನು ವಿವರಿಸುವ ವಿಜ್ಞಾನದ ಶಾಖೆ. ಪರಮಾಣುವಿನಂತಹ ಕಣಗಳು ಅಲೆಗಳು (Wಚಿves) ಮತ್ತುಕಣ (ಠಿಚಿಡಿಣiಛಿಟes)ಗಳೆರಡರ ಹಾಗೆ ಏಕೆ ವರ್ತಿಸುತ್ತವೆಎಂಬುದರಕಣಭೌತ ವಿಜ್ಞಾನ (ಕಿuಚಿಟಿಣum Phಥಿsiಛಿs) ವಿವರಿಸುತ್ತದೆ. ಅಲ್ಲದೇ ಈ ಕಣಗಳು ಒಂದೇ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಇರುವಂತೆ ಏಕೆ ಭಾಸವಾಗುತ್ತದೆಎಂಬುದರ ಬಗ್ಗೆ ಕೂಡಕಣ ಭೌತ ವಿಜ್ಞಾನ (ಕಿuಚಿಟಿಣum Phಥಿsiಛಿs) ವಿವರಿಸುತ್ತದೆ.ಕ್ವಾಂಟಮ್ ವೇವ್ ಫಂಕ್ಷನ್ (ಕಿuಚಿಟಿಣum Wಚಿve ಈuಟಿಛಿಣioಟಿ) ಎಂಬ ಸಮೀಕರಣ (ಇquಚಿಣioಟಿ) ಒಂದುಕಣಇರಬಹುದಾದ ಅನೇಕ ಸ್ಥಳಗಳನ್ನು ಸೂಚಿಸುತ್ತದೆ.ಆದರೆಯಾರಾದರೂ ಈ ಕಣ ನಿಜವಾಗಲೂಇರಬಹುದಾದ ಸ್ಥಳವನ್ನು ಅಳತೆ ಮಾಡಲು ಯತ್ನಿಸಿದರೆ ಕೂಡಲೆ ವೇವ್ ಫಂಕ್ಷನ್ (Wಚಿve ಈuಟಿಛಿಣioಟಿ) ಪತನ(ಛಿoಟಟಚಿಠಿse)ವಾಗಿ ಬಿಡುತ್ತದೆ. ಕೆಲವು ವಿಜ್ಞಾನಗಳ ಪ್ರಕಾರಒಮ್ಮೆಕಣವೊಂದರ ಸ್ಥಾನವನ್ನು ಅಳತೆ ಮಾಡಲು ಯತ್ನಿಸಿದಾಗ ವೇವ್ ಫಂಕ್ಷನ್ ಪ್ರಕಾರಕಣ ವಹಿಸಬಹುದಾಗಿದ್ದ ಉಳಿದ ಸ್ಥಳಗಳು ವಿಭಜನೆಗೊಂಡುತಾವಿದ್ದಜಗತ್ತಿಗಿಂತ ಸ್ವಲ್ಪ ಮಾತ್ರ ಬೇರೆಯಾದ ಸಮಾಂತರಜಗತ್ತನ್ನು ಸೃಷ್ಟಿಸಿ ಅಲ್ಲಿಜಿಗಿದು ಬಿಡುತ್ತವೆ.
ಹೀಗೆ ಕಣಭೌತ ವಿಜ್ಞಾನ(ಕಿuಚಿಟಿಣum Phಥಿsiಛಿs)ದಒಂದು ವಿವರಣೆಯ ಪ್ರಕಾರ ಸಮಾಂತರಜಗತ್ತು(Pಚಿಡಿಚಿಟಟeಟ Woಡಿಟಜs) ಗಳಿವೆ. ಭೌತ ವಿಜ್ಞಾನದಲ್ಲಿಕಣ ಭೌತ ವಿಜ್ಞಾನ (ಕಿuಚಿಟಿಣum Phಥಿsiಛಿs) ಮತ್ತುಐನ್ ಸ್ಟೀನನ ಸಾಪೇಕ್ಷ ಸಿದ್ಧಾಂತ (ಖಿheoಡಿಥಿ oಜಿ ಖeಟಚಿಣiviಣಥಿ) ಎಂಬ ಎರಡು ಪ್ರಕಾರಗಳಿವೆ. ಕಣ ಭೌತ ವಿಜ್ಞಾನ (ಕಿuಚಿಟಿಣum Phಥಿsiಛಿs) ಅತೀ ಸೂಕ್ಷ್ಮ ವಸ್ತುಗಳಾದ ಪರಮಾಣು ಮತ್ತುಅದರ ಭಾಗಗಳ ಬಗ್ಗೆ ವಿವರಿಸಿದರೆ, ಸಾಪೇಕ್ಷ ಸಿದ್ಧಾಂತ (ಖಿheoಡಿಥಿ oಜಿ ಡಿeಟಚಿಣiviಣಥಿ) ಅತಿದೊಡ್ಡ ವಸ್ತುಗಳಾದ ಗ್ರಹ, ತಾರೆ ಮತ್ತು ಬ್ರಹ್ಮಾಂಡಗಳ ಬಗ್ಗೆ ವಿವರಣೆ ನೀಡುತ್ತವೆ. ಎರಡೂತಮ್ಮತಮ್ಮ ವಿಷಯಗಳಲ್ಲಿ ಬಹಳ ನಿಖರವಾದ ಸಿದ್ಧಾಂತಗಳನ್ನು ಮಂಡಿಸುತ್ತವೆ. ಆದರೆಒಂದರ ಸಿದ್ಧಾಂತಗಳು ಇನ್ನೊಂದನ್ನು ವಿವರಿಸಲು ಪೂರ್ತಿಯಾಗಿವಿಫಲಗೊಳ್ಳುತ್ತವೆ. ಹೀಗಾಗಿ ಭೌತ ವಿಜ್ಞಾನಿಗಳು ಎರಡೂ ಕ್ಷೇತ್ರಗಳನ್ನು ಕರಾರುವಾಕ್ಕಾಗಿ ವಿವರಿಸುವಂತಹ ಹೊಸ ಸಿದ್ಧಾಂತವೊಂದರ ಹುಡುಕಾಟದಲ್ಲಿತೊಡಗಿದ್ದಾರೆ.
ಅಂತಹ ಸಿದ್ಧಾಂತಗಳಲ್ಲೊಂದು ಸ್ಟ್ರಿಂಗ್ ಸಿದ್ಧಾಂತ (Sಣಡಿiಟಿg ಖಿheoಡಿಥಿ). ಈ ಸ್ಟ್ರಿಂಗ್ ಸಿದ್ದಾಂತ (Sಣಡಿiಟಿg ಖಿheoಡಿಥಿ) ಈ ಜಗತ್ತನ್ನು ನಾವೆಲ್ಲಕಾಣುವ ನಾಲ್ಕು ಆಯಾಮ(ಆimeಟಿsioಟಿs)ಗಳಲ್ಲದೇ ಇನ್ನೂ ಆರು-ಏಳು ಆಯಾಮ(ಆimeಟಿsioಟಿs)ಗಳಿವೆ ಎಂದು ಪ್ರತಿಪಾದಿಸುತ್ತದೆ. ಇಲ್ಲಿ ಸಮಸ್ಯೆಏನೆಂದರೆ ನಮಗೆ ನಾಲ್ಕು ಆಯಾಮಗಳು (ಮೂರುಅಂತರಿಕ್ಷ(Sಠಿಚಿಛಿe)ದ ಆಯಾಮಗಳು ಮತ್ತು ನಾಲ್ಕನೆಯಆಯಾಮವಾದ ಸಮಯ(ಖಿime)) ಮಾತ್ರಕಾಣಿಸುತ್ತವೆಅಥವಾ ಅವುಗಳ ಅನುಭೂತಿಯಾಗುತ್ತದೆ. ಇತರ ಆಯಾಮಗಳು ನಮ್ಮ ಮಿತಿಯ ಆಚೆ ಇವೆ. ಈ ಇತರ ಆಯಾಮಗಳ ಅಸ್ತಿತ್ವವನ್ನು ನಾವು ಒಪ್ಪಿಕೊಂಡರೆ ಸ್ಟ್ರಿಂಗ್ ಸಿದ್ಧಾಂತ (Sಣಡಿiಟಿg ಖಿheoಡಿಥಿ) ನಿಖರವಾಗಿಜಗತ್ತನ್ನು ವಿವರಿಸಬಲ್ಲ ಏಕೈಕ ಸಿದ್ಧಾಂತವಾಗಿ ಹೊರಹೊಮ್ಮುತ್ತದೆ. ಆ ಇತರ ಆಯಾಮಗಳಲ್ಲಿ ಸಮಾಂತರಜಗತ್ತು(Pಚಿಡಿಚಿಟಟeಟ Woಡಿಟಜs)ಗಳು ಅಸ್ತಿತ್ವದಲ್ಲಿವೆ ಎಂಬುದು ಅನೇಕ ವಿಜ್ಞಾನಿಗಳ ವಾದ ಮತ್ತುಈ ಸಮಾಂತರ ಜಗತ್ತುಗಳ ಬಗ್ಗೆ ಓದಿದಾಗ ನನಗೆ ನೆನಪಾಗುವುದು ನಮ್ಮ ಪುರಾಣಕಾಲದ ಕಥೆಗಳು. ಆ ಕಥೆಗಳಲ್ಲಿ ಅನೇಕ ಲೋಕಗಳ ವರ್ಣನೆಇದೆ.ನಮ್ಮ ಪುರಾಣಗಳ ಪ್ರಕಾರ ಏಳು ಊಧ್ರ್ವ ಲೋಕ ಮತ್ತು ಏಳು ಅಧೋಲೋಕಗಳಿವೆ. ಏಳು ಊಧ್ರ್ವ ಲೋಕಗಳೆಂದರೆ ಸತ್ಯ ಲೋಕ, ತಪ ಲೋಕ, ಜ್ಞಾನ ಲೋಕ, ಮಹರ್ಲೋಕ, ಸ್ವರ ಲೋಕ, ಭೂವರ ಲೋಕ ಮತ್ತು ಭೂಲೋಕ.ಏಳು ಅಧೋಲೋಕಗಳೆಂದರೆ ಅತಲ, ವಿತಲ, ಸುತಲ, ತಲಾತಲ, ಮಹಾತಲ, ರಸಾತಲ ಮತ್ತು ಪಾತಾಲ.ಈ ಲೋಕಗಳು ನಮ್ಮ ಸಮಾಂತರ ಲೋಕಗಳಾಗಿರಬಹುದೇ?ಹಿಂದಿನ ಕಾಲದಲ್ಲಿ ಋಷಿಗಳಿಗೆ ಈ ಲೋಕಗಳಿಗೆ ಹೋಗಿ ಬರುವಷ್ಟು ಶಕ್ತಿ ಇತ್ತುಎಂದುಓದುತ್ತಿದ್ದೆವು.ಮಹರ್ಷಿ ನಾರದರು ಸ್ವರ್ಗಲೋಕದಿಂದ ಸತ್ಯ ಲೋಕಕ್ಕೆ ಹೋದರು.ಅಲ್ಲಿಂದ ಭೂಲೋಕಕ್ಕೆ ಬಂದರು ಮತ್ತುಇಲ್ಲಿಂದ ಪಾತಾಲ ಲೋಕಕ್ಕೆ ಹೋದರುಎಂದು ಪುರಾಣ ಕಥೆಗಳಲ್ಲಿ ಓದಿದ್ದೇವೆ. ಅವರಿಗೆ ನಮ್ಮ ಸಹಜವಾದಆಯಾಮ(ಆimeಟಿsioಟಿs)ಗಳಲ್ಲದೇ ಇತರ ಆಯಾಮಗಳಿಗೆ ಹೋಗಿ ಬರುವ ಮಂತ್ರ ಶಕ್ತಿ ಇತ್ತೇ? ಅಥವಾಆಧ್ಯಾತ್ಮಿಕವಾಗಿ ಪ್ರಗತಿ ಹೊಂದಿದರೆಇತರಆಯಾಮ(ಆimeಟಿsioಟಿs)ಗಳಿಗೆ ಹೋಗಿ ಬರುವ ಶಕ್ತಿ ದೊರಕುವದೇ?
ಒಟ್ಟಿನಲ್ಲಿ ಇಂದಿನ ವಿಜ್ಞಾನ ಪ್ರಗತಿ ಹೊಂದುತ್ತಾ ಸಮಾಂತರ ಜಗತ್ತುಗಳಿರಬಹುದು ಎಂಬ ಅಭಿಪ್ರಾಯವನ್ನುತಲುಪಿದೆಎಂದು ಹೇಳುತ್ತಾ ಭೌತಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡವರಿಗೆದೇಶ ವಿದೇಶಗಳಲ್ಲಿ ಇರುವಂತಹ ವೃತ್ತಿ ಆಯ್ಕೆಗಳ ಕುರಿತಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ.ರಾಜೇಂದ್ರಕೊಂಡಾಅವರು ಮಾತನಾಡುತ್ತಡಾ. ಸಿ.ಎನ್. ವೆಂಕಟೇಶಅವರು ಹೇಳಿರುವ ಹಾಗೆ ಭೌತಿಕ ಪ್ರಪಂಚÀಅತ್ಯಂತಆಸಕ್ತಿದಾಯಕ ಅಂಶ ಮತ್ತು ತತ್ವಗಳನ್ನು ಒಳಗೊಂಡಿದೆ. ಭೌತಶಾಸ್ತ್ರದÀಲ್ಲಿರುವಆಪ್ಟಿಕಲ್ ಭ್ರಮೆಗಳು, ಬೆಳಕಿನ ತಂತ್ರಗಳು ಮತ್ತು ಕನ್ನಡಿಗಳು, ಗುರುತ್ವಾಕರ್ಷಣೆ ಮತ್ತು ಹಾರಾಟ, ಚಂದ್ರನ ಪ್ರಯಾಣ, ಮೆದುಳಿನ ಕಸರತ್ತುಗಳು, ಶಾಖ, “ಶಾಶ್ವತ ಚಲನೆಯ ಯಂತ್ರಗಳು” ಮತ್ತು ಶಕ್ತಿ ಲೆಕ್ಕಾಚಾರಗಳ ಜ್ಞಾನ ಪ್ರತಿಯೊಬ್ಬರಿ ಪಡೆಯಬೇಕುಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದಡಾ.ಮೋಹನರಾಜ ಪತ್ತಾರ, ಐಕ್ಯೂಎಸಿ ಸಂಯೋಜಕರಾದಡಾ.ಶಿವರಾಜ ಗೌನಳ್ಳಿ, ಪ್ರಾಧ್ಯಾಪಕರಾದಡಾ.ರಾಜೇಶ ಸಿದ್ದಣ್ಣ, ಸಿದ್ಧಲಿಂಗ ಬಾಶೆಟ್ಟಿ, ಅಂಬಿಕಾ ಪಾಟೀಲ, ವಾಯ್.ಎನ್‍ರವೀಂದ್ರ, ಡಾ.ಮಹೇಶ ಗಂವ್ಹಾರ, ಬೋಧಕ-ಬೋಧಕೇತರ ಸಿಬ್ಬಂದಿ ಮತ್ತುಬಿ.ಎಸ್ಸಿ ಮತ್ತು ಎಮ್.ಎಸ್ಸಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.ಬಿ.ಎಸ್ಸಿ ವಿದ್ಯಾರ್ಥಿನಿಯರಾದಕುಮಾರಿರಜನಿ ಮಲಶಟ್ಟಿ ಮತ್ತುಕುಮಾರಿ.ಶಗುಫ್ತಾ ನಾಜ್ ನಿರುಪಿಸಿದರು, ಕುಮಾರಿ.ವಿಂದ್ಯಶ್ರಿ ಪ್ರಾರ್ಥಿಸಿದರು, ಕುಮಾರಿ.ರೋಹಿನಿ ಮಲಶೆಟ್ಟಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ಕುಮಾರಿ. ಪ್ರೇಮಾರಾಂಪೂರೆ ವಂದಿಸಿದರು