13ಕ್ಕೆ ನಲಿಕಲಿ ಶಿಕ್ಷಕರಿಗೆ ತಾಲೂಕು ಸಮಾಲೋಚನೆ ಸಭೆ
ಆಳಂದ:ಜು.11: ತಾಲೂಕಿನ ಸರ್ಕಾರಿ ಹಿರಿಯ ಮತ್ತು ಕಿರಿಯ ಶಾಲೆಗಳ 1ರಿಂದ3ನೇ ತರಗತಿಯ ಮಕ್ಕಳನ್ನು ನಲಿಕಲಿ ಬೋಧಿಸುವ ಶಿಕ್ಷಕರಿಗೆ ಜುಲೈ 13ರಂದು ಪ್ರಸಕ್ತ ಶೈಕ್ಷಣಿಕ ಸಾಲಿನ ತಾಲೂಕು ಮಟ್ಟದ ಪ್ರಥಮ ಸಮಾಲೋಚನೆ ಸಭೆ ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ ಅವರು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಗುರುಭವನ ಬಳಿಯ ಇರುವ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಬುಧವಾರ ನಡೆದ 1ರಿಂದ3ನೇ ತರಗತಿ ಮಕ್ಕಳಿಗೆ ನಲಿಕಲಿ ಶಿಕ್ಷಣ ಬೋಧನೆ ಪೂರ್ವ ಸಿದ್ಧತಾಸಭೆಯಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿ ನಲಿ-ಕಲಿ ತರಗತಿ ಕೋಣೆಗಳ ಸಿದ್ಧತೆ ಬಗ್ಗೆ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಸಿಆರ್‍ಪಿ, ಬಿಆರ್‍ಪಿ ಗಳಿಗೆ ಸಲಹೆ ಸೂಚನೆಗಳು ನೀಡಿದರು.
ಪ್ರತಿಯೊಂದು ಶಾಲೆಯಲ್ಲಿ ನಲಿ-ಕಲಿ ಕೋಣೆಯು ಅಚ್ಚುಕಟ್ಟಾಗಿ ನಿರ್ವಹಿಸಲು ಪ್ರತಿ ವಲಯದ ಸಂಪನ್ಮೂಲ ವ್ಯಕ್ತಿಗಳಿಗೆ ಮಾರ್ಗದರ್ಶನ ಮಾಡಿದರು ತದನಂತರ ಸಮಾಲೋಚನೆ ಸಭೆಯಲ್ಲಿ ಶಿಕ್ಷಕರಿಗೆ ಮಾಹಿತಿ ನೀಡಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಅಜಿಂ ಪ್ರೇಮ್‍ಜಿ ಫೌಂಡೇಶನ್ ಘಟಕದ ಸಂಯೋಜಕ ಗುಂಡಪ್ಪ ಕಾಟೆಕರ್, ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿನಾಥ್ ಗೋಡೆಕೆ ಮತ್ತು ನಲಿ-ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಗುರುನಾಥ್ ಭಾವಿ ಸೇರಿದಂತೆ ತಾಲೂಕಿನ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿಗಳು ಮತ್ತು ಆಯ್ದ ಶಾಲಾ ಮಕ್ಕಳು ಸಭೆಯಲ್ಲಿ ಭಾಗವಹಿಸಿದ್ದರು.