ಫಂಢರಾಪೂರಕ್ಕೆ ವಿಶೇಷ ರೈಲಿನ ವ್ಯವಸ್ಥೆ: ಭಗವಂತ ಖೂಬಾ
ಆಳಂದ:ಜು.11: ಜುಲೈ 17 ರಂದು ಇರುವ ಅಷಾಢ ಏಕಾದಶಿಯ ನಿಮಿತ್ಯ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಬೀದರ ನಿಂದ ಕಲಬುರಗಿ ಮಾರ್ಗವಾಗಿ ಪಂಢರಾಪೂರಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ, ಎಲ್ಲಾ ಸದ್ಭಕ್ತರು ಇದರ ಸದೂಪಯೋಗ ಪಡೆದುಕೊಳ್ಳಬೇಕೆಂದು ಕೇಂದ್ರದ ಮಾಜಿ ಸಚಿª ಭಗವಂತ ಖೂಬಾ ತಿಳಿಸಿದ್ದಾರೆ.
ಈ ವಿಶೇಷ ರೈಲು, (ರೈಲು ಸಂಖ್ಯೆ: 07505), ಜುಲೈ 16ರ ಮಂಗಳವಾರದಂದು ಅಕೋಲಾದಿಂದ ಬೆಳಿಗ್ಗೆ 11.00 ಗಂಟೆಗೆ ಹೊರಟು ಲಾತೂರ ರೋಡ್, ಉದಗಿರ, ಭಾಲ್ಕಿ (ರಾ. 9.15) ಮಾರ್ಗವಾಗಿ ಬೀದರ ನಿಂದ ರಾತ್ರಿ 09.50ಕ್ಕೆ ಹೊರಟು, ಜಹಿರಾಬಾದ, ವಿಕಾರಾಬಾದ, ಚಿತ್ತಾಪೂರ, ಕಲಬುರಗಿ, ಸೊಲಾಪೂರ ಮಾರ್ಗವಾಗಿ ಮರುದಿನ 17 ಬೆಳಿಗ್ಗೆ 10.50 ಗಂಟೆಗೆ ಪಂಢರಾಪೂರಕ್ಕೆ ತಲುಪಲಿದೆ.
ಅದೇ ದಿನ 17ರಂದು ಬುಧವಾರ (ರೈಲು ಸಂಖ್ಯೆ: 07506) ರಾತ್ರಿ 09.40ಕ್ಕೆ ಪಂಢರಾಪೂರದಿಂದ ಹೊರಟು ಬಂದ ಮಾರ್ಗವಾಗಿ ಮರುದಿನ 18ರಂದು ಬೆಳಿಗ್ಗೆ 07.15ಕ್ಕೆ ಬೀದರ ಮತ್ತು 8.00 ಗಂಟೆಗೆ ಭಾಲ್ಕಿಗೆ ತಲುಪಲಿದೆ. ನಂತರ ರಾತ್ರಿ 8.00 ಗಂಟೆಗೆ ಅಕೋಲಾ ತಲುಪಲಿದೆ.
ಎಲ್ಲಾ ಸದ್ಭಕ್ತರು ಈ ವಿಶೇಷ ರೈಲಿನ ಸದೂಪಯೋಗ ಪಡೆದುಕೊಂಡು, ಸಮಾಧಾನ ಮತ್ತು ಸುರಕ್ಷಿತವಾಗಿ ಪಂಢರಾಪೂರಕ್ಕೆ ತೆರಳಿ, ಪಂಡರಿನಾಥನ ದರುಶನ ಮಾಡಿಕೊಂಡು ಬರಲು ಮಾಜಿ ಸಚಿವ ಭಗವಂತ ಖೂಬಾ ಎಲ್ಲಾ ಭಕ್ತರಲ್ಲಿ ವಿನಂತಿಸಿಕೊಂಡಿದ್ದಾರೆ.