15ಕ್ಕೆ ಭಾರತ ಸೇವಾದಳ ಪುನಶ್ಚೇತನ ಕಾರ್ಯಾಗಾರ
ಆಳಂದ:ಜು.11: ಜು.15ರಂದು ತಾಲೂಕು ಆಡಳಿತಸೌಧನಲ್ಲಿ ಭಾರತ ಸೇವಾದಳ ಆಯೋಜಿಸಿರುವ ತರಬೇತಿ ಕಾರ್ಯಾಗಾರಕ್ಕೆ ತಪ್ಪದೇ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಬಂಧಿತ ಶಿಕ್ಷಕರನ್ನು ನಿಯೋಜಿಸಿ ಕಳುಹಿಸಿಕೊಡಬೇಕು ಎಂದು ಆಯಾ ಶಾಲೆಗಳ ಮುಖ್ಯ ಶಿಕ್ಷರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ ಅವರು ಆದೇಶಿಸಿದ್ದಾರೆ.
ಈ ಕುರಿತು ಕಚೇರಿಯ ಸುತ್ತೋಲೆ ಪ್ರಕಟಿಸಿರುವ ಅವರು, ಪ್ರಾಥಮಿಕ ಮತ್ತು ಪ್ರೌಢ ಶಾಗಾಲೆಗಳಲ್ಲಿ, ಕಡ್ಡಾಯವಾಗಿ ಭಾರತ ಸೇವಾದಳ ಶಾಖಾ ನೋಂದಣಿ ಹಾಗೂ ನವೀಕರಣಗೊಳಿಸಲು ಒಂದು ದಿನದ ಶಿಕ್ಷಕರ ಪುನಶ್ಚೇತನÀ ಕಾರ್ಯಾಗರ ಶಿಕ್ಷಕ ಮತ್ತು ಶಿಕ್ಷಕಿಯರನ್ನು ನಿಯೋಜಿಸಿ ಕಳುಹಿಸಿಕೊಡಬೇಕು ಎಂದು ಹೇಳಿದ್ದಾರೆ.
2024-25 ನೇ ಸಾಲಿನ ಭಾರತ ಸೇವಾದಳ ಚಟುವಟಿಕೆಗಳ ಪ್ರಾರಂಭದ ಕುರಿತು ಹಾಗೂ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಭಾರತ ಸೇವಾದಳ ಶಾಖಾ ನೋಂದಣಿ ಹಾಗೂ ನವೀಕರಣಗೊಳಿಸಲು ಆಳಂದ ತಾಲೂಕ ಮಟ್ಟದ ಒಂದು ದಿನದ ಶಿಕ್ಷಕರ ಪುನಶ್ವೇತನ ಕಾರ್ಯಾಗರ ತರಬೇತಿಯನ್ನು ಜುಲೈ 15ರಂದು ಬೆಳಿಗೆ, 10:30 ಗಂಟೆಗೆ ತಾಲೂಕು ಆಡಳಿತ ಸೌಧ ಸಭಾಭವನ ಆಳಂದ ದಲ್ಲಿ ನಡೆಲಿದೆ ಎಂದು ಅವರು ತಿಳಿಸಿದ್ದಾರೆ.
ಸದರಿ ತರಬೇತಿಗೆ ತಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಅಥವಾ ಭಾರತ ಸೇವಾದಳ ತರಬೇತಿ ಪಡೆದಿರುª ವ್ಯಕ್ತಿಗಳನ್ನು ನಿಯೋಜನೆಗೊಂಡ ಶಿಕ್ಷಕ, ಶಿಕ್ಷಕಿಯರು ಭಾರತ ಸೇವಾದಳ ಸಮವಸ್ತ್ರದಲ್ಲಿಯೇ ಕಡ್ಡಾಯವಾಗಿ ಪಾಲ್ಗೊಂಡು, 2024-25 ನೇ ಸಾಲಿನ ತಮ್ಮ ಶಾಲೆಯ ಭಾರತ ಸೇವಾದಳ ಶಾಖಾ ನೋಂದಣಿ ಹಾಗೂ ನವೀಕರಣ ಶುಲ್ಕ ರೂ.100 ಹಾಗೂ ಶಿಬಿರ ಶುಲ್ಕ ರೂ.100 ಒಟ್ಟು ರೂ.200/ಗಳನ್ನು ಹಾಗೂ ತರಬೇತಿಗೆ ಶಿಕ್ಷಕರು ಬಂದು ಹೋಗುವ ವಾಸ್ತವಿಕ ಪ್ರಯಾಣ ವೆಚ್ಚವನ್ನು ಶಾಲೆಯ ಭಾರತ ಸೇವಾದಳ ಚಾಲ್ತಿ ನಿಧಿಯಿಂದ ಅಥವಾ ಶಾಲೆಯ ಯಾವುದೇ ಸಂಚಿತ ನಿಧಿಯಿಂದ ಅಥವಾ ಶಾಲೆಯ ಅನುದಾನದಿಂದ ಭರಿಸಿ ಮುಂದೆ ಮಕ್ಕಳಿಂದ ರೂ.05 ಸೇವಾದಳ ವಂತಿಕೆ ಪಡೆದುಕೊಂಡು ಸಂಬಂಧಪಟ್ಟ, ಖಾತೆಗೆ ಮರುಪಾವತಿಸಲು ಸಂಬಂಧಪಟ್ಟ ಶಾಲಾ ಮುಖ್ಯಸ್ಥರಿಗೆ ಅನುಮತಿ ನೀಡಿರುವ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಭಾರತ ಸೇವಾದಳ ಸಂಘಟಕರು ಈ ಆದೇಶದೊಂದಿಗೆ ಕಳಿಸಿರುವ ಶಾಖಾ ನವೀಕರಣ ಅರ್ಜಿ ಫಾರ್ಮ ಭರ್ತಿ ಮಾಡಿಕೊಂಡು 33 ಕ್ಕೂ ಮೇಲ್ಪಟ್ಟು ಭಾರತ ಸೇವಾದಳ ಮಕ್ಕಳ ದ್ವಿಪತ್ರಿ ಪಟ್ಟಿಯನ್ನು ಶಾಲಾ ಮುಖ್ಯಸ್ಮರ ಸಹಿ ಹಾಗೂ ಶಾಲಾ ಮೊಹರು (ಸೀಲು) ಹಾಕಿ ಕಡ್ಡಾಯವಾಗಿ ಸಲ್ಲಿಸುವುದು. ನಿಯೋಜನೆ ಒಳವಡುವ ಶಿಕ್ಷಕ, ಶಿಕ್ಷಕಿಯರನ್ನು ಸಕಾಲಕ್ಕೆ ಶಾಲೆಯಿಂದ ಬಿಡುಗಡೆ ಮಾಡಿ ಶಿಕ್ಷಕರ ಪುನಶ್ಚತನ ಕಾರ್ಯಾಗಾರಕ್ಕೆ ಹಾಜರಾಗುವ ವಿಷಯದಲ್ಲಿ ಸಂಬಂಧಿಸಿದ ಶಾಲಾ ಮುಖ್ಯವಾಧ್ಯಾಯರು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.