ಅಂತರ ಕಾಲೇಜು ಪಂದ್ಯಾವಳಿಗೆವಿಜ್ಞಾನೇಶ್ವರ ಕಾನೂನು ಕಾಲೇಜು ಆಯ್ಕೆ
ಕಲಬುರಗಿ:ಜು.11: ಕರ್ನಾಟಕ ರಾಜ್ಯ ಕಾನೂನು ಅಂತರ ಕಾಲೇಜು ಮಹಿಳೆಯರ ಟೆನ್ನಿ ಕೋಯಿಟ್ ಟುರ್ನಾಮೆಂಟ್ ರಾಯಚೂರಿನ ಸೇಥ್ ಚುನಿಲಾಲ್ ಕಾನೂನು ಕಾಲೇಜಿನಲ್ಲಿ ಜುಲೈ 11 ರಂದು ನಡೆಯಲಿರುವ ಪಂದ್ಯಾವಳಿಯಲ್ಲಿ ಕಲಬುರ್ಗಿಯ ವಿಜ್ಞಾನೇಶ್ವರ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವಾನಂದ ಲೇಂಗಟಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಗಿರೀಶ ಜಂಗೆ, ಕುದುರಿಹಾಲ್ ನಿಂಗಪ್ಪ, ವಾಣಿ ಮರಡಿ ಹಲವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.