ಆಳಂದ ಶರಣ ಮಂಟಪದಲ್ಲಿ 17ನೇ ಜಪಯಜ್ಞ ಆರಂಭ
ಆಳಂದ:ಜು.11: ಪಟ್ಟಣದ ಶರಣ ಮಂಟಪದ ಸದ್ಗುರು ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಶ್ರೀ ಚನ್ನಬಸವ ಪಟ್ಟದೇವರ 41ನೇ ಹುಟ್ಟುಹಬ್ಬದ ಆಚರಣೆ ನಿಮಿತ್ತ 17ನೇ ವರ್ಷದ ಜಪಯಜ್ಞೆ ಕಾರ್ಯಕ್ರಮವನ್ನು ಜು.8ರಿಂದ ಆರಂಭಗೊಂಡಿದ್ದು ಜು.28ರಂದು ಮಹಾಮಂಗಲ ಸಮಾರಂಭ ನಡೆಯಲಿದೆ.
ಚನ್ನಬಸವ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರತಿದಿನ ಬೆಳಗಿನ 5:15ಗಂಟೆಯಿಂದ 6:15ಗಂಟೆವರೆಗೆ ಜಪಯಜ್ಞೆ ನಡೆಯುತ್ತಿದೆ. ಮತ್ತು ಶಿವಶರಣರ ಶೀಲಾಮೂರ್ತಿಗೆ ವಿಶೇಷ ಪೂಜೆ ನಡೆಯುವುದು. ಜು. 21ರಂದು ಗುರುಪೂರ್ಣಿಮಾ ಆಚರಣೆ ನಡೆಯಲಿದೆ. 28ರಂದು ಜಪಯಜ್ಞೆ ಮುಕ್ತಾಯಗೊಳ್ಳಲಿದೆ.
ವಿಶ್ವ ಕಲ್ಯಾಣಕ್ಕಾಗಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗಾಗಿ ಶರಣಮಂಪಟದ ಪೀಠಾಧಿಪತಿ ಚನ್ನಬಸವ ಪಟ್ಟದೇವರು ಜೂನ್ ಮೊದಲು ವಾರದಲ್ಲಿ ಸಂಪನ್ನಗೊಳಿಸಿದ 63 ದಿನಗಳ ಕಠೋರ ಮತ್ತು ಮೌನಾಷ್ಠಾನ ವಾರದಲ್ಲೇ ಈಗ ಮಂಟಪದಲ್ಲಿ ಜಪಯಜ್ಞೆ ಆರಂಭಿಸುವ ಮೂಲಕ ಶ್ರೀಗಳ ಸಮಾಜೋ ಧಾರ್ಮಿಕ ಕಾರ್ಯದ ಲಾಭವನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಸದ್ಗುರು ಶ್ರೀ ರೇವಣಸಿದ್ಧ ಶಿವಶರಣರ ಮತ್ತು ಚನ್ನಬಸವ ಪಟ್ಟದೇವರ ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಶರಣಮಂಟಪದ ಭಕ್ತಮಂಡಳಿಯ ಮುಖಂಡ ಶ್ರೀಶೈಲ ಉಳ್ಳೆ ಅವರು ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ.