ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಪಿ.ಜಿ.ಗಳ ಮೇಲೆ ಲೋಕಾದಾಳಿ
ಧಾರವಾಡ, ಜು 11: ಬೆಳಗಾವಿ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಪಿ.ಜಿ.ಗಳ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯೋಜನಾಧಿಕಾರಿ ಶೇಖರಗೌಡರಿಗೆ ಸೇರಿದ ಇಲ್ಲಿನ ರಾಧಾಕೃಷ್ಣನಗರ ಹಾಗೂ ಕೆಸಿಡಿ ಬಳಿ ಇರುವ ಪಿ.ಜಿ.ಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ಬೆಳಂಬೆಳಿಗ್ಗೆ ದಾಳಿ ನಡೆಸಿದರು.
ಶೇಖರಗೌಡ ಅವರು ಧಾರವಾಡ, ಬೆಳಗಾವಿ, ಕೊಪ್ಪಳ ಸೇರಿ ಹಲವು ಕಡೆ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಕುರಿತಂತೆ ಲೋಕಾಯುಕ್ತ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.