ಸರ್ವರ್ ಸಮಸ್ಯೆ ಸರಿಪಡಿಸುವಂತೆ ಮನವಿ
ಶಿರಹಟ್ಟಿ,ಜು.11: ಸರ್ವರ್ ಸಮಸ್ಯೆ ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಪೂರೈಸುವ ಮೂಲಕ ಸರಕಾರ ಮೂಲ ಉದ್ದೇಶವನ್ನುಈಡೇರಿಸಲು ಮುಂದಾಗಬೇಕೆಂದು ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ತಾಲೂಕ ಆಧ್ಯಕ್ಷ ಹಸನ್ ತಹಶೀಲ್ದಾರ ಆಗ್ರಹಿಸಿದರು.
ಅವರು ಸಂಘದ ಸದಸ್ಯರೊಂದಿಗೆ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಅನೀಲ ಬಡಿಗೇರ ಇವರಿಗೆ ಮನವಿ ಸಲ್ಲಿಸಿಮಾತನಾಡಿದರು,
ಸದ್ಯ ಸರಕಾರ ಪಡಿತರ ಚೀಟಿಗೆ ಹಾಗೂ ಹೆಸರು ಸೇರ್ಪಡೆಗೆ ಅರ್ಜಿ ಹಾಕಲು ಅಲ್ಪಸ್ವಲ್ಪ ಸಮಯ ನೀಡಿ ಸರ್ವರ ಸಮಸ್ಯೆ ಯಾದರೆ ಹೇಗೆ ? ಹೆಚ್ಚಿನ ಸಮಯ ನೀಡಬೇಕು. ಎಷ್ಟೋ ಬಡ ಕುಟುಂಬಗಳಿಗೆ ಇದು ಅನುಕೂಲವಾಗಲಿದೆ. ಆರೋಗ್ಯ ಸಮಸ್ಯೆಯಿಂದ ಬಳುತ್ತಿರುವ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಸಮಸ್ಯೆಯನ್ನು ಬಗಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಸತೀಶ ನರಗುಂದ, ಶರೀಪ್ ಗುಡಿಮನಿ, ಸಾಧಿಕ ಮುಖಗುಂದಕ, ಶಿವಾನಂದ ಸುಲ್ತಾನಪೂರ, ಹನುಮಂತಪ್ಪ ಹೆಚ್. ವಾಸೀಮ ಬೈರಕದಾರ ಮುಂತಾಧವರು ಉಪಸ್ಥಿತರಿದ್ದರು.