ಪರಿಸರ ಕಾಳಜಿ ಅತ್ಯಗತ್ಯ
ಶಿರಹಟ್ಟಿ,ಜು.11: ಪ್ರಸ್ತುತ ದಿನಮಾನದಲ್ಲಿ ಮಾರಣಾಂತಿಕ ಕಾಯಿಲೆಗಳು ಕಂಡುಬರುತ್ತಿದ್ದು, ಆರೋಗ್ಯ ಯುತ ಜೀವನಕ್ಕೆ ಪರಿಸರ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರದ ಕಾಳಜಿ ಹೊಂದುವುದು ಅಗತ್ಯವಿದೆ ಎಂದು ಶಾಸಕ ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಎಫ್.ಬಿ.ಪೂಜಾರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜಿನ ಆವ ರಣದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ಶುದ್ದವಾಗಿದ್ದಷ್ಟು ಮನುಷ್ಯನ ಜೀವನ ಆರೋಗ್ಯಕರವಾಗಿರುತ್ತದೆ. ಯಾವುದೇ ರೋಗ ರುಜಿನಗಳಿಲ್ಲದೇಸ್ವಚ್ಛಂದವಾಗಿ ಬದುಕಲು ಕಾರಣವಾಗುತ್ತದೆ. ಪ್ರತಿಯೊಬ್ಬರೂ ಕೊಳೆಯುವ ಕಸ ಮತು ಕೊಳೆಯಲಾರದ ಕಸದ ಬಗ್ಗೆ ಜಾಗೃತಿ ಹೊಂದಿ ಕೊಳೆಯಲಾರದ ವಸ್ತುಗಳನ್ನು ಬಳೆಕ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳಲ್ಲಿ ಪರಿಸರದ ಕಾಳಜಿಯ ಜಾಗೃತಿ ಹೊಂದುವುದು ಅಗತ್ಯವಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಬಿ.ಜಿ.ಗಿರಿತಿಮ್ಮಣ್ಣವರ ಮಾತನಾಡಿ, ಅರಣ್ಯ ಪ್ರದೇಶಗಳನ್ನು ಹೆಚ್ಚಿಸಬೇಕು. ಪ್ರತಿಯೊಬ್ಬರೂ ಸಸಿಗಳನ್ನು ನೆಡುವ ಮೂಲಕ ಪರಿಸರದ ಕಾಳಜಿಯನ್ನು ಮೆರೆಯಬೇಕು. ಇರುವ ಅರಣ್ಯ ಪ್ರದೇಶ ನಾಶವಾಗದಂತೆ ಕಾಪಾಡಿಕೊಳ್ಳವುದು ಅಗತ್ಯವಿದೆ ಎಂದು ಹೇಳಿದರು.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಮ್.ಡಿ.ಕೌಷಿಕ್, ರಮೇಶ, ಉಪನ್ಯಾಸಕರಾದ ಎಸ್.ಎವಾಯ್.ಮುಜಾವರ, ರಾಜೇಶ್ವರ ಸಂಶಿ, ಪರಿಮಳಾ, ಎನ್.ಟಿ.ಮಾಳೋದೆ, ಚಿನ್ಮಯಿ ಕಪ್ಪತ್ತನವರ, ವಿಜಯಶ್ರೀ, ಗೌತಮ ಕಪ್ಪತ್ತನವರ, ಶ್ರೀನಿವಾಸ ಕಪಟಕರ, ನಟರಾಜ ರಾನಡೆ, ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.