ವೈದ್ಯರತ್ನ ಪ್ರಶಸ್ತಿ ಪುರಸ್ಕೃತಡಾ.ಬಸರೆಡ್ಡಿಗೆ ಗೌರವ ಸನ್ಮಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.11: ಇತ್ತೀಚೆಗೆ ತುಮಕೂರಿನಲ್ಲಿ ನಡೆದ ಕಲ್ಪತರು ವೈದ್ಯೋತ್ಸವದಲ್ಲಿ ಉತ್ತಮ ಸೇವೆಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ   ಬಳ್ಳಾರಿ ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ ಅವರಿಗೆ “ವೈದ್ಯರತ್ನ “ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಹಿನ್ನಲೆಯಲ್ಲಿ ಬಳ್ಳಾರಿಯ ಮಹಾನಗರ ಪಾಲಿಕೆಯಪ್ರತಿ ಪಕ್ಷದ ನಾಯಕ ಸಿ.ಇಬ್ರಾಹಿಂ ಬಾಬು ಮತ್ತು   ಬಿಜೆಪಿಯ ಸದಸ್ಯರಾದಶ್ರೀನಿವಾಸ್ ಮೋತ್ಕರ್,  ಡಾ.ಕೆ.ಎಸ್.ಅಶೋಕ್ ಕುಮಾರ್, ಗುಡಿಗಂಟಿ  ಹನುಮಂತಪ್ಪ, ಹನುಮಂತಪ್ಪ , ಮುಖಂಡರಾದ ಎಸ್.ಮಲ್ಲನಗೌಡ, ಸುರೇಂದ್ರ, ಮೊದಲಾದವರು ಬಸರೆಡ್ಡಿ ಅವರನ್ನು ಗೌರವಿಸಿ ಸನ್ಮಾನಿಸಿದ್ದಾರೆ.
ಈ ವೇಳೆ ಮಾತನಾಡಿದ ಇಬ್ರಾಹಿಂ ಬಾಬು ಅವರು ಜಿಲ್ಲಾ ಆಸ್ಪತ್ರೆಲ್ಲಿ ವೈದ್ಯ ಸಮೂಹ ಹಾಗು ಸಿಬ್ಬಂದಿ ಜೊತೆ ಉತ್ತಮ ಚಿಕಿತ್ಸೆ ನೀಡುತ್ತಿರುವ ಇವರ ಸೇವೆ ಜನತೆಗೆ ಮತ್ತಷ್ಟು ವರ್ಷ ದೊರೆಯಲಿ. ಇಂತಹ ಪ್ರಶಸ್ತಿಗಳು ಮತ್ತಷ್ಟು ದೊರೆಯಲಿಎಂದು ಆಶಿಸಿದರು.