ಅಕ್ಕಿ ಬಸ್ಸಮ್ಮ ತೋಟಪ್ಪ ಟ್ರಸ್ಟ್ ವತಿಯಿಂದ ಉಚಿತ ನೋಟು ಬುಕ್ ವಿತರಣೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.11 ತಾಲೂಕಿನ ತಂಬ್ರಹಳ್ಳಿ ಗ್ರಾಮದ ಕೊಡಗೈ ದಾನಿ ಅಕ್ಕಿ ಕೊಟ್ರಪ್ಪ ಕುಟುಂಬ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗೆ ಮಂಗಳವಾರ  ನೋಟ್ ಬುಕ್ ವಿತರಿಸಿದರು.
 ಪಟ್ಟಣದ ಗಂಭೀ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳಿಗೆ ಅಕ್ಕಿ ಬಸಮ್ಮ ತೋಟಪ್ಪ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ 
 ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮದ ಉದ್ಘಾಟನೆಯನ್ನು  ನೆರವೇರಿಸಿ ಬಿಇಓ ಮೈಲೇಶ್ ಬೇವೂರ್  ಮಾತನಾಡಿ ಹಣದಿಂದ ಶ್ರೀಮಂತ ಅಂತ ಹೇಳುವುದು ತಪ್ಪು. ಯಾರು ದಾನ ಧರ್ಮ ಮಾಡುತ್ತಾರೋ ಅವರೇ ಶ್ರೀಮಂತರು ಈ ಒಂದು ಕಾರ್ಯವನ್ನು ಅಕ್ಕಿ ಕೊಡ್ರಪ್ಪ ಮತ್ತು ಕುಟುಂಬ ಟ್ರಸ್ಟ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ನೋಟ್ ಬುಕ್ ಉಚಿತವಾಗಿ ನೀಡುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
 ತಾಲೂಕ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ, ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ಅಕ್ಕಿ ಶಿವಕುಮಾರ್ , ಜಿ ಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿದರು
 7 ಸಾವಿರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಿದರು.
 ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಮಲ್ಲಪ್ಪ, ಇಸಿಓ ಶಿವಲಿಂಗ ಸ್ವಾಮಿ, ಬಿ ಆರ್ ಪಿ ಪರಮೇಶ್ವರಯ್ಯ  ಸೊಪ್ಪಿನ್ ಮಠ ವೆಂಕಟೇಶ್ ನಾಯ್ಕ್ ಕುಮಾರ್ ಎಚ್, ಜನಾರ್ದನ  ಮಲ್ಲಿಕಾರ್ಜುನ ಸುಶೀಲ ಭಾರತಿ ಮಲ್ಲೇಶ್ ನಾಯ್ಕ್ ಇತರರಿದ್ದರು.