ಹಬೋಹಳ್ಳಿ : ಕಳೆದಿದ್ದ ಮೊಬೈಲ್ ಗಳು ಮಾಲೀಕರಿಗೆ ವಾಪಸ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.11 ಕಳೆದುಕೊಂಡ ಮೊಬೈಲುಗಳನ್ನು ಮಾಲೀಕರನ್ನು ಪತ್ತೆ ಮಾಡಿ ಅವರಿಗೆ ವಾಪಸ್ ನೀಡುವ ಮೂಲಕ ಪೊಲೀಸರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
 ಕಳೆದು ಹೋದ 45 ಮೊಬೈಲ್ ಗಳನ್ನು ಪತ್ತೆ ಹಚ್ಚಿದ ಸ್ಥಳೀಯ ಪೊಲೀಸರು ಮೊಬೈಲ್ ಕಳೆದುಕೊಂಡವರ ಸಿಇಐಸಿ ಪೋರ್ಟಲ್ ಆ್ಯಪ್ ನಲ್ಲಿ ಪತ್ತೆ ಹಚ್ಚಿ ವಶಪಡಿಸಿಕೊಂಡ ಮೊಬೈಲ್ ಗಳನ್ನು ವಾರಸುದಾರರಿಗೆ ವಾಪಸ್ ನೀಡಲಾಯಿತು ಎಂದು ಪಿಎಸ್ಐ ಬಸವರಾಜ್ ಅಡವಿಬಾವಿ ತಿಳಿಸಿದರು.
 ಸಿಪಿಐ ವಿಕಾಸ್ ಲಂಬಾಣಿ, ಕ್ರೈಂ ಪಿಎಸ್ಐ ಅಬ್ಬಾಸ್ ಪಿಸಿಗಳಾದ ಸಿದ್ದೇಶ್, ಮಲ್ಲೇಶ್ ನಾಯ್ಕ್, ಹನುಮಂತಪ್ಪ ಮಹೇಶ ಗುರುಬಸವರಾಜ ಕುಮಾರ್ ನಾಯ್ಕ್  ರಾಮಾಂಜನೇಯ   ಇದ್ದರು