ತನಿಖೆಯಲ್ಲಿ ವಾಲ್ಮೀಕಿ ನಿಗಮದ ಪ್ರಕರಣ ವರದಿ ಬರುವವರೆಗೂ ಸುಮ್ಮನಿರಿ ಬಿಜೆಪಿಗೆ ಜಾರ್ಜ್ ತಾಕೀತು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.11: ಬಿಜೆಪಿಯರು  ವಾಲ್ಮೀಕಿ ಹಗರಣದ ಬಗ್ಗೆ ವಿನಾಕಾರಣ ತಪ್ಪು ತಪ್ಪು  ಹೇಳಿಕೆ ನೀಡುತ್ತ ಪ್ರಕರಣವನ್ನು ಸಿಬಿಐಗೆ ನೀಡಿ ಎನ್ನುತ್ತಿದ್ದಾರೆ. ಅನೇಕ  ನಾಯಕರು ಬೇಲ್ ಮೇಲೆ ಓಡಾಡುತ್ತಿದ್ದಾರೆ. ಅವರೇನು ಸಾಚಾಗಳಾ, ಸಧ್ಯ ನಮ್ಮ ಎಸ್ ಐಟಿ ತಂಡ ತನಿಖೆ ನಡೆಸುತ್ತಿದೆ. ಅದು ವರದಿ ನೀಡಲಿ.
ಅಲ್ಲಿವರೆಗೆ ಬಿಜೆಪಿಯವರು ಸುಮ್ಮನಿರುವುದು ಒಳಿತು . ಪ್ರಕರಣದಲ್ಲಿ  ಮಾಜಿ ಸಚಿವ ನಾಗೇಂದ್ರ ಅವರ ಪಾತ್ರವಿಲ್ಲ ಎಂಬಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಬ್ಯಾಟ್ ಬೀಸಿದ್ದಾರೆ.
ಅವರು ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆಯ ಪ್ರಕರಣ ಈಗಾಗಲೇ ಎಸ್‌ಐಟಿ ವಿಚಾರಣೆಯಲ್ಲಿದೆ. ಹೀಗಿರುವಾಗ ಇಡಿ ದಾಳಿ ಅಗತ್ಯವಿರಲಿಲ್ಲ. ಆದರೂ ಮಾಡಿದ್ದಾರೆ. ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಇಡಿ, ಎಸ್‌ಐಟಿಯೂ ತಮ್ಮ ಪಾಡಿಗೆ ತಾವು ಕೆಲಸ ಮಾಡಲಿ ಅವುಗಳ  ವರದಿ ಬರೋವರೆಗೂ ಕಾಯೋಣ. ತನಿಖೆಯ ವರದಿ ಬಂದ ಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿದೆಂದರು. 
ಎಸ್‌ಐಟಿಯವರು ಹೇಳಿದ್ದಾರಾ?ಎಸ್‌ಐಟಿ ತನಿಖೆಗೆ ನಾಗೇಂದ್ರ ಸಹಕಾರ ಮಾಡ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಾರ್ಜ್ ನಾಗೇಂದ್ರ ಅವರು ಸಹಕಾರ ಮಾಡ್ತಿಲ್ಲ ಅಂತಾ ಎಸ್‌ಐಟಿಯವರು ಹೇಳಿದ್ದಾರಾ?  ನಾನು ಗೃಹ ಸಚಿವನಾಗಿದ್ದವನು ಅಧಿಕಾರಿಗಳು ಏನು ಕೆಲಸ ಮಾಡುತ್ತಾರೆ ಎನ್ನುವುದು ಗೊತ್ತಿದೆಂದ ಅವರು  ಪ್ರಕರಣದಿಂದ  ಸರ್ಕಾರಕ್ಕೆ ಯಾವುದೇ ಮುಜುಗರ ಇಲ್ಲವೆಂದರು.
ಭ್ರಮೆಯಲ್ಲಿದ್ದಾರೆ:
ಬಿಜೆಪಿಯವರು ಮತ್ತೆ ರಾಜ್ಯದಲ್ಲಿ ಅಧಿಕಾರ ಪಡೆಯು ಭ್ರಮೆಯಲ್ಲಿದ್ದಾರೆ.ಸರ್ಕಾರ ಏನೂ ಬೀಳೋದಿಲ್ಲ, ನಮಗೆ ಜನ ಬೆಂಬಲ ಕೊಟ್ಟಿದ್ದಾರೆ. ಸರ್ಕಾರ ಬೀಳುತ್ತೆ ಅನ್ನೋದು ಬಿಜೆಪಿಯವ್ರ ಹಗಲು ಕನಸು. ನಮ್ಮ ಸಿಎಂ, ಡಿಸಿಎಂ ನಾಯಕರು ಒಳ್ಳೆ ಕೆಲಸ ಮಾಡ್ತಿದ್ದಾರೆಂದರು.
ಕೇಂದ್ರದಲ್ಲಿ ಸ್ಪಷ್ಟ ಬಹುಮತದಿಂದ ಗೆಲ್ಲೋದಕ್ಕೆ ಆಗಿಲ್ಲ, ಅದನ್ನ ಮುಚ್ಚಿಕೊಳ್ಳೋದಕ್ಕೆ  ಹಗರಣ ಈ ಹಗರಣ ಎಂದು ಮಾತಾಡ್ತಿದ್ದಾರೆ.  ವಾಲ್ಮೀಕಿ ಹಗರಣ ಸಿಬಿಐಗೆ ಕೊಡುವಂತೆ ಬಿಜೆಪಿ ನಾಯಕರು ಯಾಕೆ ಸಿಬಿಐಗೆ ಕೊಡಿ ಅಂತಾ ಹೇಳುತ್ತಿದ್ದಾರೆ ? ಇಲ್ಲಿ ನಮ್ಮ ಅಧಿಕಾರಿಗಳು ದಕ್ಷರಿಲ್ವಾ? ಸಿಬಿಐ ಕೇಂದ್ರದ್ದು, ಅದಕ್ಕೆ ಸಿಬಿಐಗೆ ಕೆ ಅಂತಾ ಹೇಳ್ತಿದ್ದಾರೆ. ಬಿಜೆಪಿ ನಾಯಕರ ಮೇಲೆ ಯಾವುದೇ ಕೇಸ್‌ಗಳಿಲ್ವಾ ಎಂದರು.
ಮೂಡಾ ಹಗರಣ : ಮೂಡಾ ಹಗರಣ ಯಾರ ಕಾಲದಲ್ಲಿ ಆಗಿದೆ? ಬಿಜೆಪಿಯವರ ಕಾಲದಲ್ಲಿ ಆಗಿದೆ. ಅವರ ಕಾಲದಲ್ಲೇ ಎಲ್ಲಾ ಭ್ರಷ್ಟಾಚಾರ ಆಗಿದೆ. ಆದ್ರೆ ಈಗ ಅವೇ ಪ್ರೊಟೆಸ್ಟ್ ಮಾಡ್ತಿದ್ದಾರೆ. ಕರೆಂಟ್ ಬಿಲ್ ಆರಂಭದಲ್ಲಿ ಜಾಸ್ತಿ ಮಾಡಿದ್ದೇ ಬಿಜೆಪಿಯವರು.
ನೂರು ಸುಳ್ಳು ಹೇಳಿ, ಅದನ್ನ ಸತ್ಯ ಮಾಡೋದು ಬಿಜೆಪಿಯವರ  ಜಾಯಮಾನವಾಗಿದೆ. ಮೂಡಾದಲ್ಲಿಯಾ  ಯಾರೇ ತಪ್ಪು ಮಾಡಿದ್ರೂ ತನಿಖೆ ಮುಗಿಯುವವರೆಗೂ ಕಾಯೋಣವೆಂದರು.
ಈ ವೇಳೆ ಪಕ್ಷದ ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮೊದಲಾದವರು ಇದ್ದರು.