ಜೇವರ್ಗಿಯಲ್ಲಿ ಜನಸಂಖ್ಯಾ ಜಾಗೃತಿ ಜಾಥಾ
ಕಲಬುರಗಿ :ಜು.11: ಜೇವರ್ಗಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕಾ ಸಾರ್ವಜನಿಕ ಆಸ್ಪತ್ರೆ ಮತ್ತು ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ “ವಿಶ್ವ ಜನಸಂಖ್ಯೆ ದಿನಾಚರಣೆ” ಪ್ರಯುಕ್ತ ಗುರುವಾರ ಜರುಗಿದ ಜಾಗೃತಿ ಜಾಥಾಕ್ಕೆ ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಅಂಬಾರಾಯ ತಂಗಾ ಅವರು ಚಾಲನೆ ನೀಡಿದರು. ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಶಾಮರಾವ ಕಗ್ಗನಮಡಿ, ಪ್ರಾಚಾರ್ಯರಾದ ರವೀಂದ್ರಕುಮಾರ ಸಿ. ಬೆಟಗೇರಿ, ಎನ್. ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ನಯಿಮಾ ನಾಹಿದ್, ಮಲ್ಲಿಕಾರ್ಜುನ ದೊಡ್ಡಮನಿ, ಶಂಕ್ರೆಪ್ಪ ಹೊಸದೊಡ್ಡಿ, ರೇಣುಕಾ ಚಿಕ್ಕಮೇಟಿ, ಉಮಾದೇವಿ ಮಾಲಿಪಾಟೀಲ, ಮಹಮ್ಮದ್ ಅಬ್ದುಲ್ ಸಮದ್, ಪ್ರ .ದ.ಸ ನೇಸರ ಎಂ.ಬೀಳಗಿಮಠ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.