ಇದು ನಿಮ್ಮವಾಣಿ
ಡಾ.ರಾಜಕುಮಾರ್ ಜೊತೆ  ಬಳ್ಳಾರಿ ರಂಗಭೂಮಿಯ ದಿಗ್ಗಜರು
ಮಾನ್ಯರೇ,
ಇದು 50 ವರ್ಷಗಳ ಹಿಂದಿನ ಭಾವಚಿತ್ರ  1970 ರ ದಶಕದಲ್ಲಿ ಮದರಾಸಿನ ಸರಸ್ವತಿ ಥಿಯೇಟರಿನಲ್ಲಿ ಪಂ. ಪಂಚಾಕ್ಷರ ಗವಾಯಿಗಳ ಪುಣ್ಯ ಸ್ಮರಣೆ ಸಂದರ್ಭದಲ್ಲಿ ತೆಗೆದಿಧದು. ಇದರಲ್ಲಿರುವವರು  ಉತ್ತನೂರು ಪಂಪಾಪತಿ, ಕಂಪ್ಲಿ ವಾದಿರಾಜಚಾರ್, ವೈ. ರಾಘವೇಂದ್ರ ರಾವ್, ಡಾ. ರಾಜಕುಮಾರ್, ಸಿರಿಗೇರಿ ನಾಗನಗೌಡ, ಮದಿರೆ ಮರಿಸ್ವಾಮಿ, ಮದಿರೆ ವೀರೇಶ್.
ಈ ಕಾರ್ಯಕ್ರಮಕ್ಕೆ ಪಂ. ಬಸವರಾಜ ರಾಜಗುರು,  ಪಿ.ಬಿ. ಶ್ರೀನಿವಾಸ್,  ವೈಜಯಂತಿ ಮಾಲಾ ಅವರ ತಾಯಿ ಆಗಮಿಸಿದ್ದರಂತೆ.
ಕೈಯಲ್ಲಿ ಟೇಪ್ ರೆಕಾರ್ಡರ್ ಹಿಡಿದಿರುವ ಮದಿರೆ ವೀರೇಶ್ ಅವರೇ ಬಳ್ಳಾರಿ ಕಲಾವಿದರು ಅಲ್ಲಿ ಸೇರಲು ಕಾರಣಕರ್ತರು.
ಈ ಮದಿರೆ ವೀರೇಶ್ ಉತ್ತಮ ಪಿಟೀಲು ವಾದಕರಾಗಿ ಮದರಾಸು ಸೇರಿ ಸಿನಿಮಾರಂಗದಲ್ಲಿ ನೆಲೆನಿಂತಿದ್ದರು. ಅವರು ಸಿನಿಮಾ ಸಂಗೀತ ನಿರ್ದೇಶಕ ಕೆ.ವಿ.ಮಹಾದೇವನ್, ಶ ರಾಜನ್- ನಾಗೇಂದ್ರ ಅವರ ವಾದ್ಯಗೋಷ್ಠಿಯಲ್ಲಿದ್ದರು.  ಸತ್ಯಂ ಅವರು ಹಾಡುಗಳ ಧ್ವನಿಮುದ್ರಣಕ್ಕೆ ಮೂವತ್ತು ಪಿಟೀಲು ವಾದಕರನ್ನು ಸೇರಿಸುತ್ತಿದ್ದು, ಆ ಗೋಷ್ಠಿಯಲ್ಲಿ  ಮದಿರೆ ವೀರೇಶ್ ಸ್ಥಾನ ಪಡೆದಿದ್ದರು.
ಮದಿರೆ ವೀರೇಶ್ ಸಂಗೀತ ಕಲಾವಿದರಾಗಲು  ಮದಿರೆ ಮರಿಸ್ವಾಮಿಯವರೇ ಮೂಲ ಕಾರಣ. ವೀರೇಶರನ್ನು 1952 ರಲ್ಲಿ ಗದಗಿನ ಪುಟ್ಟರಾಜ ಗವಾಯಿಗಳ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ಸೇರಿಸಿದ್ದ  ಮರಿಸ್ವಾಮಿಯವರಿಗೆ ಆಗ ವಯಸ್ಸು 12,  ವೀರೇಶರಿಗೆ 10 ವರ್ಷ. ಶ ಮರಿಸ್ವಾಮಿಯವರು ಆಶ್ರಮ ಸೇರಿದ್ದು 1950 ರಲ್ಲಿ. ಈಗ 86 ವರ್ವಯಸ್ಸಾಗಿರುವ  ಮದಿರೆ ಮರಿಸ್ವಾಮಿಯವರು ಸುಮಾರು 75 ವರ್ಷಗಳ ಹಳೆಯ ಸಂದರ್ಭಗಳನ್ನು  ಪ್ರಯಾಸದಿಂದ ನೆನಪು ಮಾಡಿಕೊಂಡುಈ ಭಾವಚಿತ್ರ ವಿವರ ವಿಷಯ ತಿಳಿಸಿದ್ದಾರೆ.
ಕೆ. ಜಗದೀಶ್,
ಅಭಿನಯ ಕಲಾಕೇಂದ್ರ, ಬಳ್ಳಾರಿ.