ಅನ್ಯ ಜಾತೀಯರಿಗೆ ವೀರಶೈವ ಮಹಾಸಭಾದ ಸದಸ್ಯತ್ವ: ಪಂಚಾಕ್ಷರಪ್ಪ ಆರೋಪ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.11: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ. ವೀರಶೈವ ಲಿಂಗಾಯತರಿಗೆ ಮಾತ್ರ ಸದಸ್ಯತ್ವ ನೀಡಬೇಕು ಎಂಬ ಬೈಲಾ ನಿಯಮ ಇದ್ದರೂ, ಬಳ್ಳಾರಿ ಜಿಲ್ಲೆಯಲ್ಲಿ ಅಲ್ಲದವರಿಗೂ ಸದಸ್ಯತ್ವ ನೀಡಲಾಗಿದೆ.  ಇಂತಹವರಗೆ ನಡೆಯಲಿರುವ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡಬಾರದು ಎಂದು ಜಿಲ್ಲಾ ಅಧ್ಯಕ್ಷ ಸ್ಥಾನದ ಸ್ಪರ್ಧಿ ಬಿಚ್ಚಗಲ್ಲು ಪಂಚಾಕ್ಷರಪ್ಪ ಹೇಳಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ. ಈ ಬಗ್ಗೆ ಚುನಾವಣಾಧಿಕಾರಿ ದ್ಯಾಬೇರಿ ಅವರಿಗೆ ದೂರು  ಸಲ್ಲಿಸಿದರೂ ಅವರಿಂದ ಪ್ರತಿಕ್ರಿಯೆ ಇಲ್ಲ. ಈ ಬಗ್ಗೆ ಪತ್ರ ಬರೆದು  ರಾಜ್ಯ ಅಧ್ಯಕ್ಷರೂ, ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲಾಗಿದೆಂದರು.
ಈ ಹಿಂದೆ ಬಸವ ಭನವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಿರಿವಾರದ ವೀರಭದ್ರಪ್ಪ ಮತ್ತು ನಾನು ವೀರಶೈವ ಸಮುದಾಯರಲ್ಲದ ಬಳ್ಳಾರಿ ನಗರದ ಶಾಸಕ ನಾರಾ ಭರತ ರೆಡ್ಡಿ ಅವರನ್ನು ವೀರಶೈವ ಲಿಂಗಾಯತ ಮಹಾಸಭಾದ ಸಮಾವೇಶದಲ್ಲಿ ಸನ್ಮಾನ, ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಪ್ರಶ್ನೆ ಮಾಡಿದ್ದೇ ನಾವೆಲ್ಲ ಜಿಲ್ಲಾ ಸಮಿತಿಯಿಂದ ಹೊರಗೆ ಬಂದಿದ್ದು ಎಂದು ಹೇಳಿದರು.
ವೀರಶೈವ ರೆಡ್ಡಿ ಜಾತಿಗೂ ಮತ್ತು ಕೇವಲ ರೆಡ್ಡಿ ಸಮುದಾಯಕ್ಕೂ ಸಂಬಂಧ ಇಲ್ಲ. ಅಂತಹವರಿಗೂ ಸದಸ್ಯತ್ವ ನೀಡಿದೆ. ವೀರಶೈವರು ಸಸ್ಯಹಾರಿಗಳು, ಪ್ರತ್ಯೇಖ ಸ್ವಾಮಿಗಳು, ಶವ ಸಂಸ್ಕಾರ ಪದ್ದತಿ ಇರುತ್ತದೆ. ಆದರೆ ವೈಷ್ಣವ ಪರಂಪರೆಯ ರೆಡ್ಡಿ ಸಮುದಾಯಕ್ಕೆ ಚುನಾವಣೆ ದೃಷ್ಟಿಯಿಂದ ಸದಸ್ಯತ್ವವನ್ನು ಹಿಂದಿನ ಅಧ್ಯಕ್ಷ ಚಾನಾಳ್ ಶೇಖರ್ ನೀಡಿದ್ದಾರೆಂದು ಸದಸ್ಯ ಕೋಳೂರು ಚಂದ್ರಶೇಖರಗೌಡ ಆರೋಪಿಸಿದ್ದಾರೆ.
ಈ ಬಗ್ಗೆ ದಾಖಲೆಗಳನ್ನು ನೀಡಿ, ಕುರುಗೋಡು ತಾಲೂಕಿನ ಬೈಲೂರು ಗ್ರಾಮದಲ್ಲಿ ವೀರಶೈವರಲ್ಲದ ರೆಡ್ಡಿ ಸಮಯದಾಯದ 40 ಜನರಿಗೆ ಸದಸ್ಯತ್ವ ನೀಡಿದೆ.  ಇಂತಹವರು ಮತದಾನ ಮಾಡಲು ಬಂದಾಗ ಆಕ್ಷೇಪದಿಂದ ಗಲಾಟೆ ಆಗುವ ಸಂದರ್ಭ ಇರುತ್ತದೆಂದು ಎಚ್ಚರಿಕೆ ನೀಡಿದರು. 
ಈ ರೀತಿ 500 ರಿಂದ ಒಂದು ಸಾವಿರ ಜನ ವೀರಶೈವರಲ್ಲದವರಿಗೆ ಸದಸ್ಯತ್ವ ನೀಡಿದ್ದಾರೆಂಬ ಅನುಮಾನ ಇದೆ. ಈ ವಿಷಯದಲ್ಲಿ ಹಿರಿಯರು ನಮ್ಮ ಜಾತಿ  ಧರ್ಮದವರನ್ನು ರಕ್ಷಿಸಿ ಎಂದಿದ್ದಾರೆಂದರು.
ನಾವು ವೀರಶೈವ ಲಿಂಗಾಯತ ಸಮುದಾಯದವರಿಗೆ ಮಾತ್ರ ಸದಸ್ಯತ್ವ ನೀಡುತ್ತೇವೆ. ಇದಕ್ಕೆ ಅವಕಾಶ ನೀಡಿದವರಿಗೆ ಮತ ನೀಡಬೇಡಿ ಎಂದು ಮತದಾರರಲ್ಲಿ ಮನವಿ ಮಾಡುವುದಾಗಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಹಾಸಭಾದ ಸದಸ್ಯರಾದ  ಅರುಣ್ ಕುಮಾರ್ ದಾಸಾಪುರ್,
ಶಂಕರ್ ಮೂರ್ತಿ, ಬಾಣಾಪುರ ನಾಗಾರಜ್ ಗೌಡ, ಕಮ್ಮರಚೇಡು ಮಂಜುನಾಥ, ಸಂಡೂರು ವೀರೇಶ್, ಮದಿರೆ ಕುಮಾರಸ್ವಾಮಿ, ಎಸ್.ಎಂ.ನಾಗರಾಜ ಸ್ವಾಮಿ ಸಿರಿಗೇರಿ, ಶರಣಬಸನಗೌಡ ಉಪ್ಪಾರಹೊಸಳ್ಳಿ, ಜೋಳದರಾಶಿ ಲೋಕೇಶರೆಡ್ಡಿ ಮೊದಲಾದವರು ಇದ್ದರು.